ನದಿಗೆ ಉರುಳಿಬಿದ್ದ ಬಸ್ 
ವಿದೇಶ

ಪಾಕಿಸ್ತಾನ: ಸಿಂಧೂ ನದಿಗೆ ಬಸ್ ಉರುಳಿಬಿದ್ದು 16 ಮಂದಿ ಸಾವು

ಡೈಮರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬಸ್ ಅಸ್ಟೋರ್‌ನಿಂದ ಪಂಜಾಬ್‌ನ ಚಕ್ವಾಲ್ ಜಿಲ್ಲೆಗೆ ತೆರಳುತ್ತಿದ್ದಾಗ ಟೆಲ್ಚಿ ಸೇತುವೆಯಿಂದ ನದಿಗೆ ಬಿದ್ದಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಪೇಶಾವರ: ಪಾಕಿಸ್ತಾನದ ಗಿಲ್ಗಿಟ್-ಬಾಲ್ಟಿಸ್ತಾನ್ ಪರ್ವತ ಪ್ರದೇಶದಲ್ಲಿ ಮದುವೆಗೆ ಅತಿಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಸಿಂಧೂ ನದಿಗೆ ಬಿದ್ದ ಪರಿಣಾಮ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದು, ಓರ್ವ ಮಹಿಳೆ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಡೈಮರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬಸ್ ಅಸ್ಟೋರ್‌ನಿಂದ ಪಂಜಾಬ್‌ನ ಚಕ್ವಾಲ್ ಜಿಲ್ಲೆಗೆ ತೆರಳುತ್ತಿದ್ದಾಗ ಟೆಲ್ಚಿ ಸೇತುವೆಯಿಂದ ನದಿಗೆ ಬಿದ್ದಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

16 ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಡೈಮರ್ ಹಿರಿಯ ಪೊಲೀಸ್ ಅಧೀಕ್ಷಕ ಶೇರ್ ಖಾನ್ ಖಚಿತಪಡಿಸಿದ್ದಾರೆ. ಉಳಿದ ವ್ಯಕ್ತಿಗಳಿಗಾಗಿ ಹುಡುಕಾಟ ಮುಂದುವರೆದಿದೆ" ಎಂದು ಖಾನ್ ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿದೆ. ವಧುವಿನ ಕಡೆಯ ಮಹಿಳೆಯೊಬ್ಬರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, 22 ಮಂದಿ ನೀರಿನಲ್ಲಿ ಮುಳುಗಿದ್ದು, ಒಬ್ಬರನ್ನು ರಕ್ಷಿಸಲಾಗಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಪಂಜಾಬ್ ನ ಚಕ್ವಾಲ್ ಜಿಲ್ಲೆಯಿಂದ ಆಸ್ಟೋರ್ ಗೆ ಮದುವೆಗೆ ಅತಿಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಡೈಮರ್ ಜಿಲ್ಲೆಯ ಮಿತಿಯಲ್ಲಿರುವ ಟೆಲ್ಚಿ ಸೇತುವೆಯಿಂದ ಸಿಂಧೂ ನದಿಗೆ ಬಿದ್ದಿದೆ ಎಂದು 1122 ರಕ್ಷಣಾ ತಂಡದ ವಕ್ತಾರ ಶೌಕತ್ ರಿಯಾಜ್ ತಿಳಿಸಿದ್ದಾರೆ. ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಘಟನೆಗೆ ದು;ಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಸ್ಥರು ಹಾಗೂ ಸಂಬಂಧಿಕರಿಗೆ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಗೆ ತೀವ್ರ ಹಿನ್ನಡೆ: ಇರಾನ್ ವಿರುದ್ಧ ಯುದ್ಧ ವಿರೋಧಿಸಿ ಅಮೆರಿಕದ ಭಯೋತ್ಪಾದನಾ ನಿಗ್ರಹ ಮುಖ್ಯಸ್ಥ ರಾಜೀನಾಮೆ!

Iran War: 'ಮಾತುಕತೆ ಪ್ರಶ್ನೆಯೇ ಇಲ್ಲ.. ಅಮೆರಿಕ, ಇಸ್ರೇಲ್ ಶರಣಾಗಲೇಬೇಕು..': Mojtaba Khamenei ಎಚ್ಚರಿಕೆ

KD ಚಿತ್ರ ವಿವಾದ: 'ಅನುವಾದ ಮಾತ್ರ ನನ್ನದು.. ಹಾಡು ಪ್ರೇಮ್ ಅವರದ್ದು..' 'ಇದೊಂದರಿಂದ ಅವಮಾನವಾಗುತ್ತಿದೆ'..: ಗೀತ ರಚನೆಕಾರ ಶಾಕಿಂಗ್ ಹೇಳಿಕೆ

ಯಾರಾಗಲಿದ್ದಾರೆ ಭಾರತದ ಮುಂದಿನ CDS?: ಇಲ್ಲಿದೆ ಮಾಹಿತಿ

ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ?: ಸಂತ್ರಸ್ತೆಯ ಮಗಳ ಮೇಲೂ ಕಣ್ಣು, ಆಡಿಯೋ-ವಿಡಿಯೋ ವೈರಲ್..! ಅಮಾನತು

SCROLL FOR NEXT