ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ (Photo: Office of the Iranian leader via AP)
ವಿದೇಶ

ಇಸ್ರೇಲ್ ಹೆಚ್ಚು ದಿನ ಇರುವುದಿಲ್ಲ: ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ

ತೆಹ್ರಾನ್ ನ ಇಮಾಮ್ ಖೊಮೇನಿ ಮೊಸಲ್ಲಾ ಮಸೀದಿಯಲ್ಲಿ ಭಾಷಣ ಮಾಡಿರುವ ಅಯತೊಲ್ಲಾ, ಜಾಗತಿಕ ಮಟ್ಟದಲ್ಲಿ, ಕುರಾನ್ ಅಡಿಯಲ್ಲಿ ಮುಸ್ಲಿಮರ ಒಗ್ಗಟ್ಟಿಗೆ ಕರೆ ನೀಡಿದ್ದಾರೆ.

ಇರಾನ್: ಇರಾನ್ ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಇಸ್ರೇಲ್ ವಿರುದ್ಧ ಗುಡುಗಿದ್ದಾರೆ.

ತೆಹ್ರಾನ್ ನ ಇಮಾಮ್ ಖೊಮೇನಿ ಮೊಸಲ್ಲಾ ಮಸೀದಿಯಲ್ಲಿ ಭಾಷಣ ಮಾಡಿರುವ ಅಯತೊಲ್ಲಾ, ಜಾಗತಿಕ ಮಟ್ಟದಲ್ಲಿ, ಕುರಾನ್ ಅಡಿಯಲ್ಲಿ ಮುಸ್ಲಿಮರ ಒಗ್ಗಟ್ಟಿಗೆ ಕರೆ ನೀಡಿದ್ದಾರೆ.

ಪ್ಯಾಲೇಸ್ಟಿನಿಯನ್ ರಾಜ್ಯ, ಲೆಬನಾನ್ ಮತ್ತು ಇತರ ಮುಸ್ಲಿಂ ರಾಷ್ಟ್ರಗಳ ಶತ್ರುವೇ ಇರಾನ್‌ನ ಶತ್ರು ಆಗಿದೆ ಎಂದು ಅವರು ಹೇಳಿದ್ದಾರೆ.

2020 ರಲ್ಲಿ ಬಾಗ್ದಾದ್‌ನ ವಿಮಾನ ನಿಲ್ದಾಣದ ಬಳಿ ಯುಎಸ್ ಡ್ರೋನ್ ದಾಳಿಯಲ್ಲಿ ಇರಾನ್ ಜನರಲ್ ಖಾಸಿಮ್ ಸೊಲೈಮಾನಿ ಸಾವನ್ನಪ್ಪಿದ ನಂತರ ಮತ್ತು ನಂತರ ಇರಾಕ್‌ನಲ್ಲಿನ ಯುಎಸ್ ಮಿಲಿಟರಿ ನೆಲೆಗಳ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಖಮೇನಿ ಇತ್ತೀಚೆಗೆ ಶುಕ್ರವಾರದ ಪ್ರಾರ್ಥನೆ ಸಲ್ಲಿಸಿದ್ದರು. 2012ರಲ್ಲಿ ಅದಕ್ಕೂ ಮೊದಲು ಪ್ರಾರ್ಥನೆ ಸಲ್ಲಿಸಿದ್ದರು.

ಮಂಗಳವಾರ ಇಸ್ರೇಲ್ ಮೇಲೆ ಇರಾನ್ ನಡೆಸಿದ ದಾಳಿಯನ್ನು ಖಮೇನಿ ಶ್ಲಾಘಿಸಿದ್ದಾರೆ ಮತ್ತು ಅದನ್ನು ಸಂಪೂರ್ಣವಾಗಿ 'ಕಾನೂನು ಬದ್ಧ' ಎಂದು ಹೇಳಿದ್ದಾರೆ. ಇರಾನ್ ದಾಳಿ ಅಪರಾಧಗಳ ವಿರುದ್ಧ ಕನಿಷ್ಠ ಶಿಕ್ಷೆ ಎಂದು ಅವರು ಖೊಮೇನಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

SCROLL FOR NEXT