ನೆಸ್ರಲ್ಲಾ ಅಡಗಿದ್ದ ಬಂಕರ್ ನಲ್ಲಿ ಅಪಾರ ಪ್ರಮಾಣದ ಹಣ ಮತ್ತು ಚಿನ್ನ ಪತ್ತೆ 
ವಿದೇಶ

Hezbollah ಮುಖ್ಯಸ್ಥ Nasrallah ಅಡಗಿದ್ದ ಬಂಕರ್ ನಲ್ಲಿ 500 ಮಿಲಿಯನ್ ಡಾಲರ್ ಹಣ, ಅಪಾರ ಪ್ರಮಾಣದ ಚಿನ್ನ ಪತ್ತೆ: Israel

IDF ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ತಿಳಿಸಿರುವಂತೆ ಬಿಗಿ ಭದ್ರತೆಯೊಂದಿಗೆ ರಹಸ್ಯ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

ಟೆಲ್ ಅವೀವ್: ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅಡಗಿದ್ದ ಬಂಕರ್‌ನಲ್ಲಿ ಬರೊಬ್ಬರಿ 500 ಮಿಲಿಯನ್ ಡಾಲರ್ ನಗದು ಮತ್ತು ಅಪಾರ ಪ್ರಮಾಣದ ಚಿನ್ನದ ಸಂಗ್ರಹ ಪತ್ತೆಯಾಗಿದೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ.

ಈ ಹಿಂದೆ ಇಸ್ರೇಲ್ ವಾಯುದಾಳಿ ನಡೆಸಿದ್ದ ಬೈರುತ್‌ನ ಆಸ್ಪತ್ರೆಯ ಕೆಳಗಿರುವ ಬಂಕರ್‌ನಲ್ಲಿ 500 ಮಿಲಿಯನ್ ಡಾಲರ್ ನಗದು ಮತ್ತು ಅಪಾರ ಪ್ರಮಾಣದ ಚಿನ್ನದ ಸಂಗ್ರಹ ಪತ್ತೆಯಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ಹಿಜ್ಬುಲ್ಲಾದ ಹಣಕಾಸು ಕೇಂದ್ರದ ಬಗ್ಗೆ ಗುಪ್ತಚರ ಮಾಹಿತಿಯನ್ನು ಬಹಿರಂಗಪಡಿಸಿವೆ.

ಈ ರಹಸ್ಯ ಬಂಕರ್ ಬೈರುತ್ ನ ಮಧ್ಯದಲ್ಲಿರುವ ಅಲ್ ಸಹೇಲ್ ಆಸ್ಪತ್ರೆಯ ಅಡಿಯಲ್ಲಿದ್ದು, ಇದು ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅಡಗಿದ್ದ ಬಂಕರ್ ಆಗಿತ್ತು. ಇಲ್ಲಿ ಕೋಟ್ಯಂತರ ಮೌಲ್ಯದ ಚಿನ್ನ ಮತ್ತು ನಗದು ಇರಿಸಲಾಗಿತ್ತು. ಭಾರತೀಯ ರೂಪಾಯಿಗಳಲ್ಲಿ ಇದರ ಬೆಲೆ ಸುಮಾರು 4194,50,25,000 ರೂ. ಇಸ್ರೇಲ್ ಹಿಜ್ಬುಲ್ಲಾ ವಿರುದ್ಧ ಕಾರ್ಯಾಚರಣೆಯನ್ನು ಹೆಚ್ಚಿಸಿದೆ ಮತ್ತು ಭಾನುವಾರ ರಾತ್ರಿ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿತು.

ಈ ದಾಳಿಯ ಉದ್ದೇಶವು ಇರಾನ್ ಬೆಂಬಲಿತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ಲಾ ತನ್ನ ಕಾರ್ಯಾಚರಣೆಗಳಿಗೆ ಧನಸಹಾಯ ನೀಡುವ ಸಾಮರ್ಥ್ಯವನ್ನು ದುರ್ಬಲಗೊಳಿಸುವುದಾಗಿತ್ತು ಎಂದು ಇಸ್ರೇಲ್ ಬಹಿರಂಗಪಡಿಸಿದೆ.

ರಹಸ್ಯ ಹೈ ಸೆಕ್ಯುರಿಟಿ ವಾಲ್ಟ್ ನಲ್ಲಿ ಹಣ

IDF ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ತಿಳಿಸಿರುವಂತೆ ಬಿಗಿ ಭದ್ರತೆಯೊಂದಿಗೆ ರಹಸ್ಯ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಇಲ್ಲಿ ಭೂಗತ ವಾಲ್ಟ್ ಇದ್ದು, ಅದರಲ್ಲಿ ಲಕ್ಷಾಂತರ ಡಾಲರ್ ನಗದು ಮತ್ತು ಚಿನ್ನದ ರೂಪದಲ್ಲಿ ಇರಿಸಲಾಗಿತ್ತು. ಈ ಹಣವನ್ನು ಇಸ್ರೇಲ್ ವಿರುದ್ಧ ದಾಳಿಗೆ ಹಿಜ್ಬುಲ್ಲಾ ಬಳಸುತ್ತಿದ್ದರು. ಆದರೆ, ದಾಳಿಯಲ್ಲಿ ಸಂಪೂರ್ಣ ಹಣ ನಷ್ಟವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಅವರು ಹೇಳಿಲ್ಲ.

ಆಸ್ಪತ್ರೆ ಅಡಿಯಲ್ಲಿ ಮತ್ತೊಂದು ಬಂಕರ್

ರಿಯರ್ ಅಡ್ಮಿರಲ್ ಡೇನಿಯಲ್ ಹಗಾರಿ ನಂತರ ಬೈರುತ್‌ನಲ್ಲಿ ಮತ್ತೊಂದು ಬಂಕರ್ ಅನ್ನು ಪ್ರಸ್ತಾಪಿಸಿದ್ದು, ಆಸ್ಪತ್ರೆಯ ಅಡಿಯಲ್ಲಿ ಈ ಬಂಕರ್ ನಿರ್ಮಿಸಲಾಗಿದೆ. ನಸ್ರಲ್ಲಾದ ದಕ್ಷಿಣದ ಬೈರುತ್‌ನ ಉಪನಗರದಲ್ಲಿರುವ ಅಲ್-ಸಹೇಲ್ ಆಸ್ಪತ್ರೆಯ ಕೆಳಗಿರುವ ಬಂಕರ್‌ನ ಸ್ಥಳವನ್ನು ತೋರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

SCROLL FOR NEXT