ಪ್ಯಾಲೆಸ್ತೀನಿಯರು ಸಾವು Associated Press
ವಿದೇಶ

ಗಾಜಾವನ್ನು ಪುಡಿಗಟ್ಟುತ್ತಿರುವ ಇಸ್ರೇಲ್: ವಾಯುದಾಳಿಯಲ್ಲಿ 22 ಪ್ಯಾಲೆಸ್ತೀನಿಯರ ಹತ್ಯೆ; ಸಾವಿನ ಸಂಖ್ಯೆ 42,924ಕ್ಕೆ ಏರಿಕೆ!

ಗಾಜಾ ಪಟ್ಟಿಯ ಉತ್ತರದಲ್ಲಿರುವ ಬೀಟ್ ಲಾಹಿಯಾ ನಗರದ ಮೇಲೆ ಇಸ್ರೇಲಿ ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 22 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. ಪ್ಯಾಲೇಸ್ಟಿನಿಯನ್ ಅಧಿಕೃತ ಸುದ್ದಿ ಸಂಸ್ಥೆ WAFA ವರದಿ ಮಾಡಿದೆ.

ಗಾಜಾ: ಗಾಜಾ ಪಟ್ಟಿಯ ಉತ್ತರದಲ್ಲಿರುವ ಬೀಟ್ ಲಾಹಿಯಾ ನಗರದ ಮೇಲೆ ಇಸ್ರೇಲಿ ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 22 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. ಪ್ಯಾಲೇಸ್ಟಿನಿಯನ್ ಅಧಿಕೃತ ಸುದ್ದಿ ಸಂಸ್ಥೆ WAFA ವರದಿ ಮಾಡಿದೆ.

ಶನಿವಾರ ಸಂಜೆ ಇಸ್ರೇಲಿ ಪಡೆಗಳು ನಿರ್ಗತಿಕ ವಸತಿಗಳ ಶೆಲ್ ದಾಳಿ ಮಾಡಿ ಕನಿಷ್ಠ ಐದು ಮನೆಗಳನ್ನು ನೆಲಸಮಗೊಳಿಸಿದೆ. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಸ್ಥಳೀಯ ನಿವಾಸಿಗಳು ಕ್ಸಿನ್ಹುವಾಗೆ ನಾಗರಿಕ ರಕ್ಷಣಾ ಅಥವಾ ವೈದ್ಯಕೀಯ ತಂಡಗಳು ಪ್ರದೇಶವನ್ನು ತಲುಪಲು ಸಾಧ್ಯವಾಗಲಿಲ್ಲ. ಸ್ಥಳೀಯರು ಕತ್ತೆ ಗಾಡಿಗಳಲ್ಲಿ ಅಥವಾ ಕಾಲ್ನಡಿಗೆಯಲ್ಲಿ ಗಾಯಗೊಂಡಿರುವವರನ್ನು ಸ್ಥಳಾಂತರಿಸಲಾಯಿತು. ಘಟನೆಯ ಬಗ್ಗೆ ಇಸ್ರೇಲ್ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

2023ರ ಅಕ್ಟೋಬರ್ 7ರಂದು ನಡೆದ ಹಮಾಸ್ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ದಕ್ಷಿಣ ಇಸ್ರೇಲಿ ಗಡಿಯ ಮೂಲಕ ಗಾಜಾ ಪಟ್ಟಿಯಲ್ಲಿ ಹಮಾಸ್ ವಿರುದ್ಧ ಭಾರಿ ಆಕ್ರಮಣವನ್ನು ಪ್ರಾರಂಭಿಸಿದೆ. ಹಮಾಸ್ ಮಾರಣಾಂತಿಕ ದಾಳಿ ನಡೆಸಿ ಸುಮಾರು 1,200 ಇಸ್ರೇಲಿಗರನ್ನು ಹತ್ಯೆ ಮಾಡಿದ್ದು ಅಲ್ಲದೆ ಸುಮಾರು 250ಕ್ಕೂ ಜನರನ್ನು ಒತ್ತೆಯಾಳಾಗಿ ತೆಗೆದುಕೊಳ್ಳಲಾಯಿತು. ಗಾಜಾ ಪಟ್ಟಿಯಲ್ಲಿ ಇಸ್ರೇಲಿ ನಡೆಸುತ್ತಿರುವ ದಾಳಿಯಲ್ಲಿ ಸಾವನ್ನಪ್ಪಿದ ಪ್ಯಾಲೆಸ್ತೀನಿಯರ ಸಂಖ್ಯೆ 42,924ಕ್ಕೆ ಏರಿದೆ ಎಂದು ಗಾಜಾ ಮೂಲದ ಆರೋಗ್ಯ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ ಅಕ್ಟೋಬರ್ 1ರಂದು ಇರಾನ್ ನಡೆಸಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇರಾನ್‌ ಮಿಲಿಟರಿಗಳನ್ನು ಗುರಿಯಾಗಿಸಿ ಇಸ್ರೇಲ್ ಶನಿವಾರ ಮುಂಜಾನೆ ವೈಮಾನಿಕ ದಾಳಿ ಆರಂಭಿಸಿತ್ತು. ದಾಳಿಯಿಂದಾದ ಸಾವು ನೋವಿನ ಬಗ್ಗೆ ತಕ್ಷಣದ ಮಾಹಿತಿ ಸಿಕ್ಕಿಲ್ಲ. ಇರಾನ್‌ನಲ್ಲಿನ ಮಿಲಿಟರಿ ಗುರಿಗಳ ಮೇಲೆ ನಡೆಸಲಾದ ನಿಖರವಾದ ದಾಳಿ ಎಂದು ಇಸ್ರೇಲ್ ಮಿಲಿಟರಿ ಹೇಳಿಕೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯೂಯಾರ್ಕ್ ನಲ್ಲೇ ನಿಮ್ಮ ಬುಡ ಗಟ್ಟಿ ಇಲ್ಲ; ಇನ್ನು ನಮ್ಮ ದೇಶದ ಅಧಿಕಾರ ಬದಲಾಯಿಸ್ತೀರಾ?: ಟ್ರಂಪ್ ಬಗ್ಗೆ ಇರಾನ್ ಅಪಹಾಸ್ಯ!

ಕೇಂದ್ರದಿಂದ ಅಸಹಕಾರ, ಮಲತಾಯಿ ಧೋರಣೆ, ಆದರೂ ವಿತ್ತೀಯ ಶಿಸ್ತು ಪಾಲನೆ: CM ಸಿದ್ದರಾಮಯ್ಯ

UPSC ಪರೀಕ್ಷೆ ಫಲಿತಾಂಶ ಪ್ರಕಟ: ಕಿರಣ್ ಕಾಮತೆ ರಾಜ್ಯಕ್ಕೆ ಟಾಪರ್; ಕರ್ನಾಟಕದ 22 ಅಭ್ಯರ್ಥಿಗಳು ಪಾಸ್

ಯುದ್ಧ ಕೊನೆಗೊಳಿಸಲು ಕೆಲವು ರಾಷ್ಟ್ರಗಳು 'ಮಧ್ಯಸ್ಥಿಕೆ' ಬಯಸುತ್ತಿವೆ: ಭೀಕರ ದಾಳಿಗಳ ನಡುವೆ ಇರಾನ್ ಅಧ್ಯಕ್ಷರ ಸ್ಫೋಟಕ ಹೇಳಿಕೆ!

ಸುಖೋಯ್ ವಿಮಾನ ದುರಂತ: Op Sindoor ನಲ್ಲಿ ಪಾಕ್ ಗೆ ನಡುಕ ಹುಟ್ಟಿಸಿದ್ದ ಹುತಾತ್ಮ ಪೈಲಟ್ Purvesh Duragkar

SCROLL FOR NEXT