ವಾಷಿಂಗ್ಟನ್: ಅಮೆರಿಕಾದ ಕೆಂಟುಕಿ ಹೆದ್ದಾರಿ ಬಳಿ ಬಂದೂಕುಧಾರಿ ವ್ಯಕ್ತಿಯೊಬ್ಬ ಹಲವಾರು ಜನರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಕೆಂಟುಕಿ ಪೊಲೀಸ್ ವಕ್ತಾರ ಸ್ಕಾಟಿ ಪೆನ್ನಿಂಗ್ಟನ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಐ-75 ಹೆದ್ದಾರಿಯಲ್ಲಿ ಹಲವರ ಮೇಲೆ ಗುಂಡಿನ ದಾಳಿಯಾಗಿದ್ದು, 4-6 ಮಂದಿ ಗಾಯಗೊಂಡಿದ್ದಾರೆ. ಶಂಕಿತರ ಕೈವಾಡದ ಬಗ್ಗೆ ತಕ್ಷಣಕ್ಕೆ ಏನೂ ತಿಳಿದುಬಂದಿಲ್ಲ. ಕಾನೂನು ಜಾರಿ ಪ್ರಕ್ರಿಯೆ ಹಿನ್ನೆಲೆ ಲಂಡನ್ ನ್ ನ ಸಣ್ಣ ನಗರದ ಉತ್ತರ ಭಾಗದ 75 ಒಂಬತ್ತು ಮೈಲಿಯನ್ನು ಮುಚ್ಚಲಾಗಿದೆ ಎಂದು ಹೇಳಿದ್ದಾರೆ.
ಲಾರೆಲ್ ಕೌಂಟಿ ಶೆರಿಫ್ ಕಚೇರಿ ಹೇಳಿಕೆ ಬಿಡುಗಡೆ ಮಾಡಿ, ಹಲವರಿಗೆ ತೀವ್ರ ಗಾಯಗಳಾಗಿದ್ದು, ಸಾವುಗಳು ಎದುರಾಗಿಲ್ಲ ಎಂದು ಹೇಳಿದೆ.
ಗವರ್ನರ್ ಆಂಡಿ ಬೆಶಿಯರ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಈ ಪರಿಸ್ಥಿತಿಯ ಬಗ್ಗೆ ತಿಳಿದಿರುವುದಾಗಿ ಹೇಳಿಕೊಂಡಿದ್ದಾರೆ.
ನಾವು ಪರಿಸ್ಥಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ಸಾಧ್ಯವಿರುವ ಯಾವುದೇ ರೀತಿಯಲ್ಲಿ ಬೆಂಬಲವನ್ನು ನೀಡುತ್ತೇವೆ, ಶಂಕಿತನ ಬಂಧನವಾಗಿಲ್ಲ. ಆತ ಎಲ್ಲಿದ್ದಾನೆಂಬುದು ತಿಳಿದುಬಂದಿಲ್ಲ. ಹೀಗಾಗಿ, ಜನರು ಹೊರಗೆ ಬಾರದಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆಂದು ತಿಳಿಸಿದ್ದಾರೆ.