ಕಾಶ್ ಪಟೇಲ್ ಮತ್ತು ಉಗ್ರ ಹರ್ಪ್ರೀತ್ ಸಿಂಗ್ 
ವಿದೇಶ

'ನ್ಯಾಯ ಸಿಗಲಿದೆ': ಭಯೋತ್ಪಾದಕ Harpreet Singh ಬಂಧನ ಕುರಿತು ಅಮೆರಿಕದ FBI ನಿರ್ದೇಶಕ Kash Patel

ಎಫ್‌ಬಿಐ ಸ್ಯಾಕ್ರಮೆಂಟೊ ತನಿಖೆಯನ್ನು ನಡೆಸುತ್ತಿದ್ದು, ಸ್ಥಳೀಯವಾಗಿ ಮತ್ತು ಭಾರತದಲ್ಲಿ ನಮ್ಮ ಪಾಲುದಾರರೊಂದಿಗೆ ಸಮನ್ವಯ ಸಾಧಿಸಿದೆ.

ಕ್ಯಾಲಿಫೋರ್ನಿಯಾ: ಪಂಜಾಬ್‌ನಲ್ಲಿ ನಡೆದ ಸರಣಿ ಉಗ್ರ ದಾಳಿಗಳಲ್ಲಿ ಭಾಗಿಯಾಗಿರುವ ಭಯೋತ್ಪಾದಕ ಹರ್‌ಪ್ರೀತ್ ಸಿಂಗ್‌ (Harpreet Singh)ನನ್ನು ಎಫ್‌ಬಿಐ ಬಂಧಿಸಿದ ನಂತರ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ನಿರ್ದೇಶಕ ಕಾಶ್ ಪಟೇಲ್ 'ನ್ಯಾಯ ಸಿಗಲಿದೆ' ಎಂದು ಭರವಸೆ ನೀಡಿದ್ದಾರೆ.

ಹರ್ಪ್ರೀತ್ ಸಿಂಗ್ ಬಂಧನ ವಿಚಾರದಲ್ಲಿ ತಮ್ಮ ತಂಡದ ಪ್ರಯತ್ನಗಳನ್ನು ಶ್ಲಾಘಿಸಿರುವ ಕಾಶ್ ಪಟೇಲ್, 'ಎಫ್‌ಬಿಐ ಭಾರತದೊಂದಿಗೆ ಸಮನ್ವಯದಿಂದ ತನಿಖೆ ನಡೆಸುತ್ತಿದೆ. 'ಬಂಧಿತ ಉಗ್ರ ಹರ್ಪ್ರೀತ್ ಸಿಂಗ್, ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಭಯೋತ್ಪಾದಕ ಗ್ಯಾಂಗ್‌ನ ಭಾಗವಾಗಿದ್ದಾನೆ. ಭಾರತ ಮತ್ತು ಅಮೆರಿಕದಲ್ಲಿ ಪೊಲೀಸ್ ಠಾಣೆಗಳ ಮೇಲೆ ಅನೇಕ ದಾಳಿಗಳನ್ನು ಯೋಜಿಸುವಲ್ಲಿ ಆತನ ಪಾತ್ರವಿದೆ ಎಂದು ನಾವು ನಂಬುತ್ತೇವೆ' ಎಂದು ಕಾಶ್ ಪಟೇಲ್ ಎಕ್ಸ್‌ನಲ್ಲಿ ಬರೆದಿದ್ದಾರೆ.

ಎಫ್‌ಬಿಐ ಸ್ಯಾಕ್ರಮೆಂಟೊ ತನಿಖೆಯನ್ನು ನಡೆಸುತ್ತಿದ್ದು, ಸ್ಥಳೀಯವಾಗಿ ಮತ್ತು ಭಾರತದಲ್ಲಿ ನಮ್ಮ ಪಾಲುದಾರರೊಂದಿಗೆ ಸಮನ್ವಯ ಸಾಧಿಸಿದೆ. "ಎಲ್ಲರಿಂದ ಅತ್ಯುತ್ತಮ ಕೆಲಸ, ಮತ್ತು ನ್ಯಾಯ ಸಿಗುತ್ತದೆ. ಅಂತೆಯೇ ಹಿಂಸಾಚಾರ ನಡೆಸುವವರನ್ನು ಹುಡುಕುವುದನ್ನು ಎಫ್‌ಬಿಐ ಮುಂದುವರಿಸುತ್ತದೆ. ಅವರು ಎಲ್ಲೇ ಇದ್ದರೂ ಪರವಾಗಿಲ್ಲ. ಅವರನ್ನು ಹುಡುಕಿ ಬಂಧಿಸಿ ನ್ಯಾಯ ಕೊಡಿಸುತ್ತೇವೆ ಎಂದು ಕಾಶ್ ಪಟೇಲ್ ಹೇಳಿದರು.

ಉಗ್ರ ಹರ್ಪ್ರೀತ್ ಸಿಂಗ್ ಬಂಧನ

ಪಂಜಾಬ್‌ನಲ್ಲಿ ನಡೆದ ಹಲವು ದಾಳಿಗಳಲ್ಲಿ ಭಾಗಿಯಾಗಿರುವ ಹರ್‌ಪ್ರೀತ್ ಸಿಂಗ್ ಎಂಬ ಭಯೋತ್ಪಾದಕನನ್ನು ಎಫ್‌ಬಿಐ ಮತ್ತು Enforcement and Removal Operations (ERO) ತಂಡದ ಶುಕ್ರವಾರ ಬಂಧಿಸಿತ್ತು. ಹರ್ಪ್ರೀತ್ ಸಿಂಗ್ ಎರಡು ಅಂತರರಾಷ್ಟ್ರೀಯ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಮತ್ತು ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಿದ್ದಾನೆ. ಆತ ಬಂಧನದಿಂದ ತಪ್ಪಿಸಿಕೊಳ್ಳಲು ಅವರು ಬರ್ನರ್ ಫೋನ್‌ಗಳನ್ನು ಬಳಸಿದ್ದಾನೆ ಎಂದು ಎಫ್‌ಬಿಐ ತಿಳಿಸಿದೆ.

ಪಂಜಾಬ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌರವ್ ಯಾದವ್ ಅವರು, ಹರ್‌ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಾಸಿಯಾ ಬಂಧನವನ್ನು ಶ್ಲಾಘಿಸಿದರು. ಪಾಕಿಸ್ತಾನದ ಐಎಸ್‌ಐ ಪ್ರಾಯೋಜಿಸಿದ ಭಯೋತ್ಪಾದಕ ಜಾಲಗಳ ಮೇಲಿನ ಕ್ರಮದಲ್ಲಿ ಇದನ್ನು "ಪ್ರಮುಖ ಮೈಲಿಗಲ್ಲು" ಎಂದು ಅವರು ಬಣ್ಣಿಸಿದರು.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಪಂಜಾಬ್ ಡಿಜಿಪಿ ಗೌರವ್ ಯಾದವ್, "ಅಮೆರಿಕ ಮೂಲದ ಐಎಸ್‌ಐ ಬೆಂಬಲಿತ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ (ಬಿಕೆಐ) ನ ಪ್ರಮುಖ ಕಾರ್ಯಕರ್ತ ಮತ್ತು ಪಾಕಿಸ್ತಾನ ಮೂಲದ ಭಯೋತ್ಪಾದಕ ರಿಂಡಾ ಅವರ ನಿಕಟ ಸಹಚರ ಹರ್‌ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಾಸಿಯಾ ಬಂಧನವು ಐಎಸ್‌ಐ ಬೆಂಬಲಿತ ಭಯೋತ್ಪಾದಕ ಜಾಲಗಳ ಮೇಲಿನ ನಿರಂತರ ಕ್ರಮದಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಎಫ್‌ಬಿಐ ಮತ್ತು ಐಸಿಇ ನ ಬಂಧನ ಕಾರ್ಯಾಚರಣೆಯು "ಅತ್ಯುತ್ತಮ ಅಂತರರಾಷ್ಟ್ರೀಯ ಸಹಕಾರ" ಮತ್ತು ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತದ ನಡುವಿನ ಮಾಹಿತಿ ವಿನಿಮಯದ ಪರಿಣಾಮವಾಗಿದೆ.

2023 ಮತ್ತು 2025 ರ ನಡುವೆ, ಹ್ಯಾಪಿ ಪಾಸಿಯಾ ಉದ್ದೇಶಿತ ಹತ್ಯೆಗಳು, ಪೊಲೀಸ್ ಸಂಸ್ಥೆಗಳ ಮೇಲೆ ಗ್ರೆನೇಡ್ ದಾಳಿಗಳನ್ನು ಆಯೋಜಿಸುವಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ. ಪಂಜಾಬ್ ಮತ್ತು ಇತರ ರಾಜ್ಯಗಳಲ್ಲಿ ಸುಲಿಗೆ ಮಾಡಿದ ಪ್ರಕರಣಗಳು ಕೂಡ ಈತನ ಮೇಲಿದೆ. ಏಪ್ರಿಲ್ 17, 2025 ರಂದು ಅಮೆರಿಕದ ಸ್ಯಾಕ್ರಮೆಂಟೋದಲ್ಲಿ ಎಫ್‌ಬಿಐ ಮತ್ತು ಐಸಿಇ ಆತನನ್ನು ಬಂಧಿಸಿದ್ದು, ಅಮೆರಿಕ ಮತ್ತು ಭಾರತದ ನಡುವಿನ ಅತ್ಯುತ್ತಮ ಅಂತರರಾಷ್ಟ್ರೀಯ ಸಹಕಾರ ಮತ್ತು ಮಾಹಿತಿ ವಿನಿಮಯದ ಫಲಿತಾಂಶವಾಗಿದೆ" ಎಂದು ಅವರು ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ರಷ್ಯಾದಿಂದ ತೈಲ ಖರೀದಿಸಿ ಭಾರತ ಲಾಭ ಗಳಿಸುತ್ತಿದೆ ಹೇಳಿಕೆ: ಸತ್ಯ ಪರಿಶೀಲಿಸಿ ಬೂಟಾಟಿಕೆ ಎಂದ 'X', ಎಲಾನ್ ಮಸ್ಕ್ ವಿರುದ್ಧ ಪೀಟರ್ ನವರೊ ಸಿಡಿಮಿಡಿ

ತಿಹಾರ್ ಜೈಲು ಪರಿಶೀಲಿಸಿದ ಬ್ರಿಟನ್ ತಂಡ: ವಿಜಯ್ ಮಲ್ಯ, ನೀರವ್ ಮೋದಿ ಗಡಿಪಾರು ಸನ್ನಿಹಿತ..?

ಬಾನು ಮುಷ್ತಾಕ್ ಕನ್ನಡದ ವಿರುದ್ಧ ಮಾತನಾಡಿದ್ದಕ್ಕೆ ಯಾವುದೇ ಸಾಕ್ಷಿಯಿಲ್ಲ, ನಿಸಾರ್ ಅಹ್ಮದ್ ಉದ್ಘಾಟಿಸಿದಾಗೇಕೆ ಮೌನವಾಗಿದ್ದಿರಿ?

Gadag: ಶೌಚಾಲಯ ಇಲ್ಲದ ಶಾಲೆ; ಬಹಿರ್ದೆಸೆಗೆ ಜೀವ ಕೈಯಲ್ಲಿ ಹಿಡಿದು ಹೆದ್ದಾರಿ ದಾಟುವ ಸರ್ಕಾರಿ ಶಾಲಾ ವಿದ್ಯಾರ್ಥಿಗಳು!

ರಾಜ್ಯ ಸರ್ಕಾರ ರಾಜಕೀಯ ಪಂಚಾಯಿತಿ ಮಾಡುವ ರೀತಿಯಲ್ಲಿ ಒಳಮೀಸಲಾತಿ ವರ್ಗೀಕರಣ ಮಾಡಿದೆ: ಸಂಸದ ಬೊಮ್ಮಾಯಿ

SCROLL FOR NEXT