ವಾಷಿಂಗ್ಟನ್: ರಷ್ಯಾ ಮತ್ತು ಚೀನಾದಿಂದ ಭಾರತವನ್ನು ದೂರ ತರುವ ಅಮೆರಿಕದ ದಶಕಗಳ ಪ್ರಯತ್ನಗಳಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಧಕ್ಕೆ ತಂದಿದ್ದಾರೆ ಎಂದು ಅವರ ಮಾಜಿ ಆಪ್ತ ಜಾನ್ ಬೋಲ್ಟನ್ ಹೇಳಿದ್ದಾರೆ.
ರಷ್ಯಾದ ತೈಲ ಖರೀದಿಸಲು ಅಮೆರಿಕವು ಭಾರತದ ಮೇಲೆ ಹೇರಿರುವ ಭಾರಿ ಸುಂಕದ ಅಂಶವನ್ನು ಉಲ್ಲೇಖಿಸಿ ಮಾತನಾಡಿರುವ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರರು ಆದ ಬೊಲ್ಟನ್, ಚೀನಾದೊಂದಿಗೆ ಮೃಧುತ್ವದೊಂದಿಗೆ ಭಾರತದ ವಿರುದ್ಧ ಟ್ರಂಪ್ ಪಕ್ಷಪಾತ ಮಾಡುತ್ತಿದ್ದಾರೆ. ಇದು "ಅಗಾಧವಾದ ತಪ್ಪು" ಎಂದಿದ್ದಾರೆ.
ಟ್ರಂಪ್ ಏಪ್ರಿಲ್‌ನಲ್ಲಿ ಚೀನಾದೊಂದಿಗೆ ಕಿರು ವ್ಯಾಪಾರ ವಾರ್ ನಲ್ಲಿ ತೊಡಗಿದ್ದರು ಆದರೆ ತದನಂತರ ಯಾವುದೇ ಬಿಕ್ಕಟ್ಟು ಸೃಷ್ಟಿಯಾಗದಂತೆ ತಡೆಹಿಡಿಯಲಾಗಿತ್ತು. ಒಪ್ಪಂದವೊಂದು ಇನ್ನೂ ಬಾಕಿಯಿದೆ. ಈ ಮಧ್ಯೆ ಭಾರತದ ವಿರುದ್ಧ ಶೇ.50 ರಷ್ಟು ಸುಂಕ ವಿಧಿಸಿದ್ದಾರೆ.
ಸುಂಕಗಳು ಯುಎಸ್‌ಗೆ "ಕೆಟ್ಟ ಫಲಿತಾಂಶ" ಕ್ಕೆ ಕಾರಣವಾಗಿವೆ. ಏಕೆಂದರೆ ಭಾರತವು ನಿರೀಕ್ಷಿಸಿದ್ದಕ್ಕಿಂತ ತುಂಬಾ ಋಣಾತ್ಮಕವಾಗಿ" ಪ್ರತಿಕ್ರಿಯಿಸಿದೆ. ಏಕೆಂದರೆ ಚೀನಾಕ್ಕೆ ಸುಂಕ ವಿಧಿಸಲಾಗುತ್ತಿಲ್ಲ ಎಂದು ಬೋಲ್ಟನ್ ಹೇಳಿದ್ದಾರೆ.
ಸಿಎನ್‌ಎನ್‌ನೊಂದಿಗೆ ಮಾತನಾಡಿದ ಅವರು, ರಷ್ಯಾವನ್ನು ನೋಯಿಸುವ ಉದ್ದೇಶದಿಂದ ಭಾರತದ ಮೇಲೆ ದುಪ್ಪಟ್ಟು ಶುಲ್ಕದಿಂದ ಭಾರತ ರಷ್ಯಾ ಮತ್ತು ಚೀನಾಕ್ಕೆ ಹತ್ತಿರವಾಗಬಹುದು. ಬಹುಶಃ ಅಮೆರಿಕ ವಿರುದ್ಧ ಒಟ್ಟಿಗೆ ಮಾತುಕತೆ ನಡೆಸುವಂತೆ ಮಾಡಬಹುದು."ಚೀನಿಯರ ಮೇಲಿನ ಟ್ರಂಪ್ ಅವರ ಮೃದುತ್ವ ಮತ್ತು ಭಾರತದ ಮೇಲಿನ ಭಾರೀ ಸುಂಕಗಳು ಭಾರತವನ್ನು ರಷ್ಯಾ ಮತ್ತು ಚೀನಾದಿಂದ ದೂರ ತರಲು ದಶಕಗಳ ಅಮೆರಿಕದ ಪ್ರಯತ್ನಗಳಿಗೆ ಅಪಾಯವನ್ನುಂಟುಮಾಡುತ್ತವೆ" ಎಂದು ಟ್ರಂಪ್ ಅವರ ಮಾಜಿ ಆಪ್ತರು ಪ್ರತಿಪಾದಿಸಿದ್ದಾರೆ.
ಅಮೆರಿಕದ ಮಾಜಿ ವಾಣಿಜ್ಯ ಅಧಿಕಾರಿ, ಅಮೆರಿಕದ ವಿದೇಶಾಂಗ ನೀತಿ ತಜ್ಞ ಕ್ರಿಸ್ಟೋಫರ್ ಪಡಿಲ್ಲಾ, ಸುಂಕಗಳು ಭಾರತ-ಅಮೆರಿಕ ಬಾಂಧವ್ಯಕ್ಕೆ ದೀರ್ಘಕಾಲೀನ ಹಾನಿಯ ಅಪಾಯವನ್ನುಂಟುಮಾಡಬಹುದು ಎಂದು ಎಚ್ಚರಿಸಿದ್ದಾರೆ.