ಇಸ್ಲಾಮಾಬಾದ್: ಆಪರೇಷನ್ ಸಿಂಧೂರ ಹಿನ್ನೆಡೆ ನಂತರ ಹೊಸ ಸೇನಾ ಪಡೆಯನ್ನು ರಚಿಸುವುದಾಗಿ ಪಾಕಿಸ್ತಾನ ಘೋಷಿಸಿದೆ.
ಭಾರತದೊಂದಿಗೆ ಬಿಕ್ಕಟ್ಟಿನ ನಡುವೆ ಸುಧಾರಿತ ತಂತ್ರಜ್ಞಾನ ಮತ್ತು ಯುದ್ಧ ಸಾಮರ್ಥ್ಯಗಳನ್ನು ಬಲಪಡಿಸುವಲ್ಲಿ "ಮೈಲಿಗಲ್ಲು" ಆಗಿ ಕಾರ್ಯನಿರ್ವಹಿಸುವ ಉದ್ದೇಶದಿಂದ ಸುಸಜ್ಜಿತವಾದ ಹೊಸ ಸೇನಾ ರಾಕೆಟ್ ಪಡೆ ( Army Rocket Force) ರಚಿಸುವುದಾಗಿ ಪಾಕಿಸ್ತಾನದ ಘೋಷಿಸಿದೆ.
78 ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಭಾರತದೊಂದಿಗಿನ ಇತ್ತೀಚಿನ ನಾಲ್ಕು ದಿನಗಳ ಸೇನಾ ಸಂಘರ್ಷದ ಸ್ಮರಣಾರ್ಥ ಬುಧವಾರ ತಡರಾತ್ರಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶಹಭಾಜ್ ಶರೀಫ್ ಈ ಘೋಷಣೆ ಮಾಡಿದರು.
ದೇಶದ ಸೇನಾ ಸಾಮರ್ಥ್ಯದ ಪ್ರಗತಿಯಲ್ಲಿ ಸೇನಾ ರಾಕೆಟ್ ಪಡೆ ಕಮಾಂಡ್ ಒಂದು ಪ್ರಮುಖ ಮೈಲಿಗಲ್ಲು ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ನೂತನ ಪಡೆಯ ಜವಾಬ್ದಾರಿಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲಿಲ್ಲ. ಪಾಕಿಸ್ತಾನದ ಹೊಸ ಪಡೆಯು ಚೀನಾದ ಪೀಪಲ್ಸ್ ಲಿಬರೇಶನ್ ಸೇನಾ ಪಡೆಯಿಂದ ಸ್ಪಷ್ಟವಾಗಿ ಸ್ಫೂರ್ತಿ ಪಡೆದಿದೆ. ಇದು ಭೂ-ಆಧಾರಿತ ಬ್ಯಾಲಿಸ್ಟಿಕ್, ಹೈಪರ್‌ಸಾನಿಕ್, ಕ್ರೂಸ್ ಕ್ಷಿಪಣಿಗಳ ದಾಳಿಗಳನ್ನು ನಿಯಂತ್ರಿಸುತ್ತದೆ