ದಕ್ಷಿಣ ಗಾಜಾ: ದಕ್ಷಿಣ ಗಾಜಾದ ಖಾನ್ ಯೂನಿಸ್‌ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಹಮಾಸ್‌ನ ರಫಾ ಬ್ರಿಗೇಡ್‌ನಲ್ಲಿರುವ "ಪ್ರಮುಖ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ- IDF ಹೇಳಿದೆ.
ಆಗಸ್ಟ್ 9 ರಂದು ನಡೆದ ವಾಯು ದಾಳಿಯಲ್ಲಿ ಹಮಾಸ್‌ನ "ನಿಯಂತ್ರಣ ವಿಭಾಗದ" ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ನಾಸರ್ ಮೂಸಾ ಅವರನ್ನು ಹತ್ಯೆ ಮಾಡಲಾಗಿದೆ.
ಆತ ರಫಾ ಬ್ರಿಗೇಡ್‌ನಲ್ಲಿ ಉಗ್ರರ ತಯಾರಿ ಮತ್ತು ಕಾರ್ಯಾಚರಣೆಗಳ ಹೊಣೆ ಹೊತ್ತಿದ್ದ. ಅಲ್ಲದೇ ಘಟಕದ ಗುಪ್ತಚರ ಮತ್ತು ಕಣ್ಗಾವಲು ಒಳಗೊಂಡಂತೆ ಅನೇಕ ಪಾತ್ರಗಳನ್ನು ನಿರ್ವಹಿಸಿದ್ದ ಎಂದು ಇಸ್ರೇಲ್ ರಕ್ಷಣಾ ಪಡೆ ಮಾಹಿತಿ ನೀಡಿದೆ.
ಮೂಸಾ ರಫಾ ಬ್ರಿಗೇಡ್‌ನ ಕಮಾಂಡರ್ ಮುಹಮ್ಮದ್ ಶಬಾನಾ ಅವರ ನಿಕಟ ಸಹಚರನಾಗಿದ್ದ, ಮೇನಲ್ಲಿ ಹಮಾಸ್ ಉನ್ನತ ನಾಯಕ ಮೊಹಮ್ಮದ್ ಸಿನ್ವಾರ್ ಜೊತೆಗೆ ಆತನ ಹತ್ಯೆಯಾಗಿತ್ತು. ಈ ಮಧ್ಯೆ ನಿನ್ನೆ ಖಾನ್ ಯೂನಿಸ್‌ನಲ್ಲಿ ಉಗ್ರರು ರಾಕೆಟ್‌ಗಳನ್ನು ಸಂಗ್ರಹಿಸಲು ಬಳಸುತ್ತಿದ್ದ ಕಟ್ಟಡಕ್ಕೆ ಯುದ್ಧ ವಿಮಾನಗಳು ಅಪ್ಪಳಿಸಿವುದಾಗಿ ಹೇಳಿರುವ IDF, ವೈಮಾನಿಕ ದಾಳಿಯ ವಿಡಿಯೋ ಹಂಚಿಕೊಂಡಿದೆ.