ರಸ್ತೆಯಲ್ಲಿ ಮಚ್ಚು ತೋರಿಸಿದ ವ್ಯಕ್ತಿಗೆ ಗುಂಡೇಟು 
ವಿದೇಶ

ರಸ್ತೆಯಲ್ಲಿ ಮಚ್ಚು ತೋರಿಸಿ ಹುಚ್ಚಾಟ: ಪೊಲೀಸ್ ಗುಂಡೇಟಿಗೆ ಸಿಖ್ ವ್ಯಕ್ತಿ ಸಾವು; Video

ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಕಾರು ನಿಲ್ಲಿಸಿ ಮಚ್ಚು ತೋರಿಸಿ ಆತಂಕ ಸೃಷ್ಟಿಸಿದ್ದ ಸಿಖ್ ಸಮುದಾಯದ ವ್ಯಕ್ತಿಯನ್ನು ಪೊಲೀಸರು ಗುಂಡು ಹಾರಿಸಿ ಹತ ಮಾಡಿದ್ದಾರೆ.

ಲಾಸ್ ಏಂಜಲೀಸ್‌: ಅಮೆರಿಕದಲ್ಲಿ ರಸ್ತೆಯಲ್ಲಿ ಮಚ್ಚು ತೋರಿಸಿ ಹುಟ್ಟಾಟ ಮೆರೆದಿದ್ದ ಸಿಖ್ ವ್ಯಕ್ತಿಯನ್ನು ಪೊಲೀಸರು ಎನ್ ಕೌಂಟರ್ ನಲ್ಲಿ ಕೊಂದು ಹಾಕಿದ್ದಾರೆ.

ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಕಾರು ನಿಲ್ಲಿಸಿ ಮಚ್ಚು ತೋರಿಸಿ ಆತಂಕ ಸೃಷ್ಟಿಸಿದ್ದ ಸಿಖ್ ಸಮುದಾಯದ ವ್ಯಕ್ತಿಯನ್ನು ಪೊಲೀಸರು ಗುಂಡು ಹಾರಿಸಿ ಹತ ಮಾಡಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಲಾಸ್ ಏಂಜಲೀಸ್‌ನ ಡೌನ್‌ಟೌನ್‌ನ ಕ್ರಿಪ್ಟೋ.ಕಾಮ್ ಅರೆನಾ ಬಳಿ ಈ ಘಟನೆ ನಡೆದಿದ್ದು, ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ವ್ಯಕ್ತಿಯನ್ನು 35 ವರ್ಷದ ಗುರುಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ.

ಗುರುಪ್ರೀತ್ ಸಿಂಗ್ ಬೀದಿಯಲ್ಲಿ ಸಿಖ್ ಸಮುದಾಯದ ಸಾಂಪ್ರದಾಯಿಕ ಸಮರ ಕಲೆಯಾದ ಗಟ್ಕಾವನ್ನು ಪ್ರದರ್ಶಿಸುತ್ತಿದ್ದ ಎಂದು ಹೇಳಲಾಗಿದೆಯಾದರೂ ಕೆಲವೇ ಕ್ಷಣಗಳಲ್ಲಿ ಆತ ಮಚ್ಚನ್ನು ಹಿಡಿದು ಹತ್ತಿರದ ಜನರನ್ನು ಬೆದರಿಸುತ್ತಿದ್ದ. ಅಲ್ಲದೆ ಮಾರ್ಗದಲ್ಲಿ ಬಂದ ಕಾರುಗಳ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ಗುರುಪ್ರೀತ್ ಸಿಂಗ್ ಹುಚ್ಚಾಟ ನೋಡಿದ ಸ್ಥಳೀಯರು 911 ಗೆ ಅಂದರೆ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಗುರುಪ್ರೀತ್ ಸಿಂಗ್ ಹುಚ್ಚಾಟ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಗುರುಪ್ರೀತ್ ಸಿಂಗ್ ಅವರ ಮಾತನ್ನು ಕೇಳದೇ ಮಚ್ಚಿನ ಸಾಹಸ ಮುಂದುವರೆಸಿದ್ದರು. ಈ ವೇಳೆ ಪೊಲೀಸರು ಆತನ ಮೇಲೆ ಗುಂಡುಹಾರಿಸಿದ್ದಾರೆ. ಈ ಕುರಿತ ವಿಡಿಯೋವನ್ನು ಪೊಲೀಸರೇ ತಮ್ಮ LAPD ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಬುಡ ಸಹಿತ ಕಿತ್ತು ಬಿಸಾಡುತ್ತೇವೆ': ಕದನ ವಿರಾಮ ಉಲ್ಲಂಘನೆ ಕುರಿತು ಹಮಾಸ್ ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ! Video

Bengaluru: 'ಪರೀಕ್ಷೆ ನೆಪದಲ್ಲಿ ಮುತ್ತಿಟ್ಟು, ಬಟ್ಟೆ ಬಿಚ್ಚಲು ಒತ್ತಾಯಿಸಿದ ಡಾಕ್ಟರ್': ಯುವತಿ ದೂರು, ಬಂಧನ

'ಯಾವನಿಗ್ ಬೇಕ್ ನಿನ್ ಗಿಫ್ಟ್'..!: ಮಾಲೀಕ ನೀಡಿದ ದೀಪಾವಳಿ ಉಡುಗೊರೆಯ ಗೇಟ್ ಬಳಿ ಎಸೆದ ಉದ್ಯೋಗಿಗಳು! Video

ಮೋದಿ ಸರ್ಕಾರದ GST ಬದಲಾವಣೆಯಿಂದ ರಾಜ್ಯಕ್ಕೆ15 ಸಾವಿರ ಕೋಟಿ ನಷ್ಟ: ಕುಮಾರಸ್ವಾಮಿ ಸೇರಿ ಎಲ್ಲಾ ಸಂಸದರನ್ನು ಸೋಲಿಸಿ; ಸಿದ್ದರಾಮಯ್ಯ

Anekal: ಲಿವಿಂಗ್​ ಟುಗೆದರ್​ನಲ್ಲಿದ್ದ ಒಡಿಶಾ ಮೂಲದ ಜೋಡಿ ಆತ್ಮಹತ್ಯೆ! ಇದೇ ಕಾರಣ

SCROLL FOR NEXT