ಭಾರತ ಮೂಲದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ 70 ನೇ ಹುಟ್ಟುಹಬ್ಬದ ಪಾರ್ಟಿಯ ಸಂಭ್ರಮಾಚರಣೆ ನಡೆದಿತ್ತು. ಅದರಲ್ಲಿ ಮತ್ತೊಬ್ಬ ಪರಾರಿ ಉದ್ಯಮಿ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ವಿಡಿಯೊವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪಾರ್ಟಿಯಲ್ಲಿ ನಗುತ್ತಾ ಫೋಟೋ-ವಿಡಿಯೊಗೆ ಫೋಸ್ ನೀಡಿ ನಾವಿಬ್ಬರೂ "ಭಾರತದ ಅತಿದೊಡ್ಡ ಪರಾರಿ ಅಪರಾಧಿಗಳು " ಎಂದು ನಗುತ್ತಾ ಹೇಳಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಈಗ ಸ್ಥಗಿತಗೊಂಡಿರುವ ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಸಾಲ ನೀಡಿದ ಪ್ರಕರಣದಲ್ಲಿ ವಂಚನೆ ಮತ್ತು ಹಣ ವರ್ಗಾವಣೆ ಆರೋಪದ ಮೇಲೆ ಭಾರತ ಸರ್ಕಾರಕ್ಕೆ ಬೇಕಾಗಿರುವ ವಿಜಯ್ ಮಲ್ಯ ಅವರ ಹುಟ್ಟುಹಬ್ಬದ ಆಚರಣೆಯನ್ನು ಸೆರೆಹಿಡಿಯುವ ವೀಡಿಯೊ ಕಳೆದ ಕೆಲವು ದಿನಗಳಲ್ಲಿ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಎರಡನೇ ಬಾರಿ ಸೆರೆಹಿಡಿಯಲಾಗಿದೆ.
ತಮ್ಮ ಜೋಡಿಯನ್ನು "ಭಾರತದ ಇಬ್ಬರು ಅತಿದೊಡ್ಡ ಪರಾರಿ ಅಪರಾಧಿಗಳು" ಎಂದು ಲಲಿತ್ ಮೋದಿ ನಗುತ್ತಾ ಹೇಳಿದ್ದು, ಭಾರತ ಸರ್ಕಾರ, ಇಲ್ಲಿನ ಕಾನೂನನ್ನು ಅಣಕಿಸುವ ರೀತಿಯಲ್ಲಿದೆ.
ಬಾಂಬೆ ಹೈಕೋರ್ಟ್ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಮರಳುವಂತೆ ಅನೇಕ ಬಾರಿ ಒತ್ತಾಯಿಸಿದೆ. ಈಗ ವ್ಯಾಪಾರ-ವಹಿವಾಟು ನಿಷ್ಕ್ರಿಯವಾಗಿರುವ ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಸಾಲ ನೀಡಿದ್ದಕ್ಕಾಗಿ ವಂಚನೆ ಮತ್ತು ಹಣ ವರ್ಗಾವಣೆ ಆರೋಪದ ಮೇಲೆ ಭಾರತಕ್ಕೆ ವಿಜಯ್ ಮಲ್ಯ ಅತ್ಯಂತ ಬೇಕಾಗಿರುವ ಅಪರಾಧಿಯಾಗಿದ್ದಾರೆ.
"ನಾವು ಇಬ್ಬರು ಪರಾರಿಯಾಗಿರುವವರು, ಭಾರತದ ಅತಿದೊಡ್ಡ ಪರಾರಿ ಅಪರಾಧಿಗಳು" ಎಂದು ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಸ್ಥಾಪಕ ಆಯುಕ್ತ ಲಲಿತ್ ಮೋದಿ ವೀಡಿಯೊದಲ್ಲಿ ಹೇಳುವುದನ್ನು ಕೇಳಬಹುದು.
ನಿಮಗೆಲ್ಲಾ ಭಾರತದಲ್ಲಿ ಇಂಟರ್ನೆಟ್ ನಲ್ಲಿ ಫುಲ್ ವೈರಲ್ ಆಗುವ ಕಂಟೆಂಟ್ ಒಂದನ್ನು ಕೊಡುತ್ತಿದ್ದೇನೆ. ಇದು ನಿಮಗೆ ಮಾಧ್ಯಮ ಮಿತ್ರರೇ, ಅಸೂಯೆಯಿಂದ ಹೊಟ್ಟೆ ಉರಿಯುವುದಂತೂ ಖಂಡಿತ ಎಂದು ಕೂಡ ಲಲಿತ್ ಮೋದಿ ವಿಡಿಯೊದಲ್ಲಿ ಬರೆದುಕೊಂಡಿದ್ದಾರೆ.