ಡೊನಾಲ್ಡ್ ಟ್ರಂಪ್ 
ವಿದೇಶ

ಭಾರತದ ಚುನಾವಣೆಗೆ ಅಮೆರಿಕದ ಹಣ: 'ಕಿಕ್ ಬ್ಯಾಕ್ ಸ್ಕೀಮ್' ಎಂದ ಡೊನಾಲ್ಡ್ ಟ್ರಂಪ್; ತನಿಖೆಗೆ ಬಿಜೆಪಿ ಒತ್ತಾಯ

ಭಾರತದಲ್ಲಿ ಚುನಾವಣೆಗಾಗಿ ರೂ. 21 ಮಿಲಿಯನ್ ಡಾಲರ್ ಕಳುಹಿಸಲಾಗಿದೆ. ಭಾರತದಲ್ಲಿನ ಚುನಾವಣೆ ಬಗ್ಗೆ ನಾವೇಕೆ ತಲೆಕೆಡಿಸಿಕೊಳ್ಳಬೇಕು. ನಮ್ಮಲ್ಲಿಯೇ ಸಾಕಷ್ಟು ಸಮಸ್ಯೆಯಿದೆ. ನಮಗೆ ನಮ್ಮದೇ ಮತದಾನ ಬೇಕು ಅಲ್ಲವೇ? ಇಷ್ಟೆಲ್ಲಾ ಹಣ ಭಾರತಕ್ಕೆ ಹೋಗಿದೆ ಎಂಬುದನ್ನು ನೀವು ಊಹಿಸಬಲ್ಲಿರಾ?

ವಾಷಿಂಗ್ಟನ್: ಭಾರತದ ಚುನಾವಣೆಗೆ 21 ಮಿಲಿಯನ್ ಡಾಲರ್ ಅಮೆರಿಕ ಸರ್ಕಾರದ ನೆರವನ್ನು ಮತ್ತೆ ಪ್ರಶ್ನಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅದನ್ನು ಕಿಕ್ ಬ್ಯಾಕ್ ಯೋಜನೆ ಎಂದು ಕರೆದಿದ್ದಾರೆ. ಬಾಂಗ್ಲಾದೇಶದಲ್ಲಿ ರಾಜಕೀಯ ಸ್ಥಿರತೆ ಬಲವರ್ಧನೆಗಾಗಿ ರೂ.21 ಮಿಲಿಯನ್ ಡಾಲರ್ ಮತ್ತು ನೇಪಾಳಕ್ಕೆ ಜೀವ ವೈವಿಧ್ಯತೆಗಾಗಿ ರೂ.19 ಮಿಲಿಯನ್ ಡಾಲರ್ ನೆರವಿನ ಬಗ್ಗೆಯೂ ಮಾತನಾಡಿದ್ದಾರೆ.

ರಿಪಬ್ಲಿಕನ್ ಗವರ್ನರ್ಸ್ ಅಸೋಸಿಯೇಷನ್ ​​(RGA) ಸಭೆಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಭಾರತದಲ್ಲಿ ಚುನಾವಣೆಗಾಗಿ ರೂ. 21 ಮಿಲಿಯನ್ ಡಾಲರ್ ಕಳುಹಿಸಲಾಗಿದೆ. ಭಾರತದಲ್ಲಿನ ಚುನಾವಣೆ ಬಗ್ಗೆ ನಾವೇಕೆ ತಲೆಕೆಡಿಸಿಕೊಳ್ಳಬೇಕು. ನಮ್ಮಲ್ಲಿಯೇ ಸಾಕಷ್ಟು ಸಮಸ್ಯೆಯಿದೆ. ನಮಗೆ ನಮ್ಮದೇ ಮತದಾನ ಬೇಕು ಅಲ್ಲವೇ? ಇಷ್ಟೆಲ್ಲಾ ಹಣ ಭಾರತಕ್ಕೆ ಹೋಗಿದೆ ಎಂಬುದನ್ನು ನೀವು ಊಹಿಸಬಲ್ಲಿರಾ? ಅದನ್ನು ಪಡೆದಾಗ ಅವರು ಯಾವ ರೀತಿ ಯೋಚಿಸುತ್ತಾರೆ ಎಂಬುದು ನನಗೆ ಆಶ್ಚರ್ಯವನ್ನುಂಟು ಮಾಡಿತು. ಈಗ ಇದು ಕಿಕ್‌ಬ್ಯಾಕ್ ಯೋಜನೆಯಾಗಿದೆ. ಅದನ್ನು ಅವರು ಪಡೆದು ಖರ್ಚು ಮಾಡುವುದಿಲ್ಲ. ಅದನ್ನು ಜನರಿಗೆ ಕಳುಹಿಸಿದ್ದಾರೆ ಎಂದರು.

ಅನೇಕ ಸಂದರ್ಭಗಳಲ್ಲಿ ಈ ಪ್ರಕರಣ ಕುರಿತು ಹೇಳಿದ್ದೇನೆ. ಎಲ್ಲಾ ವೇಳೆಯಲ್ಲಿಯೂ ನಾವು ಏನು ಮಾತನಾಡುತ್ತಿದ್ದೇವೆ ಎಂಬುದರ ಬಗ್ಗೆ ಗೊತ್ತಿರುವುದಿಲ್ಲ. ಅಂದರೆ ಭಾರತದಲ್ಲಿ ಏನಾಗುತ್ತಿದೆ ಎಂದು ಯಾರಿಗೂ ತಿಳಿದಿಲ್ಲ. ಏಕೆಂದರೆ ಅಲ್ಲಿ ಕಿಕ್‌ಬ್ಯಾಕ್ ಪಡೆಯಲಾಗಿದೆ ಎಂದು ಆರೋಪಿಸಿದ ಟ್ರಂಪ್, ಬಾಂಗ್ಲಾದೇಶದಲ್ಲಿ ರಾಜಕೀಯ ಸ್ಥಿರತೆ ಬಲವರ್ಧನೆಗಾಗಿ 29 ಮಿಲಿಯನ್ ಕೊಡುತ್ತಾರೆ ಅಂದ್ರೆ ಏನರ್ಥ? ಎಂದು ಕಿಡಿಕಾರಿದರು.

ನೇಪಾಳಕ್ಕೆ ಜೀವ ವೈವಿಧ್ಯತೆಗಾಗಿ $19 ಮಿಲಿಯನ್, ಏಷ್ಯಾದಲ್ಲಿ ಕಲಿಕೆಯ ಫಲಿತಾಂಶಗಳನ್ನು ಸುಧಾರಿಸಲು $47 ಮಿಲಿಯನ್ ನೀಡಲಾಗಿದೆ. ನಮ್ಮಲ್ಲಿಯೇ ಸಾಕಷ್ಟು ಸಮಸ್ಯೆಯಿದೆ. ಇವೆಲ್ಲವನ್ನೂ ಅಂತ್ಯಗೊಳಿಸಬೇಕಾಗಿದೆ. ಈ ನೆರವು ನೀಡಿದ್ದವರನ್ನು ನಾವು ಮನೆಗೆ ಕಳುಹಿಸಿದ್ದೇವೆ. ಇನ್ನೂ ಅನೇಕ ಭಯಾನಕ ವಿಚಾರಗಳಿದ್ದು, ವಾಸ್ತವವಾಗಿ ಅಸಹ್ಯಕರವಾಗಿವೆ. ಆದರೆ ಅವೆಲ್ಲಾವನ್ನೂ ಹೇಳಲು ಈಗ ಆಗದು. ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಈಗ ಅಂತ್ಯ ಹಾಡಿದ್ದೇವೆ ಎಂದರು.

ಅಮೆರಿಕ ಅಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯಿಸಿದ ಭಾರತೀಯ ಜನತಾ ಪಕ್ಷದ ನಾಯಕ ಅಮಿತ್ ಮಾಳವಿಯಾ, ಪರೋಕ್ಷವಾಗಿ ಕಾಂಗ್ರೆಸ್ ಇದರ ಲಾಭ ಪಡೆದಿರುವುದಾಗಿ ಹೇಳಿದ್ದಾರೆ. ಕಿಕ್ ಬ್ಯಾಕ್ ಆರೋಪದಲ್ಲಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ಫಲಾನುಭವಿಯಾಗಿದ್ದರೆ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಬಂಡರಿಯಾ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT