ಸಾಂದರ್ಭಿಕ ಚಿತ್ರ 
ವಿದೇಶ

ಸುಡಾನ್ ಮಿಲಿಟರಿ ವಿಮಾನ ಅಪಘಾತ: ಸೇನಾ ಅಧಿಕಾರಿಗಳು, ನಾಗರಿಕರು ಸೇರಿದಂತೆ 10 ಜನರ ಸಾವು

ಸೇನಾ ವಿಮಾನವು ವಾಯು ನೆಲೆಯಿಂದ ಟೇಕ್ ಆಫ್ ಆಗುವ ಸಮಯದಲ್ಲಿ ಪತನಗೊಂಡಿದ್ದು, ಸೇನಾ ಸಿಬ್ಬಂದಿ, ನಾಗರಿಕರು ಸಾವನ್ನಪ್ಪಿದ್ದಾರೆ.

ಖಾರ್ಟೂಮ್: ರಾಜಧಾನಿ ಖಾರ್ಟೂಮ್‌ನ ಹೊರವಲಯದಲ್ಲಿ ಮಂಗಳವಾರ ಸೂಡಾನ್ ಮಿಲಿಟರಿ ವಿಮಾನವೊಂದು ಪತನಗೊಂಡಿದ್ದು, ಹಲವಾರು ಅಧಿಕಾರಿಗಳು,ನಾಗರಿಕರು ಸೇರಿದಂತೆ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಎಂದು ಸೇನೆ ಹೇಳಿದೆ.

ಸೇನಾ ವಿಮಾನವು ವಾಯು ನೆಲೆಯಿಂದ ಟೇಕ್ ಆಫ್ ಆಗುವ ಸಮಯದಲ್ಲಿ ಪತನಗೊಂಡಿದ್ದು, ಸೇನಾ ಸಿಬ್ಬಂದಿ, ನಾಗರಿಕರು ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಗ್ನಿಶಾಮಕ ತಂಡಗಳು ಅಪಘಾತದ ಸ್ಥಳದಲ್ಲಿ ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ" ಎಂದು ಸೇನೆ ತಡರಾತ್ರಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.

ತಾಂತ್ರಿಕ ದೋಷದಿಂದ ಆಂಟೊನೊವ್ ವಿಮಾನ ಪತನವಾಗಿರುವುದಾಗಿ ಮಿಲಿಟರಿ ಮೂಲವೊಂದು ಈ ಹಿಂದೆ ಸುದ್ದಿಸಂಸ್ಥೆ ಎಎಫ್‌ಪಿಗೆ ತಿಳಿಸಿತ್ತು.

ವಾಡಿ ಸೀಡ್ನಾ ವಾಯುನೆಲೆಯ ಬಳಿ ಅಪಘಾತ ಸಂಭವಿಸಿದೆ. ಇದು ಒಮ್ದುರ್ಮನ್‌ನಲ್ಲಿರುವ ಸೇನೆಯ ಅತಿದೊಡ್ಡ ಸೇನಾ ಕೇಂದ್ರಗಳಲ್ಲಿ ಒಂದಾಗಿದೆ.

ಸುಡಾನ್‌ನಾದ್ಯಂತ ನೆರವು ನೀಡುವ ಸ್ವಯಂಸೇವಕರನ್ನು ಹೊಂದಿರುವ ಕರಾರಿ ರೆಸಿಸ್ಟೆನ್ಸ್ ಕಮಿಟಿ, 10 ಮೃತದೇಹಗಳು ಮತ್ತು ಗಾಯಾಳುಗನ್ನು ಓಮ್‌ಡುರ್‌ಮನ್‌ನಲ್ಲಿರುವ ಅಲ್-ನಾವೊ ಆಸ್ಪತ್ರೆಗೆ ದಾಖಲಿಸಿರುವುದಾಗಿ ವರದಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT