ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ನ ನೈಟ್ ಕ್ಲಬ್ ವೊಂದ ಹೊರಗಡೆ ಬುಧವಾರ ರಾತ್ರಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ಗುರುವಾರ ವರದಿ ಮಾಡಿದೆ.
ಜಮೈಕಾದ ಅಮಾಜುರಾ ನೈಟ್‌ಕ್ಲಬ್ ಬಳಿ ರಾತ್ರಿ ಸುಮಾರು 11-20ಕ್ಕೆ ಸಂಭವಿಸಿದೆ. ಸಂತ್ರಸ್ತರನ್ನು ಲಾಂಗ್ ಐಲ್ಯಾಂಡ್ ಯಹೂದಿ ಆಸ್ಪತ್ರೆ ಮತ್ತು ಕೋಹೆನ್ಸ್ ಚಿಲ್ಡ್ರನ್ ಮೆಡಿಕಲ್ ಸೆಂಟರ್ ಸೇರಿದಂತೆ ಸಮೀಪದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ನ್ಯೂಯಾರ್ಕ್ ಸಿಟಿ ಪೊಲೀಸ್ ಡಿಪಾರ್ಟ್ ಮೆಂಟ್ ತಿಳಿಸಿದೆ.
ಗಾಯಾಳುಗಳಲ್ಲಿ ಯಾರೂ ಗಂಭೀರ ಸ್ಥಿತಿಯಲ್ಲಿ ಇಲ್ಲ. ಎಲ್ಲರೂ ಬದುಕುಳಿಯುವ ನಿರೀಕ್ಷೆಯಿದೆ ಎಂದು NYPD ತಿಳಿಸಿರುವುದಾಗಿ ನ್ಯೂಕಾರ್ಯ್ ಪೋಸ್ಟ್ ವರದಿ ಮಾಡಿದೆ. ಸಿಟಿಜನ್ ಆ್ಯಪ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ದೃಶ್ಯಾವಳಿಗಳಲ್ಲಿ ಕ್ಲಬ್‌ನ ಹೊರಗೆ ಪೊಲೀಸ್ ಮತ್ತು ಆಂಬ್ಯುಲೆನ್ಸ್ ಹೆಚ್ಚಿನ ಸಂಖ್ಯೆಯಲ್ಲಿ ಇರುವುದನ್ನು ತೋರಿಸುತ್ತದೆ.
4,000 ಜನರಿಗೆ ಅವಕಾಶ ಕಲ್ಪಿಸುವ ವಿಶಾಲವಾದ ಒಳಾಂಗಣವಿರುವ ಅಮಾಜುರಾ, ಆಗಾಗ್ಗೆ DJ ಗಳು ಮತ್ತು ಲೈವ್ ಈವೆಂಟ್‌ಗಳನ್ನು ಆಯೋಜಿಸುತ್ತದೆ. ನ್ಯೂ ಓರ್ಲಿಯನ್ಸ್‌ನಲ್ಲಿ 15 ಜೀವಗಳನ್ನು ಬಲಿತೆಗೆದುಕೊಂಡ ದಾಳಿಯಂತೆ ನ್ಯೂಯಾರ್ಕ್ ನಗರದಲ್ಲಿಯೂ ಸಾಮೂಹಿಕ ಗುಂಡಿನ ದಾಳಿ ನಡೆದಿದೆ.