ಬೋಸ್ಟನ್‌ನಲ್ಲಿ ನಡೆದ ಕೋಲ್ಡ್‌ಪ್ಲೇ ಸಂಗೀತ ಕಚೇರಿಯ ವಿಡಿಯೊ ವೈರಲ್ ಆದ ನಂತರ ಖಗೋಳಶಾಸ್ತ್ರಜ್ಞ ಸಿಇಒ ಆಂಡಿ ಬೈರನ್ ಅವರ ಪತ್ನಿ ಮೇಗನ್ ಕೆರ್ರಿಗನ್ ಬೈರನ್ ತಮ್ಮ ಸರ್ ನೇಮ್ ನ್ನು ಸೋಷಿಯಲ್ ಮೀಡಿಯಾ ಖಾತೆಯಿಂದ ಅಳಿಸಿಹಾಕಿದ್ದು ಅವರ ಸಂಸಾರದಲ್ಲಿ ಅಲ್ಲೋಲಕಲ್ಲೋಲ ಹುಟ್ಟುಹಾಕಿದೆ ಎನ್ನಲಾಗಿದೆ.
ಮೇಗನ್ ಕೆರ್ರಿಗನ್ ಬೈರನ್ ಮತ್ತು ಚೀಫ್ ಪೀಪಲ್ ಆಫೀಸರ್ ಕ್ರಿಸ್ಟಿನ್ ಕ್ಯಾಬೋಟ್ ಕಾರ್ಯಕ್ರಮದ ಕಿಸ್ ಕ್ಯಾಮ್‌ನಲ್ಲಿ ತಬ್ಬಿಕೊಳ್ಳುತ್ತಿರುವುದು ಭಾರೀ ವೈರಲ್ ಆಗಿದ್ದು ಇಬ್ಬರಿಗೂ ಮುಜುಗರವನ್ನುಂಟುಮಾಡಿದೆ. ಇದು ಆಂಡಿ ಬೈರನ್ ದಾಂಪತ್ಯದಲ್ಲಿ ವಂಚನೆ ಮಾಡಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಅವರನ್ನು ಹತ್ತಿರದಿಂದ ನೋಡಿದ ವೀಕ್ಷಕರು ಅವರ ಸಂಬಂಧವನ್ನು ಪ್ರಶ್ನಿಸುತ್ತಿದ್ದಾರೆ.
ಆಂಡಿ ಬೈರನ್ ನ್ಯೂಯಾರ್ಕ್ ಮೂಲದ ಡೇಟಾ ಮತ್ತು ಎಐ ಕಂಪನಿಯಾದ ಆಸ್ಟ್ರೋನೊಮರ್‌ನ ಸಿಇಒ ಆಗಿದ್ದಾರೆ. ಅವರು ಜುಲೈ 2023 ರಲ್ಲಿ ಈ ಹುದ್ದೆಯನ್ನು ವಹಿಸಿಕೊಂಡರು. ಕ್ರಿಸ್ಟಿನ್ ಕ್ಯಾಬೋಟ್ ನವೆಂಬರ್ 2024 ರಲ್ಲಿ ಚೀಫ್ ಪೀಪಲ್ ಆಫೀಸರ್ ಆಗಿ ಕಂಪನಿಯನ್ನು ಸೇರಿದರು. ಅವರು 20 ವರ್ಷಗಳಿಗೂ ಹೆಚ್ಚು ಕಾಲ ಹೆಚ್ ಆರ್ ಕೆಲಸ ಮಾಡಿದ್ದಾರೆ.
ಅವರಿಬ್ಬರೂ ಆಸ್ಟ್ರೋನೊಮರ್‌ನಲ್ಲಿ ಉನ್ನತ ಹುದ್ದೆಗಳನ್ನು ಹೊಂದಿದ್ದಾರೆ. ಕಂಪನಿಯ ಮೌಲ್ಯ 1.2 ಮಿಲಿಯನ್ ಡಾಲರ್ ಆಗಿದೆ. ಬೋಸ್ಟನ್‌ನಲ್ಲಿ ನಡೆದ ಕೋಲ್ಡ್‌ಪ್ಲೇ ಸಂಗೀತ ಕಚೇರಿಯಲ್ಲಿ ನಡೆದ ಘಟನೆಯ ನಂತರ ಇಬ್ಬರೂ ಇತ್ತೀಚೆಗೆ ಸಾರ್ವಜನಿಕ ಗಮನದಲ್ಲಿದ್ದರು. ಬುಧವಾರ ರಾತ್ರಿ, ಆಂಡಿ ಬೈರನ್ ಮತ್ತು ಕ್ರಿಸ್ಟಿನ್ ಕ್ಯಾಬೋಟ್ ಜಿಲೆಟ್ ಕ್ರೀಡಾಂಗಣದಲ್ಲಿ ಕೋಲ್ಡ್‌ಪ್ಲೇಯ ಸಂಗೀತ ಕಚೇರಿಗೆ ಹಾಜರಾಗಿದ್ದರು.
ಬ್ಯಾಂಡ್ ಪ್ರದರ್ಶನ ನೀಡುತ್ತಿರುವಾಗ, ಕ್ಯಾಮೆರಾ ಪ್ರೇಕ್ಷಕರ ಮೇಲೆಲ್ಲಾ ಚಲಿಸಿತು. "ಕಿಸ್ ಕ್ಯಾಮ್" ಇಬ್ಬರು ಕಾರ್ಯನಿರ್ವಾಹಕರನ್ನು ತೋರಿಸಿದಾಗ ಆ ಕ್ಷಣ ಗಮನಾರ್ಹವಾಗಿತ್ತು. ಅವರು ಹತ್ತಿರದಲ್ಲಿ ನಿಂತಿರುವುದನ್ನು, ಪರಸ್ಪರ ತೋಳುಗಳನ್ನು ಸುತ್ತುವರೆದಿರುವುದನ್ನು ಕಾಣಬಹುದು.
ಆಗಿದ್ದೇನು?
ಇತ್ತೀಚೆಗೆ ಅಮೆರಿಕದ ಬೋಸ್ಟನ್‌ನಲ್ಲಿ ಕೋಲ್ಡ್ ಪ್ಲೇ ಸಂಗೀತ ಕಚೇರಿ ನಡೆದಿತ್ತು. ಈ ಹಂತದಲ್ಲಿ ಗಾಯಕ ಕ್ರಿಸ್ ಮಾರ್ಟಿನ್ ಪ್ರೇಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ ಎನ್ನುವಂತೆ ಕಿಸ್‌ಕ್ಯಾಮ್‌ಅನ್ನು ಹಾರಿಬಿಟ್ಟಿದ್ದರು. ಕಿಸ್ ಕ್ಯಾಮ್ ಹಾರುತ್ತಾ ಆಸ್ಟ್ರೋನಾಮರ್ ಸಿಇಒ ಆಂಡಿ ಬೈರಾನ್ ಅವರ ಬಳಿ ಬಂದಿದೆ. ಈ ವೇಳೆ ಆಂಡಿ ಬೈರಾನ್, ಒಬ್ಬ ಹುಡುಗಿಯನ್ನು ಹಿಂದಿನಿಂದ ತಬ್ಬಿಕೊಂಡು ನಿಂತಿದ್ದರು.
ಕಿಸ್‌ಕ್ಯಾಮ್ ಬಳಿ ಬಂದು ಅವರ ವಿಡಿಯೋ ದೈತ್ಯ ಪರದೆಯಲ್ಲಿ ಪ್ರಸಾರವಾಗುತ್ತಿದ್ದಂತೆ ಆಂಡಿ ಬೈರಾನ್ ಅಡಗಿಕೊಳ್ಳಲು ಆರಂಭಿಸಿದ್ದರು. ಅದಕ್ಕೆ ಕಾರಣವೂ ಇತ್ತು. ಆಂಡಿ ಬೈರಾನ್ ತಬ್ಬಿಕೊಂಡಿದ್ದ ಹುಡುಗಿ ಬೇರೆ ಯಾರೂ ಆಗಿರಲಿಲ್ಲ. ಆಸ್ಟ್ರೋನಾಮರ್ ಕಂಪನಿಯ ಚೀಫ್ ಪೀಪಲ್ ಆಫೀಸರ್ ಕ್ರಿಸ್ಟಿನ್ ಕ್ಯಾಬೋಟ್ ಆಗಿದ್ದರು. ಇಲ್ಲಿಯವರೆಗೂ ಸೀಕ್ರೆಟ್ ಆಗಿದ್ದ ಅಫೇರ್ ಕೋಲ್ಡ್ ಪ್ಲೇ ಸಂಗೀತ ಕಚೇರಿಯ ಕಿಸ್ ಕ್ಯಾಮ್ ಮೂಲಕ ಜಗತ್ತಿಗೆ ಗೊತ್ತಾಗಿತ್ತು.