ಸಂಗ್ರಹ ಚಿತ್ರ 
ವಿದೇಶ

BLA guerrilla war: ಸೇನಾಧಿಕಾರಿ ಸೇರಿ 23 ಪಾಕಿಸ್ತಾನ ಸೈನಿಕರ ಹತ್ಯೆ!

ಬಲೂಚಿಸ್ತಾನದ ವಿವಿಧ ಪ್ರದೇಶಗಳಲ್ಲಿ ಏಕಕಾಲದಲ್ಲಿ ಹಲವಾರು ಸಶಸ್ತ್ರ ಕಾರ್ಯಾಚರಣೆಗಳನ್ನು ನಡೆಸಿದ ಹೊಣೆಯನ್ನು ಬಲೂಚಿಸ್ತಾನ ಲಿಬರೇಶನ್ ಆರ್ಮಿ (BLA) ಹೊತ್ತುಕೊಂಡಿದೆ.

ಬಲೂಚಿಸ್ತಾನದ ವಿವಿಧ ಪ್ರದೇಶಗಳಲ್ಲಿ ಏಕಕಾಲದಲ್ಲಿ ಹಲವಾರು ಸಶಸ್ತ್ರ ಕಾರ್ಯಾಚರಣೆಗಳನ್ನು ನಡೆಸಿದ ಹೊಣೆಯನ್ನು ಬಲೂಚಿಸ್ತಾನ ಲಿಬರೇಶನ್ ಆರ್ಮಿ (BLA) ಹೊತ್ತುಕೊಂಡಿದೆ. ತನ್ನ ಹೋರಾಟಗಾರರು ಪಾಕಿಸ್ತಾನ ಸೇನೆಯ ಕನಿಷ್ಠ 23 ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಅವರಲ್ಲಿ ಒಬ್ಬ ಉನ್ನತ ಅಧಿಕಾರಿಯೂ ಸೇರಿದ್ದು ಮಿಲಿಟರಿ ಸೌಲಭ್ಯಗಳು ಮತ್ತು ಗುಪ್ತಚರ ಆಸ್ತಿಗಳಿಗೆ ಭಾರೀ ಹಾನಿಯನ್ನುಂಟು ಮಾಡಿದ್ದಾರೆ ಎಂದು ಬಲೂಚಿಸ್ತಾನ ಪೋಸ್ಟ್ ವರದಿ ಮಾಡಿದೆ.

ಬಲೂಚಿಸ್ತಾನ ಪೋಸ್ಟ್ ಪ್ರಕಾರ, ಬಿಎಲ್‌ಎ ವಕ್ತಾರ ಜಿಯಾಂಡ್ ಬಲೂಚ್ ಗುಂಪಿನ ಹೋರಾಟಗಾರರು ಮಸ್ತುಂಗ್, ಕಲಾತ್, ಜಮುರಾನ್, ಬುಲೆಡಾ ಮತ್ತು ಕ್ವೆಟ್ಟಾ ಮುಂತಾದ ಸ್ಥಳಗಳಲ್ಲಿ ಪಾಕಿಸ್ತಾನ ಸೇನೆಯನ್ನು ಗುರಿಯಾಗಿಸಿಕೊಂಡಿದ್ದಾರೆ. ನುಷ್ಕಿ, ದಲ್ಬಂದಿನ್ ಮತ್ತು ಪಂಜ್‌ಗುರ್‌ಗಳಲ್ಲಿಯೂ ದಾಳಿ ನಡೆಸಿದ್ದಾರೆ ಎಂದು ತಿಳಿಸಿದರು.

ಜುಲೈ 22ರಂದು ಕಲಾತ್‌ನ ಕೊಹಕ್ ಪ್ರದೇಶದಲ್ಲಿ ಅತ್ಯಂತ ಗಮನಾರ್ಹವಾದ ಎನ್‌ಕೌಂಟರ್‌ಗಳಲ್ಲಿ ಒಂದು ನಡೆದಿದ್ದು, ಅಲ್ಲಿ ಪಾಕಿಸ್ತಾನಿ ಪಡೆಗಳು ಮುನ್ನಡೆಯಲು ಪ್ರಯತ್ನಿಸುತ್ತಿದ್ದವು ಎಂದು ಬಿಎಲ್‌ಎ ವರದಿ ಮಾಡಿದೆ. ಕಾರ್ಯಾಚರಣೆಯಲ್ಲಿ ಮೂರು ಮಿಲಿಟರಿ ವಾಹನಗಳನ್ನು ಸ್ಫೋಟಿಸಲಾಯಿತು. ಇದರ ಪರಿಣಾಮವಾಗಿ 13 ಸೈನಿಕರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಬಿಎಲ್‌ಎ ಹೇಳಿಕೊಂಡಿದೆ.

ಮಸ್ತುಂಗ್‌ನ ತಲ್ಖ್ ಖಾವಿ ಪ್ರದೇಶದಲ್ಲಿ, ಬಿಎಲ್‌ಎ ಹೋರಾಟಗಾರರು ಮಿಲಿಟರಿ ಸಿಬ್ಬಂದಿಯನ್ನು ಗುರಿಯಾಗಿಸಲು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿದ್ದಾರೆ ಎಂದು ವರದಿಯಾಗಿದೆ. ಇದರ ಪರಿಣಾಮವಾಗಿ ಮೇಜರ್ ಜಿಯಾದ್ ಎಂಬ ಹಿರಿಯ ಅಧಿಕಾರಿ ಸೇರಿದಂತೆ ಆರು ಜನರು ಸಾವನ್ನಪ್ಪಿದ್ದು ಮೂವರು ಗಾಯಗೊಂಡಿದ್ದಾರೆ. ಇದರ ನಂತರ ಮಸ್ತುಂಗ್‌ನ ಅಬ್ ಗುಲ್ ಪ್ರದೇಶದಲ್ಲಿ ಐಇಡಿ ದಾಳಿ ನಡೆಯಿತು. ಇದು ಇನ್ನೂ ಇಬ್ಬರು ಜನರನ್ನು ಬಲಿ ತೆಗೆದುಕೊಂಡಿತ್ತು. ನಾಲ್ವರು ಗಾಯಗೊಂಡರು ಎಂದು ವರದಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕ್ಸಿ ಜಿನ್‌ಪಿಂಗ್ ಜತೆ ಮಾತುಕತೆ: ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪ

ಜನರನ್ನು ಮೂರ್ಖರನ್ನಾಗಿಸುವವನೇ ಶ್ರೇಷ್ಠ ನಾಯಕ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುವ 'ಎಜುಕೇಟ್ ಗರ್ಲ್ಸ್' NGOಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

Rain Alert: ರಾಜ್ಯಾದ್ಯಂತ ಮುಂದಿನ 5 ದಿನ ಭಾರಿ ಮಳೆ; ಬೆಂಗಳೂರು, ಕರಾವಳಿ ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!

ಬೆಂಗಳೂರು: ಪಿಜಿಯಲ್ಲಿ ಮಲಗಿದ್ದ ಯುವತಿಗೆ ಲೈಂಗಿಕ ಕಿರುಕುಳ, ನಗದು ದೋಚಿ ಪರಾರಿ!

SCROLL FOR NEXT