ತಾನ್ಯಾ ತ್ಯಾಗಿ 
ವಿದೇಶ

ಕೆನಡಾದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿನಿ ತಾನ್ಯಾ ತ್ಯಾಗಿ ನಿಗೂಢ ಸಾವು

ವಿದ್ಯಾರ್ಥಿನಿಯ ಸಾವಿನ ಹಿಂದಿನ ಕಾರಣವನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ ಎನ್ನಲಾಗಿದೆ.

ಒಟ್ಟಾವಾ: ಕೆನಡಾದಲ್ಲಿ ಮತ್ತೋರ್ವ ಭಾರತೀಯ ವಿದ್ಯಾರ್ಥಿನಿಯ ಸಾವಿನ ಸುದ್ದಿ ಬೆಳಕಿಗೆ ಬಂದಿದೆ. ಕೆನಡಾದ ಕ್ಯಾಲ್ಗರಿ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಭಾರತೀಯ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿರುವುದಾಗಿ ವ್ಯಾಂಕೋವರ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಗುರುವಾರ ಮಾಹಿತಿ ನೀಡಿದೆ.

ಭಾರತೀಯ ವಿದ್ಯಾರ್ಥಿನಿಯ ನಿಧನದ ಸುದ್ದಿಯನ್ನು ಕಾನ್ಸುಲೇಟ್ ಟ್ವೀಟ್ ಮೂಲಕ ತಿಳಿಸಿದ್ದು, ಭಾರತೀಯ ವಿದ್ಯಾರ್ಥಿನಿ ತಾನ್ಯಾ ತ್ಯಾಗಿ ಅವರ ನಿಧನದ ಸುದ್ದಿ ತಿಳಿಸಲು ವಿಷಾದ ವ್ಯಕ್ತಪಡಿಸುತ್ತೇವೆ.

ದೂತಾವಾಸ ಕೆನಡಾದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಮತ್ತು ತಾನ್ಯಾ ಅವರ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ಸಹಾಯವನ್ನು ನೀಡುವುದಾಗಿ ಹೇಳಿಕೊಂಡಿದೆ.

ವಿದ್ಯಾರ್ಥಿನಿಯ ಸಾವಿನ ಹಿಂದಿನ ಕಾರಣವನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ ಎನ್ನಲಾಗಿದೆ. ಎರಡು ತಿಂಗಳ ಮೊದಲು ಕೆನಡಾದಲ್ಲಿ ಮತ್ತೋರ್ವ ವಿದ್ಯಾರ್ಥಿನಿ ವಂಶಿಕಾ ನಾಪತ್ತೆಯಾಗಿದ್ದಳು ಇದಾಗಿ ನಾಲ್ಕು ದಿನಗಳ ಬಳಿಕ ವಂಶಿಕ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ, ಜ್ಞಾನೇಶ್ ಕುಮಾರ್ ದೇಶದ್ರೋಹಿಗಳು'; ನೂರಕ್ಕೆ ನೂರರಷ್ಟು ಎಲ್ಲಾ ಚುನಾವಣೆಗಳಲ್ಲೂ ಅಕ್ರಮ; ಸಂಚುಕೋರರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ

ಶ್ವೇತ ಭವನದಲ್ಲಿ ಕ್ಸಿ ಜಿನ್ ಪಿಂಗ್- ಟ್ರಂಪ್ ಮಹತ್ವದ ಸಭೆ: AI ಮಾನವನ ನಿಯಂತ್ರಣದಲ್ಲಿರಬೇಕು; ಅಮೆರಿಕಕ್ಕೆ ಚೀನಾ ಆಗ್ರಹ!

'ಎನ್‌ಕೌಂಟರ್'ನಲ್ಲಿ ನನ್ನನ್ನು ಕೊಲ್ಲಬಹುದು: ಜೀವ ಭಯದಲ್ಲಿ ಸೋನಂ ವಾಂಗ್‌ಚುಕ್!

'ಹಿಂದುತ್ವ ಯಾರ ವಿರುದ್ಧವೂ ಅಲ್ಲ; ಅದು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತದೆ': ಉಪರಾಷ್ಟ್ರಪತಿ ರಾಧಾಕೃಷ್ಣನ್

ಲೀವರ್ ಕ್ಯಾನ್ಸರ್ ಗೆ 'ವೆಲ್ ಕಮ್' ಖ್ಯಾತಿಯ ಹಿರಿಯ ಬಾಲಿವುಡ್ ನಟ ಮುಷ್ತಾಕ್ ಖಾನ್ ಬಲಿ!