ಚೀನಾ ಅಧ್ಯಕ್ಷ ಕ್ಸಿ-ಜಿನ್ ಪಿಂಗ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

ಅಮೆರಿಕ ಜತೆ ವ್ಯಾಪಾರ ಒಪ್ಪಂದ; ವಾಷಿಂಗ್ಟನ್ "ನಿರ್ಬಂಧಿತ ಕ್ರಮಗಳನ್ನು" ರದ್ದುಗೊಳಿಸಲಿದೆ ಎಂದ ಚೀನಾ

ಸುಂಕ ಹೆಚ್ಚಳ ವಿವಾದದ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್‌ನಲ್ಲಿ ಚೀನಾ ಜತೆ ವ್ಯಾಪಾರ ಒಪ್ಪಂದ ಪೂರ್ಣಗೊಂಡಿದೆ ಎಂದು ಹೇಳಿದ್ದರು.

ಬೀಜಿಂಗ್: ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದವನ್ನು ಚೀನಾ ಶುಕ್ರವಾರ ದೃಢಪಡಿಸಿದ್ದು, ವಾಷಿಂಗ್ಟನ್ "ನಿರ್ಬಂಧಿತ ಕ್ರಮಗಳನ್ನು" ತೆಗೆದುಹಾಕುತ್ತದೆ ಮತ್ತು ಬೀಜಿಂಗ್ ರಫ್ತು ನಿಯಂತ್ರಣಗಳ ಅಡಿಯಲ್ಲಿರುವ ವಸ್ತುಗಳನ್ನು "ಪರಿಶೀಲಿಸಿ ಅನುಮೋದಿಸುತ್ತದೆ" ಎಂದು ಹೇಳಿದೆ.

"ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ಶೀಘ್ರದಲ್ಲೇ ಪರಸ್ಪರ ಭೇಟಿಯಾಗುತ್ತವೆ ಎಂದು ಆಶಿಸುತ್ತೇವೆ" ಎಂದು ಚೀನಾ ವಾಣಿಜ್ಯ ಸಚಿವಾಲಯದ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಹಲವಾರು ಅಮೆರಿಕನ್ ಮಾಧ್ಯಮಗಳು ಅಮೆರಿಕ ಮತ್ತು ಚೀನಾ ಹೊಸ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವತ್ತ ಹೆಜ್ಜೆ ಇಡುತ್ತಿವೆ ಎಂದು ವರದಿ ಮಾಡಿದ್ದವು. ಸುಂಕ ಹೆಚ್ಚಳ ವಿವಾದದ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್‌ನಲ್ಲಿ ಚೀನಾ ಜತೆ ವ್ಯಾಪಾರ ಒಪ್ಪಂದ ಪೂರ್ಣಗೊಂಡಿದೆ ಎಂದು ಹೇಳಿದ್ದರು. ‘ಚೀನಾದೊಂದಿಗಿನ ನಮ್ಮ ಒಪ್ಪಂದ ಮುಗಿದಿದೆ’ ಎಂದು ಟ್ರಂಪ್ ಆಲ್-ಕ್ಯಾಪ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

"ಚೀನಾ ಜತೆಗಿನ ವ್ಯಾಪಾರ ಒಪ್ಪಂದಕ್ಕೆ ಈಗಷ್ಟೇ ಸಹಿ ಮಾಡಿದ್ದೇವೆ. ಎಲ್ಲರೊಂದಿಗೂ ನಾವು ಒಪ್ಪಂದ ಮಾಡಿಕೊಳ್ಳುವುದಿಲ್ಲ. ಆದರೆ ನಾವು ಕೆಲ ಒಳ್ಳೆಯ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಮುಂದಿನ ದಿನಗಳಲ್ಲಿ ಬಹುಶಃ ಭಾರತದ ಜತೆಗೆ ದೊಡ್ಡ ಒಪ್ಪಂದ ಮಾಡಿಕೊಳ್ಳಲಿದ್ದೇವೆ" ಎಂದು ಟ್ರಂಪ್ ಶ್ವೇತಭವನದಲ್ಲಿ ನಡೆದ ಸಮಾರಂಭದ ಬಳಿಕ ಹೇಳಿದ್ದಾರೆ.

ಮೇ ತಿಂಗಳಲ್ಲಿ ಜಿನೀವಾದಲ್ಲಿ ನಡೆದ ಮಾತುಕತೆಗಳ ನಂತರ, ವಾಷಿಂಗ್ಟನ್ ಮತ್ತು ಬೀಜಿಂಗ್ ಪರಸ್ಪರ ತಮ್ಮ ಉತ್ಪನ್ನಗಳ ಮೇಲಿನ ಟೈಟ್-ಫಾರ್-ಟ್ಯಾಟ್ ಸುಂಕಗಳನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲು ಒಪ್ಪಿಕೊಂಡಿವೆ.

ಕೆಲವು ಸುಂಕ ರಹಿತ ಪ್ರತಿಕ್ರಮಗಳನ್ನು ಸಡಿಲಿಸಲು ಚೀನಾ ಬದ್ಧವಾಗಿದೆ. ಆದರೆ ಅಮೆರಿಕದ ಅಧಿಕಾರಿಗಳು ನಂತರ ಬೀಜಿಂಗ್ ಒಪ್ಪಂದವನ್ನು ಉಲ್ಲಂಘಿಸುತ್ತಿದೆ ಮತ್ತು ಅಪರೂಪದ ಭೂಮಿಯ ರಫ್ತು ಪರವಾನಗಿ ಅನುಮೋದನೆಗಳನ್ನು ನಿಧಾನವಾಗಿ ನಡೆಸುತ್ತಿದೆ ಎಂದು ಆರೋಪಿಸಿದರು.

ಈ ತಿಂಗಳು ಲಂಡನ್‌ನಲ್ಲಿ ನಡೆದ ಮಾತುಕತೆಯ ನಂತರ ಎರಡೂ ಕಡೆಯವರು ಅಂತಿಮವಾಗಿ ತಮ್ಮ ಜಿನೀವಾ ಒಪ್ಪಂದದೊಂದಿಗೆ ಮುಂದುವರಿಯಲು ಉಭಯ ದೇಶಗಳು ಒಪ್ಪಿಕೊಂಡಿವೆ.

ಅಮೆರಿಕ ಜತೆ ಒಪ್ಪಂದಕ್ಕೆ ಬರಲಾಗಿದೆ ಎಂದು ಚೀನಾ ದೃಢಪಡಿಸಿದ್ದು, "ಲಂಡನ್ ಮಾತುಕತೆಗಳ ನಂತರ, ಎರಡೂ ಕಡೆಯ ತಂಡಗಳು ನಿಕಟ ಸಂವಹನವನ್ನು ಕಾಯ್ದುಕೊಂಡಿವೆ" ಎಂದು ಚೀನಾ ವಾಣಿಜ್ಯ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

"ಅಮೆರಿಕ, ಚೀನಾ ವಿರುದ್ಧದ ನಿರ್ಬಂಧಿತ ಕ್ರಮಗಳ ಸರಣಿಯನ್ನು ರದ್ದುಗೊಳಿಸುತ್ತದೆ" ಎಂದು ಬೀಜಿಂಗ್ ವಿಶ್ವಾಸ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT