ಟೈಗರ್ ವುಡ್ಸ್  
ವಿದೇಶ

ಡೊನಾಲ್ಡ್ ಟ್ರಂಪ್ ಮಾಜಿ ಸೊಸೆ ವನೆಸ್ಸಾ ಟ್ರಂಪ್ ಜೊತೆ ಸಂಬಂಧ ದೃಢಪಡಿಸಿದ Tiger Woods

ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿ ಗೌಪ್ಯವಾಗಿಟ್ಟುಕೊಳ್ಳುತ್ತಿದ್ದ ಟೈಗರ್ ವುಡ್ಸ್ ಈ ಸಂಬಂಧವನ್ನು ಬಹಿರಂಗವಾಗಿ ದೃಢೀಕರಿಸುವ ಫೋಟೋಗಳನ್ನು ಪ್ರಕಟಿಸಲು ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಸೊಸೆ ವನೆಸ್ಸಾ ಟ್ರಂಪ್ ಅವರ ಜೊತೆ ತಮ್ಮ ಸಂಬಂಧವನ್ನು ಅಮೆರಿಕದ ವೃತ್ತಿಪರ ಗಾಲ್ಫರ್ ಟೈಗರ್ ವುಡ್ಸ್ ದೃಢಪಡಿಸಿದ್ದಾರೆ, ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಟೈಗರ್ ವುಡ್ಸ್ ಎರಡು ಇಮೇಜ್ ಗಳೊಂದಿಗೆ "ಎಲ್ಲೆಡೆ ಪ್ರೀತಿ ತುಂಬಿದೆ" ಎಂದು ಬರೆದುಕೊಂಡಿದ್ದಾರೆ.

ಜೂನಿಯರ್ ಡೊನಾಲ್ಡ್ ಟ್ರಂಪ್ ಅವರನ್ನು ವಿವಾಹವಾಗಿದ್ದ ವನೆಸ್ಸಾ ಟ್ರಂಪ್ ತಮ್ಮ ಮಗಳು ಕೈ ಜೊತೆಗೆ ಜೆನೆಸಿಸ್ ಇನ್ವಿಟೇಷನಲ್ ಅಂತಿಮ ಸುತ್ತಿನ ವಿಜೇತರಿಗೆ ಟ್ರೋಫಿಯನ್ನು ಹಸ್ತಾಂತರಿಸಲು ಆಗಮಿಸಿದ್ದ ವೇಳೆ ಬಂದಿದ್ದರು.

ಟೈಗರ್ ವುಡ್ಸ್ ಅವರ ಇಬ್ಬರು ಮಕ್ಕಳಾದ ಸ್ಯಾಮ್ ಮತ್ತು ಚಾರ್ಲಿಯೊಂದಿಗೆ ಕೈ ಟ್ರಂಪ್ ಬೆಂಜಮಿನ್ ಶಾಲೆಗೆ ಹೋಗುತ್ತಿದ್ದಾರೆ. ಈ ವಾರ ನಡೆದ ಹೈ-ಪ್ರೊಫೈಲ್ ಜೂನಿಯರ್ ಗಾಲ್ಫ್ ಟೂರ್ನಮೆಂಟ್‌ನಲ್ಲಿ ಆಹ್ವಾನದ ಮೇರೆಗೆ ಕೈ ಟ್ರಂಪ್ ಮತ್ತು ಚಾರ್ಲಿ ಸ್ಪರ್ಧಿಸಿದ್ದರು.

ಪ್ರೀತಿ ಎಲ್ಲೆಡೆ ಕಾಣುತ್ತಿದೆ, ನೀನು ನನ್ನ ಪಕ್ಕದಲ್ಲಿದ್ದರೆ ಜೀವನ ಇನ್ನಷ್ಟು ಉತ್ತಮವಾಗಿದೆ! ನಾವು ಒಟ್ಟಿಗೆ ಜೀವನದ ಮೂಲಕ ನಮ್ಮ ಭವಿಷ್ಯದ ಪ್ರಯಾಣವನ್ನು ಎದುರು ನೋಡುತ್ತಿದ್ದೇವೆ" ಎಂದು ಟೈಗರ್ ವುಡ್ಸ್ ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಟೈಗರ್ ವುಡ್ಸ್ ಎಕ್ಸ್ ಖಾತೆಯಲ್ಲಿ 6.4 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.

ಒಂದು ಫೋಟೋದಲ್ಲಿ ವುಡ್ಸ್ ಮತ್ತು ವನೆಸ್ಸಾ ಟ್ರಂಪ್ ಒಟ್ಟಿಗೆ ಪೋಸ್ ನೀಡುತ್ತಿದ್ದರೆ, ಇನ್ನೊಂದು ಫೋಟೋದಲ್ಲಿ ಅವರು ತೂಗು ಮಂಚದಲ್ಲಿ ಮಲಗಿ ಎದೆಯ ಮೇಲೆ ತೋಳು ಕಟ್ಟಿಕೊಂಡು ಆಕಾಶದತ್ತ ನೋಡುತ್ತಿದ್ದಾರೆ.

ವುಡ್ಸ್ ಮತ್ತು ವನೆಸ್ಸಾ ಟ್ರಂಪ್ ಕಳೆದ ಕೆಲವು ವಾರಗಳಿಂದ ಗಾಸಿಪ್ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದರು. ಅವರು ಡೊನಾಲ್ಡ್ ಟ್ರಂಪ್ ಜೂನಿಯರ್ ಅವರನ್ನು ಮದುವೆಯಾಗಿ 12 ವರ್ಷ ಸಂಸಾರ ನಡೆಸಿ 5 ಮಕ್ಕಳನ್ನು ಹೊಂದಿದ್ದಾರೆ. ಮಾರ್ಚ್ 11 ರಂದು ಟೈಗರ್ ವುಡ್ಸ್ ತಮ್ಮ ಎಡಕೈ ನೋವಿನಿಂದ ಮಾಸ್ಟರ್ಸ್‌ ಪಂದ್ಯದಿಂದ ಹೊರಗುಳಿದರು.

ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿ ಗೌಪ್ಯವಾಗಿಟ್ಟುಕೊಳ್ಳುತ್ತಿದ್ದ ಟೈಗರ್ ವುಡ್ಸ್ ಈ ಸಂಬಂಧವನ್ನು ಬಹಿರಂಗವಾಗಿ ದೃಢೀಕರಿಸುವ ಫೋಟೋಗಳನ್ನು ಪ್ರಕಟಿಸಲು ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. 2013 ರಲ್ಲಿ ಅವರು ಮತ್ತು ಲಿಂಡ್ಸೆ ವಾನ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ದೃಢೀಕರಿಸಲು ಒಟ್ಟಿಗೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದರು.

ಹಲವು ವಿವಾಹೇತರ ಸಂಬಂಧಗಳನ್ನು ಹೊಂದಿದ್ದ ಟೈಗ ವುಡ್ಸ್ ಎಲಿನ್ ನಾರ್ಡೆಗ್ರೆನ್ ಅವರೊಂದಿಗಿನ ವಿವಾಹದಿಂದ ಇಬ್ಬರು ಮಕ್ಕಳನ್ನು ಹೊಂದಿ 2010 ರಲ್ಲಿ ವಿಚ್ಛೇದನ ಪಡೆದಿದ್ದರು. ನಂತರ ಅವರು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದ ಏಕೈಕ ಸಂಬಂಧ ಎರಿಕಾ ಹರ್ಮನ್ ಅವರೊಂದಿಗೆ ಆಗಿತ್ತು, ಇದು ಸುಮಾರು ಏಳು ವರ್ಷಗಳ ಕಾಲ ಮುಂದುವರಿದು 2022ರಲ್ಲಿ ವಿಚ್ಛೇದನ ಪಡೆದಿದ್ದರು. ಹರ್ಮನ್ ಅಂತಿಮವಾಗಿ ಟೈಗರ್ ವುಡ್ಸ್ ಮತ್ತು ಅವರು ವಾಸಿಸುತ್ತಿದ್ದ ಅವರ ದಕ್ಷಿಣ ಫ್ಲೋರಿಡಾ ಎಸ್ಟೇಟ್ ನಲ್ಲಿ ಜೀವನ ನಡೆಸಲು ಆರಂಭಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT