ರಫೇಲ್ ಯುದ್ಧ ವಿಮಾನ ಮತ್ತು ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ 
ವಿದೇಶ

India-Pak War: 'ಭಾರತದ 5 ರಫೆಲ್ ಯುದ್ಧ ವಿಮಾನ ಹೊಡೆದಿದ್ದೇವೆ'; ಸಾಕ್ಷಿ ಕೇಳಿದ ಪತ್ರಕರ್ತೆ; ಪಾಕ್ ಸಚಿವನ ಮಾತು ಕೇಳಿ ಸರ್ಕಾರ ಬೇಸ್ತು! Video

ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತದ ಐದು ರಫೆಲ್ ಜೆಟ್ ವಿಮಾನಗಳನ್ನು ಪಾಕಿಸ್ತಾನ ಸೇನೆ ಹೊಡೆದುರುಳಿಸಿದೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖಾಜಾ ಆಸಿಫ್ ಹೇಳಿಕೊಂಡಿದ್ದಾರೆ.

ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷ ಮುಂದುವರೆದಿರುವಂತೆಯೇ ಇತ್ತ ಪಾಕಿಸ್ತಾನ ರಕ್ಷಣಾ ಸಚಿವ ರಕ್ಷಣಾ ಸಚಿವ ಖವಾಜಾ ಆಸಿಫ್‌ ಭಾರತದ ಐದು ರಫೆಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಹೇಳಿಕೊಂಡಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಉಗ್ರ ದಾಳಿಗೆ ಉತ್ತರವಾಗಿ ಭಾರತ ನಡೆಸಿದ್ದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತದ ಐದು ರಫೆಲ್ ಜೆಟ್ ವಿಮಾನಗಳನ್ನು ಪಾಕಿಸ್ತಾನ ಸೇನೆ ಹೊಡೆದುರುಳಿಸಿದೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖಾಜಾ ಆಸಿಫ್ ಹೇಳಿಕೊಂಡಿದ್ದಾರೆ. ಆಂಗ್ಲ ಮಾಧ್ಯಮವೊಂದರ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ಖಾಜಾ ಆಸಿಫ್, 'ಭಾರತದ ತಡರಾತ್ರಿಯ ದಾಳಿಗೆ ಪ್ರತೀಕಾರವಾಗಿ 5 ಭಾರತೀಯ ಜೆಟ್‌ಗಳನ್ನು ಉರುಳಿಸಿದೆ. ಇದಕ್ಕೆ ಸಾಕ್ಷಿ ಕೂಡ ಇದೆ ಎಂದು ಹೇಳಿದ್ದಾರೆ.

ಸಿಎನ್ ಎನ್ ಸುದ್ದಿವಾಹಿನಿ (CNN news chanel ancor) ನಿರೂಪಕಿ, ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್‌ (pakistan defense minister khawaja asif) ಅವರಿಗೆ ಈ ಸುದ್ದಿ ನಿಜವೇ, ಜೆಟ್ ಗಳನ್ನು ಹೊಡೆದುರುಳಿಸಲು ಯಾವುದೇ ಚೀನಿ ಉಪಕರಣಗಳನ್ನು ಬಳಸಿದ್ದೀರಾ ಹೀಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಪಾಕ್ ರಕ್ಷಣಾ ಸಚಿವರು ತಡವರಿಸಿದ್ದಾರೆ. ಈ ವಿಡಿಯೋವನ್ನು amit schanddillia ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ.

ವಿಡಿಯೋದಲ್ಲಿ ಏನಿದೆ?

ಈ ವಿಡಿಯೋದಲ್ಲಿ ಸಿಎನ್ ಎನ್ ಸುದ್ದಿವಾಹಿನಿಯ ನಿರೂಪಕಿಯೊಬ್ಬರು ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್‌ ಭಾರತದ ತಡರಾತ್ರಿಯ ದಾಳಿಗೆ ಪ್ರತೀಕಾರವಾಗಿ 5 ಭಾರತೀಯ ಜೆಟ್‌ಗಳನ್ನು ಉರುಳಿಸಿದೆ ಎನ್ನುವ ಸುದ್ದಿಗೆ ಸಂಬಂಧ ಪಟ್ಟಂತೆ ಸ್ಪಷ್ಟನೆ ಕೇಳಿದ್ದಾರೆ.

ಸುದ್ದಿ ನಿರೂಪಕಿಯೂ, ಐದು ಭಾರತೀಯ ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂಬುದಕ್ಕೆ ಪುರಾವೆ ಎಲ್ಲಿದೆ? ಎಂದು ಪ್ರಶ್ನಿಸಿದ್ದು, ಪಾಕ್ ರಕ್ಷಣಾ ಸಚಿವರು, ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲೆಡೆ ಹರಡಿದೆ. ಭಾರತೀಯ ಸಾಮಾಜಿಕ ಮಾಧ್ಯಮದಲ್ಲಿ ಇದೆ ಎಂದು ಹೇಳಿದ್ದಾರೆ.

ಆ ಬಳಿಕ ಸುದ್ದಿನಿರೂಪಕಿ, ನೀವು ರಕ್ಷಣಾ ಸಚಿವರು. ನಾನು ನಿರ್ದಿಷ್ಟವಾಗಿ ನಿಮ್ಮಿಂದ ಪುರಾವೆ ಕೇಳುತ್ತಿದ್ದೇನೆ, ಸಾಮಾಜಿಕ ಮಾಧ್ಯಮದ ಬಗ್ಗೆ ಅಲ್ಲ ಎಂದು ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಉತ್ತರಿಸಲು ತಡವರಿಸಿದ ರಕ್ಷಣಾ ಸಚಿವ ಖಾಜಾ ಆಸಿಫ್, 'ಸಾಮಾಜಿಕ ಮಾಧ್ಯಮದಲ್ಲಿದೆ ಎಂದು ಹೇಳಿದ್ದಾರೆ. ಹಾಗಾದ್ರೆ ನೀವು ಆ ಜೆಟ್‌ಗಳನ್ನು ಹೊಡೆದುರುಳಿಸಲು ಯಾವುದೇ ಚೀನೀ ಉಪಕರಣಗಳನ್ನು ಬಳಸಿದ್ದೀರಾ? ಎಂದು ನಿರೂಪಕಿ ಕೇಳಿದ್ದು, ಈ ವೇಳೆ ಕೊಂಚ ತಬ್ಬಿಬ್ಬಾದ ಖವಾಜಾ ಆಸಿಫ್ 'ಭಾರತವು ಫ್ರಾನ್ಸ್‌ನಿಂದ ವಿಮಾನಗಳನ್ನು ಖರೀದಿಸಬಹುದಾದರೆ, ನಾವು ಚೀನಾದಿಂದ ಏಕೆ ಖರೀದಿಸಬಾರದು? ಎಂದು ಮರು ಪ್ರಶ್ನೆ ಕೇಳಿದ್ದಾರೆ.

ಕೊನೆಗೆ ನನ್ನ ಈ ಪ್ರಶ್ನೆಯನ್ನು ಪುನರಾವರ್ತಿಸುತ್ತೇನೆ, ಆ ವಿಮಾನಗಳನ್ನು ಹೊಡೆದುರುಳಿಸಲು ಯಾವುದೇ ಚೀನೀ ಉಪಕರಣಗಳನ್ನು ಬಳಸಲಾಗಿದೆಯೇ ಎಂದು ಕೇಳುತ್ತಿದ್ದಂತೆ, ಇದಕ್ಕೆ ಉತ್ತರ ನೀಡಿರುವ ಪಾಕ್ ರಕ್ಷಣಾ ಸಚಿವರು, ಇದು ನಾಯಿಗಳ ಕಾದಾಟ. ನೀವು ಯಾವ ರೀತಿಯ ಉಪಕರಣಗಳನ್ನು ಉಲ್ಲೇಖಿಸುತ್ತಿದ್ದೀರಿ? ಎಂದು ಮರುಪ್ರಶ್ನೆ ಮಾಡಿರುವುದನ್ನು ನೋಡಬಹುದು ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT