ಬಾಂಗ್ಲಾ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್- ಟರ್ಕಿ ಅಧ್ಯಕ್ಷ  online desk
ವಿದೇಶ

ಪಾಕ್ ಬಳಿಕ ಬಾಲ ಬಿಚ್ಚಿದ ಬಾಂಗ್ಲಾ: ಈಶಾನ್ಯ ರಾಜ್ಯಗಳನ್ನೊಳಗೊಂಡ ಗ್ರೇಟರ್ ಬಾಂಗ್ಲಾದೇಶ ನಕ್ಷೆ ಬಿಡುಗಡೆ; ಟರ್ಕಿ ಕುಮ್ಮಕ್ಕು!

ಯುವಕರು ಮತ್ತು ವಿದ್ಯಾರ್ಥಿಗಳು ಹೆಚ್ಚಾಗಿ ಭೇಟಿ ನೀಡುವ ಪ್ರದೇಶಗಳಾದ ಢಾಕಾದಾದ್ಯಂತದ ವಿಶ್ವವಿದ್ಯಾಲಯ ಸಭಾಂಗಣಗಳಲ್ಲಿ ನಕ್ಷೆ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಢಾಕಾ: ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದ ಟರ್ಕಿ ಈಗ ಬಾಂಗ್ಲಾದಲ್ಲೂ ಭಾರತ ವಿರೋಧಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದೆ. ಇದನ್ನು ಸ್ಪಷ್ಟಪಡಿಸುವ ಬೆಳವಣಿಗೆಯೊಂದು ಈಗ ಸುದ್ದಿಯಾಗುತ್ತಿದೆ.

ಅದೇನೆಂದರೆ, ಢಾಕಾದಲ್ಲಿರುವ ಟರ್ಕಿಶ್ ಬೆಂಬಲಿತ ಎನ್‌ಜಿಒ, ಭಾರತದ 7 ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ ನೇಪಾಳ, ಭೂತಾನ್ ಒಳಗೊಂಡ 'ಗ್ರೇಟರ್ ಬಾಂಗ್ಲಾದೇಶ'ದ ನಕ್ಷೆಗಳನ್ನು ಪ್ರದರ್ಶಿಸಿದೆ.

"ಗ್ರೇಟರ್ ಬಾಂಗ್ಲಾದೇಶ" ಎಂದು ಕರೆಯಲ್ಪಡುವ ಪ್ರದೇಶವು ಮ್ಯಾನ್ಮಾರ್‌ನ ಅರಾಕನ್ ರಾಜ್ಯ, ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಭಾರತದ ಸಂಪೂರ್ಣ ಈಶಾನ್ಯ ಪ್ರದೇಶವನ್ನು ಒಳಗೊಂಡಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಪ್ರಕಟಿಸಿವೆ.

ಯುವಕರು ಮತ್ತು ವಿದ್ಯಾರ್ಥಿಗಳು ಹೆಚ್ಚಾಗಿ ಭೇಟಿ ನೀಡುವ ಪ್ರದೇಶಗಳಾದ ಢಾಕಾದಾದ್ಯಂತದ ವಿಶ್ವವಿದ್ಯಾಲಯ ಸಭಾಂಗಣಗಳಲ್ಲಿ ನಕ್ಷೆ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಯೂನಸ್ ಆಡಳಿತಕ್ಕೆ ಬೆಂಬಲ ಸೂಚಿಸಿರುವ ಬಾಂಗ್ಲಾದ ಕೆಲವು ವ್ಯಕ್ತಿಗಳು ಈ ಹಿಂದೆ ಭಾರತದ ಈಶಾನ್ಯ ರಾಜ್ಯಗಳನ್ನು ಬಾಂಗ್ಲಾದೇಶಕ್ಕೆ ಸೇರಿಸಬೇಕು, ಅದಕ್ಕೆ ಚೀನಾ ಸಹಕರಿಸಬೇಕು ಎಂದು ಕರೆ ನೀಡಿದ್ದನ್ನು ನೆನಪಿಸಿಕೊಳ್ಳಬಹುದಾಗಿದೆ.

ಏಪ್ರಿಲ್‌ನಲ್ಲಿ, ಟಿಎಸ್‌ಸಿ, ಢಾಕಾ ವಿಶ್ವವಿದ್ಯಾಲಯದಿಂದ ಒಂದು ಚಿತ್ರ ಬಿಡುಗಡೆಯಾಗಿತ್ತು, ಅದರಲ್ಲಿ ಪೊಹೆಲಾ ಬೋಯಿಶಾಖ್ (ಬಾಂಗ್ಲಾ ಹೊಸ ವರ್ಷ) ಸಂದರ್ಭದಲ್ಲಿ "ಭಾರತದ ವಿವಿಧ ಭಾಗಗಳನ್ನು ಒಳಗೊಂಡಿರುವ ಸಲ್ತಾನತ್-ಇ-ಬಾಂಗ್ಲಾ ಎಂಬ ಗ್ರೇಟರ್ ಬಾಂಗ್ಲಾದೇಶದ ನಕ್ಷೆ"ಯೊಂದಿಗೆ ಒಬ್ಬ ವ್ಯಕ್ತಿ ಚಿತ್ರ ತೆಗೆದುಕೊಳ್ಳುತ್ತಿರುವುದನ್ನು ತೋರಿಸಲಾಗಿತ್ತು.

ಯೂನಸ್ ಆ ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ, ವಿಶೇಷವಾಗಿ ಹಿಂದೂಗಳ ಮೇಲಿನ ದಾಳಿಗಳನ್ನು ತಡೆಯುವಲ್ಲಿ ವಿಫಲವಾದ ನಂತರ ಭಾರತ-ಬಾಂಗ್ಲಾದೇಶ ಸಂಬಂಧಗಳು ಹದಗೆಟ್ಟಿವೆ.

ಯೂನಸ್ ಆಡಳಿತ ಅಧಿಕಾರಕ್ಕೆ ಬಂದ ನಂತರ ಹೆಚ್ಚಿದ ಟರ್ಕಿಶ್ ಮಿಲಿಟರಿ ತೊಡಗಿಸಿಕೊಳ್ಳುವಿಕೆ ಮತ್ತು NGO ಚಟುವಟಿಕೆಯೊಂದಿಗೆ ಈ ಬೆಳವಣಿಗೆ ಸೇರಿಕೊಂಡು, ಇಸ್ಲಾಮಿಸ್ಟ್ ಪ್ರಭಾವದ ಬಗ್ಗೆ ಕಳವಳ ವ್ಯಕ್ತವಾಗುತ್ತಿವೆ.

ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಟರ್ಕಿ ಬಾಂಗ್ಲಾದೇಶದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸುತ್ತಿದೆ. ಇದು ಪಾಕಿಸ್ತಾನ-ಟರ್ಕಿ- ಬಾಂಗ್ಲಾಗಳ ಕೂಟದ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಬಾಂಗ್ಲಾದೇಶದ ಸಶಸ್ತ್ರ ಪಡೆಗಳಿಗೆ ಪ್ರಸ್ತಾವಿತ ಮಿಲಿಟರಿ ಸರಬರಾಜುಗಳ ಮೂಲಕ ಟರ್ಕಿ ತನ್ನ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಿದೆ ಎಂದು ವರದಿಯಾಗಿದೆ.

ಆಡಳಿತಾರೂಢ AKP ಯೊಂದಿಗೆ ಹೊಂದಿಕೊಂಡಿರುವ ಟರ್ಕಿಶ್ NGOಗಳು ಬಾಂಗ್ಲಾದೇಶದಲ್ಲಿಯೂ ಹೆಚ್ಚು ಸಕ್ರಿಯವಾಗಿವೆ, ಕಳೆದ ವರ್ಷ ಆಗಸ್ಟ್‌ನಿಂದ ಪಾಕಿಸ್ತಾನ ಎರಡು ದೇಶಗಳನ್ನು ಹತ್ತಿರ ತರುವಲ್ಲಿ ಪಾತ್ರ ವಹಿಸಿದೆ ಎಂದು ಆರೋಪಿಸಲಾಗಿದೆ.

ಟರ್ಕಿಶ್ ವ್ಯವಹಾರಗಳ ತಜ್ಞರು ET ಗೆ ಬಾಂಗ್ಲಾದೇಶದ ಇಸ್ಲಾಮಿಸ್ಟ್‌ಗಳ ಮೇಲೆ ಮುಸ್ಲಿಂ ಬ್ರದರ್‌ಹುಡ್ ಪ್ರಭಾವದ ವ್ಯಾಪ್ತಿ ಮತ್ತು ಟರ್ಕಿಶ್ NGOಗಳ ಪಾತ್ರವನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT