ಟೋಕಿಯೊ: ಜಪಾನ್ ಕರಾವಳಿಯಲ್ಲಿ ಭಾನುವಾರ 6.7 ತೀವ್ರತೆಯ ಪ್ರಬ ಭೂಕಂಪ ಸಂಭವಿಸಿದ್ದು, ಜಪಾನ್‌ನ ಹವಾಮಾನ ಸಂಸ್ಥೆ ಇವಾಟೆ ಪ್ರಾಂತ್ಯಕ್ಕೆ ಸುನಾಮಿ ಎಚ್ಚರಿಕೆ ನೀಡಿದೆ ಎಂದು ಜಪಾನ್ ಟೈಮ್ಸ್ ವರದಿ ಮಾಡಿದೆ.
ಇಂದು ಸಂಜೆ 5:03(ಸ್ಥಳೀಯ ಸಮಯ) ಇವಾಟೆಯಲ್ಲಿ ಭೂಕಂಪ ಸಂಭವಿಸಿದ್ದು, ಒಂದು ಮೀಟರ್ (ಮೂರು ಅಡಿ) ಎತ್ತರದವರೆಗೆ ಸುನಾಮಿಯ ಸಾಧ್ಯತೆ ಇದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.
ಇದಕ್ಕೂ ಮೊದಲು, ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರವು ಜಪಾನ್‌ನ ಇವಾಟೆ ಪ್ರಾಂತ್ಯದ ಕರಾವಳಿಯ ಉತ್ತರ ಪೆಸಿಫಿಕ್ ಮಹಾಸಾಗರದ ಬಳಿ ಮಧ್ಯಾಹ್ನ 13:33 ಕ್ಕೆ 6.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹೇಳಿದೆ.
NCS ಪ್ರಕಾರ, ಭೂಕಂಪವು ಭೂಮಿಯ ಹೊರಪದರದ ಕೆಳಗೆ 30 ಕಿಮೀ ಆಳದಲ್ಲಿ ಸಂಭವಿಸಿದೆ.
ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ(NCS) ವರದಿ ಮಾಡಿರುವ ಪ್ರಕಾರ, ಉತ್ತರ ಪೆಸಿಫಿಕ್ ಮಹಾಸಾಗರದಲ್ಲಿ 39.51° N ಅಕ್ಷಾಂಶ ಮತ್ತು 143.38° E ರೇಖಾಂಶದಲ್ಲಿ 30 ಕಿ.ಮೀ ಆಳದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ.