ಪ್ಯಾರಿಸ್: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಕ್ಯಾಬಿನೆಟ್ ರಚಿಸಿದ ಕೆಲವೇ ಗಂಟೆಗಳಲ್ಲಿ ಪ್ರಧಾನಿ ಸೆಬಾಸ್ಟಿಯನ್ ಲೆಕೊರ್ನು ಅವರ ರಾಜೀನಾಮೆಯನ್ನು ಸೋಮವಾರ ಅಂಗೀಕರಿಸಿದ್ದಾರೆ. ಇದು ಯುರೋಪಿಯನ್ ರಾಷ್ಟ್ರವನ್ನು ರಾಜಕೀಯ ಅಸ್ತವ್ಯಸ್ತತೆಗೆ ದೂಡಿದೆ ಎಂದು ಅಧ್ಯಕ್ಷರ ಕಚೇರಿ ತಿಳಿಸಿದೆ.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಕಳೆದ ತಿಂಗಳು ಪ್ರಧಾನಿ ಹುದ್ದೆಗೆ ಮಾಜಿ ರಕ್ಷಣಾ ಸಚಿವ ಲೆಕೊರ್ನು ಅವರನ್ನು ಹೆಸರಿಸಿದ್ದರು. ಆದರೆ ಲೆಕೊರ್ನು ಅವರೊಂದಿಗೆ ಕೆಲಸ ಮಾಡಲು ರಾಜಕೀಯ ವಲಯದಲ್ಲಿ ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಭಾನುವಾರ ತಡರಾತ್ರಿ ಹೆಚ್ಚಿನ ಬದಲಾವಣೆಗಳನ್ನೊಳಗೊಂಡ ನೂತನ ಕ್ಯಾಬಿನೆಟ್ ನ್ನು ರಚಿಸಿದ್ದರು.
ಮುಂದಿನ ವರ್ಷದ ಬಜೆಟ್‌ಗೆ ಸಂಸತ್ತಿನಲ್ಲಿ ಅನುಮೋದನೆ ಪಡೆಯುವಲ್ಲಿ ಲೆಕೂರ್ನು ತೀವ್ರ ಸಮಸ್ಯೆ ಎದುರಿಸಿದ್ದರು. ಫ್ರಾನ್ಸ್‌ನ ಸಾರ್ವಜನಿಕ ಸಾಲ ದಾಖಲೆಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಅಧಿಕೃತ ಮಾಹಿತಿಯು ಕಳೆದ ವಾರ ತೋರಿಸಿದೆ.
ಫ್ರಾನ್ಸ್‌ನ ಸಾಲ-ಜಿಡಿಪಿ ಅನುಪಾತವು ಈಗ ಗ್ರೀಸ್ ಮತ್ತು ಇಟಲಿಯ ನಂತರ ಹೆಚ್ಚಾಗಿರುವ ಯುರೋಪಿಯನ್ ಒಕ್ಕೂಟದ ಮೂರನೇ ರಾಷ್ಟ್ರವಾಗಿದೆ. EU ನಿಯಮಗಳ ಅಡಿಯಲ್ಲಿ ಅನುಮತಿಸಲಾದ ಶೇ. 60ಕ್ಕಿಂತ ದುಪ್ಪಟ್ಟು ಸಾಲದ ಸನ್ನಿಹದಲ್ಲಿದೆ.
ಹಿಂದಿನ ಸರ್ಕಾರಗಳು ಕಳೆದ ಮೂರು ವಾರ್ಷಿಕ ಬಜೆಟ್‌ಗಳನ್ನು ಸಂಸತ್ತಿನ ಮೂಲಕ ಮತದಾನವಿಲ್ಲದೆಯೇ ತಳ್ಳಿಹಾಕಿದ್ದವು. ಈ ವಿಧಾನವನ್ನು ಸಂವಿಧಾನವು ಅನುಮತಿಸಿದೆ ಆದರೆ ಪ್ರತಿಪಕ್ಷಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗಿತ್ತು. ಆದರೆ ಶಾಸಕರು ಮಸೂದೆಯಲ್ಲಿ ಮತ ಚಲಾಯಿಸಲು ಸಮರ್ಥರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಲೆಕೊರ್ನು ಕಳೆದ ವಾರ ಭರವಸೆ ನೀಡಿದರು.
ಮ್ಯಾಕ್ರನ್ ತನ್ನ ಅಧಿಕಾರವನ್ನು ಬಲಪಡಿಸುವ ಭರವಸೆಯಲ್ಲಿ ಕಳೆದ ವರ್ಷದ ಮಧ್ಯದಲ್ಲಿ ಕ್ಷಿಪ್ರ ಸಂಸತ್ತಿನ ಚುನಾವಣೆಗಳಲ್ಲಿ ಗೆದ್ದ ನಂತರ ಫ್ರಾನ್ಸ್ ಬಿಕ್ಕಟ್ಟಿನಲ್ಲಿ ಮುಳುಗಿದೆ. ಅಸೆಂಬ್ಲಿಯಲ್ಲಿ ಮ್ಯಾಕ್ರನ್ ಬೆಂಬಲಿಗರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದೆ.