ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್ 
ವಿದೇಶ

ನನ್ನ ಸೂಚನೆ ಪರಿಣಾಮಕಾರಿಯಾಗಿತ್ತು, ಹೀಗಾಗಿ ಯುದ್ಧ ನಿಲ್ಲಿಸಿದರು: ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಟ್ರಂಪ್ ಪುನರುಚ್ಛಾರ

ಸುಂಕಗಳು ಅಮೆರಿಕಕ್ಕೆ ಬಹಳ ಮುಖ್ಯ. ನಾವು ನೂರಾರು ಶತಕೋಟಿ ಡಾಲರ್‌ಗಳನ್ನು ಗಳಿಸುವುದಲ್ಲದೆ, ಸುಂಕಗಳಿಂದಾಗಿ ನಾವು ಶಾಂತಿಪಾಲಕರಾಗಿದ್ದೇವೆ. ಯುದ್ಧಗಳನ್ನು ನಿಲ್ಲಿಸಲು ನಾನು ಸುಂಕಗಳನ್ನು ಬಳಸುತ್ತೇನೆ.

ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಭಾವ್ಯ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪುನರುಚ್ಛರಿಸಿದ್ದು, ಸುಂಕಾಸ್ತ್ರ ಹಾಗೂ ವ್ಯಾಪಾರ ಒತ್ತಡ ಪ್ರಮುಖ ಪಾತ್ರ ವಹಿಸಿತು ಎಂದು ಹೇಳಿದ್ದಾರೆ.

ಸೋಮವಾರ ಓವಲ್ ಕಚೇರಿಯಿಂದ ಮಾತನಾಡಿದ ಟ್ರಂಪ್, ಸುಂಕ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಸುಂಕ ನೀತಿಗಳು ಕೇವಲ ಆರ್ಥಿಕವಾಗಿ ಅಮೆರಿಕವನ್ನು ಬಲಪಡಿಸಿರುವುದಷ್ಟೇ ಅಲ್ಲದೆ, ಭಾರತ ಮತ್ತು ಪಾಕಿಸ್ತಾನದಂತಹ ರಾಷ್ಟ್ರಗಳ ನಡುವಿನ ಸಂಭಾವ್ಯ ಯುದ್ಧವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ.

ಸುಂಕಗಳು ಅಮೆರಿಕಕ್ಕೆ ಬಹಳ ಮುಖ್ಯ. ನಾವು ನೂರಾರು ಶತಕೋಟಿ ಡಾಲರ್‌ಗಳನ್ನು ಗಳಿಸುವುದಲ್ಲದೆ, ಸುಂಕಗಳಿಂದಾಗಿ ನಾವು ಶಾಂತಿಪಾಲಕರಾಗಿದ್ದೇವೆ. ಯುದ್ಧಗಳನ್ನು ನಿಲ್ಲಿಸಲು ನಾನು ಸುಂಕಗಳನ್ನು ಬಳಸುತ್ತೇನೆಂದು ಹೇಳಿದ್ದಾರೆ.

ನಮ್ಮ ಸುಂಕ ತಂತ್ರವು ಆರ್ಥಿಕ ಮತ್ತು ರಾಜತಾಂತ್ರಿಕವಾಗಿ ಯಶಸ್ವಿಯಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಇತ್ತೀಚಿನ ಘರ್ಷಣೆಯ ಸಂದರ್ಭದಲ್ಲಿ, ಅವರ ಸುಂಕ ಒತ್ತಡವು ಪರಿಸ್ಥಿತಿಯನ್ನು ಶಾಂತಗೊಳಿಸಿತು ಎಂದು ತಿಳಿಸಿದ್ದಾರೆ.

ಸುಂಕಗಳು ಕೇವಲ ಆರ್ಥಿಕ ಉಪಕರಣವಲ್ಲ, ಶಾಂತಿಯನ್ನು ಕಾಪಾಡುವ ಸಾಧನವೂ ಹೌದು. ನನಗೆ ಸುಂಕ ವಿಧಿಸುವ ಅಧಿಕಾರವಿಲ್ಲದಿದ್ದರೆ, ಕನಿಷ್ಠ ನಾಲ್ಕು ಯುದ್ಧಗಳು ನಡೆಯುತ್ತಿದ್ದವು. ನಾನು ಯುದ್ಧಗಳನ್ನು ನಿಲ್ಲಿಸಲು ಸುಂಕಗಳನ್ನು ಬಳಸುತ್ತೇನೆ. ಭಾರತ ಮತ್ತು ಪಾಕಿಸ್ತಾನದ ನಡುವಿನ 'ಆಪರೇಷನ್ ಸಿಂಧೂರ್' ಸಂದರ್ಭದಲ್ಲಿ ನಮ್ಮ ವ್ಯಾಪಾರ ಮತ್ತು ಸುಂಕಕ್ಕೆ ಸಂಬಂಧಿಸಿದ ಹಸ್ತಕ್ಷೇಪವು ಉದ್ವಿಗ್ನತೆಯನ್ನು ಕಡಿಮೆ ಮಾಡಿತು ಎಂದು ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ದಾಳಿಗೆ ಸಿದ್ಧರಾಗಿದ್ದರು. ಹಲವು ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ಆದರೆ ನಾನು ಸುಂಕಗಳ ಮೂಲಕ ಒತ್ತಡ ಹೇರಿದೆ, ನನ್ನ ಸೂಚನೆ ಪರಿಣಾಮಕಾರಿಯಾಗಿತ್ತು. ಹೀಗಾಗಿ ಯುದ್ಧ ನಿಲ್ಲಿಸಿದರು ಎಂದಿದ್ದಾರೆ.

ಈ ವರ್ಷದ ಭಾರತ ಮತ್ತು ಪಾಕಿಸ್ತಾನದ ನಡುವಿನ ಮಧ್ಯಸ್ಥಿಕೆಯಲ್ಲಿ ಅಮೆರಿಕದ ಸುಂಕ ಒತ್ತಡವು ಪಾತ್ರ ವಹಿಸಿತು. ಯುದ್ಧ ಮುಂದುವರೆದರೆ, ನಾವು ವ್ಯಾಪಾರವನ್ನು ಸ್ಥಗಿತಗೊಳಿಸುತ್ತೇವೆ, ಸುಂಕ ವಿಧಿಸುತ್ತೇವೆಂದು ತಿಳಿಸಿದೆವು. ಇದರಿಂದಾಗಿ ಉಭಯ ರಾಷ್ಟ್ರಗಳು ಸಂಘರ್ಷವನ್ನು ಕಡಿಮೆ ಮಾಡಲು ಕ್ರಮ ಕೈಗೊಂಡವು.

ಅಲ್ಲದೆ, ಸುಂಕಗಳಿಂದ ಅಮೆರಿಕಕ್ಕೆ ಶತಕೋಟಿ ಡಾಲರ್‌ಗಳ ಆದಾಯ ಬಂದಿದೆ, ಇದು ದೇಶವನ್ನು ಶ್ರೀಮಂತವಾಗಿಸಿದೆ. ಸುಂಕಗಳಿಂದ ನಾವು ಶಾಂತಿಪಾಲಕರಾಗಿದ್ದೇವೆ ಮತ್ತು ಆರ್ಥಿಕವಾಗಿ ಸಮೃದ್ಧರಾಗಿದ್ದೇವೆಂದು ಒತ್ತಿ ಹೇಳಿದ್ದಾರೆ.

ಆದರೆ, ಭಾರತದ ವಾದ ಟ್ರಂಪ್‌ ಅವರ ಈ ಹೇಳಿಕೆಗೆ ವಿರುದ್ಧವಾಗಿದೆ. ಭಾರತ-ಪಾಕಿಸ್ತಾನ ಮಾತುಕತೆಯು ಬೇರೆ ಯಾವುದೇ ದೇಶದ ಮಧ್ಯಸ್ಥಿಕೆಯಿಂದ ಆಗಿರಲಿಲ್ಲ, ಬದಲಿಗೆ ಮಿಲಿಟರಿ ಮಾರ್ಗಗಳ ಮೂಲಕ ನೇರವಾಗಿ ತೀರ್ಮಾನಕ್ಕೆ ಬರಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು 'ಆಪರೇಷನ್ ಸಿಂಧೂರ್' ಪ್ರಾರಂಭಿಸಿತ್ತು. ಈ ಕಾರ್ಯಾಚರಣೆಯು ಪಾಕಿಸ್ತಾನದ ಉಗ್ರರ ನೆಲೆಗಳನ್ನು ಗುರಿಯಾಗಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

4 ಲಕ್ಷ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಅನುಮತಿ ನೀಡಿದವರಿಂದ ಪಾಠದ ಅಗತ್ಯವಿಲ್ಲ: ವಿಶ್ವಸಂಸ್ಥೆಯಲ್ಲಿ ಪಾಕ್‌ ವಿರುದ್ಧ ಗುಡುಗಿದ ಭಾರತ

ಪರಿಶಿಷ್ಟ ಜಾತಿಯವರು ಬೌದ್ಧ ಧರ್ಮಕ್ಕೆ ಮತಾಂತರ ಆದ್ರು 'SC ಜಾತಿ ಪ್ರಮಾಣಪತ್ರ': ರಾಜ್ಯ ಸರ್ಕಾರದ ಆದೇಶ!

Uttar Pradesh: ರಾತ್ರಿ ಹೊತ್ತಲ್ಲಿ 'ಹಾವಾಗಿ' ಕಚ್ಚಲು ಓಡಾಡಿಸುವ ಪತ್ನಿ: ಅಧಿಕಾರಿಗಳ ದುಂಬಾಲು ಬಿದ್ದ ಪತಿ!

CJI ಮೇಲೆ 'ಶೂ' ಎಸೆತ: ಯಾವುದೇ ಪಶ್ಚಾತ್ತಾಪವಿಲ್ಲ, ನಾನು ಮಾಡಿದ್ದು ಸರಿಯಿದೆ ಎಂದ ವಕೀಲ ರಾಕೇಶ್ ಕಿಶೋರ್

'ಮುಸ್ಲಿಂ' ಮಹಿಳೆಗೆ ಚಿಕಿತ್ಸೆ ನೀಡಲ್ಲ: ಯೋಗಿ ನಾಡಲ್ಲಿ ಹೊಸ ವಿವಾದ ಹುಟ್ಟುಹಾಕಿದ ಡಾಕ್ಟರ್! ಮುಂದಿನ ಸಮಾಜದ ಗತಿ ಏನು?

SCROLL FOR NEXT