ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್- ಆಧಾರ್ online desk
ವಿದೇಶ

ಭಾರತವೇ ನಮಗೆ ಮಾದರಿ, ಅಕ್ರಮ ವಲಸೆ ತಡೆಗೂ ಸಹಕಾರಿ; ಬ್ರಿಟನ್ ನಲ್ಲೂ ಆಧಾರ್ ಜಾರಿಗೆ PM Keir Starmer ಉತ್ಸುಕ; Nandan Nilekani ಜೊತೆ ಸಭೆ!

ಸ್ಟಾರ್ಮರ್ ಅವರ ವಕ್ತಾರರ ಪ್ರಕಾರ, ಯುಕೆ ವ್ಯವಸ್ಥೆಯು ಈ ಹಂತದಲ್ಲಿ ಡಿಜಿಟಲ್ ಐಡಿಗೆ ಬಯೋಮೆಟ್ರಿಕ್ ಡೇಟಾವನ್ನು ಬಳಸಲು ಯೋಜಿಸುವುದಿಲ್ಲ.

ಮುಂಬೈ: ಭಾರತದಲ್ಲಿ ಯಶಸ್ವಿಯಾಗಿರುವ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ ಯೋಜನೆ (ಆಧಾರ್ ಯೋಜನೆ) ಬಗ್ಗೆ ಬ್ರಿಟನ್ ಆಸಕ್ತಿ ತೋರಿದೆ. ತಮ್ಮ ದೇಶದಲ್ಲೂ ಇಂಥಹದ್ದೇ ಯೋಜನೆ ಜಾರಿಗೊಳಿಸುವ ಉದ್ದೇಶದಿಂದ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ UIDAI ನ ಅಧ್ಯಕ್ಷರಾಗಿರುವ ನಂದನ್ ನಿಲೇಕಣಿ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.

ನಿಲೇಕಣಿ ಅವರೊಂದಿಗಿನ ಭೇಟಿಯು ಇನ್ಫೋಸಿಸ್ ಜೊತೆಗಿನ ಸಂಭಾವ್ಯ ವಾಣಿಜ್ಯ ಒಪ್ಪಂದದ ಬಗ್ಗೆ ಅಲ್ಲ ಮತ್ತು ಯುಕೆ ಸರ್ಕಾರ ಆಧಾರ್ ಯೋಜನೆಗೆ ಸಂಬಂಧಿಸಿದಂತೆ ತನ್ನದೇ ಆದ ಆವೃತ್ತಿಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದು ಸ್ಟಾರ್ಮರ್ ಕಚೇರಿಯ ವಕ್ತಾರರು ಹೇಳಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಬ್ರಿಟನ್ ಪ್ರಧಾನಿ ಭಾರತ ಪ್ರವಾಸ ಕೈಗೊಂಡಿದ್ದು ಮುಂಬೈ ನಲ್ಲಿದ್ದಾರೆ. ಯುಕೆಯಲ್ಲಿ ಡಿಜಿಟಲ್ ಐಡಿ ಕಾರ್ಡ್‌ಗಳಿಗೆ ಬೆಂಬಲ ಕುಸಿದಿದೆ ಮತ್ತು ಎಲ್ಲಾ ವಿರೋಧ ಪಕ್ಷಗಳು ಈ ಯೋಜನೆಯನ್ನು ವಿರೋಧಿಸುವುದಾಗಿ ಹೇಳಿವೆ. ಆದಾಗ್ಯೂ, ಯುಕೆ ಪ್ರಧಾನಿ ತಮ್ಮ ಯೋಜನೆಯ ಬಗ್ಗೆ ಉತ್ಸುಕರಾಗಿದ್ದಾರೆ ಮತ್ತು ಆಧಾರ್ ವಿಷಯದಲ್ಲಿ ಭಾರತದ "ಭಾರಿ ಯಶಸ್ಸನ್ನು" ಉಲ್ಲೇಖಿಸಿದ್ದಾರೆ. "ನಾವು ಭಾರತಕ್ಕೆ ಹೋಗುತ್ತಿದ್ದೇವೆ, ಅಲ್ಲಿ ಅವರು ಈಗಾಗಲೇ ಡಿಜಿಟಲ್ ಐಡಿ ಮಾಡಿ ಅದರಲ್ಲಿ ಭಾರಿ ಯಶಸ್ಸನ್ನು ಸಾಧಿಸಿದ್ದಾರೆ. ಆದ್ದರಿಂದ ನಾನು ನಡೆಸಲಿರುವ ಸಭೆಗಳಲ್ಲಿ ID ಕುರಿತಾಗಿಯೂ ಪ್ರಮುಖ ಸಭೆ ನಡೆಯಲಿದೆ" ಎಂದು ಅವರು ಮುಂಬೈಗೆ ಹೊರಡುವ ಮೊದಲು ಮಾಧ್ಯಮಗಳಿಗೆ ತಿಳಿಸಿದ್ದರು.

"ಇತರ ಪ್ರದೇಶಗಳಿಗೆ ಸ್ವಯಂಪ್ರೇರಿತ ಐಡಿ ಪ್ರಯೋಜನಗಳ ಬಗ್ಗೆ ವಿಷಯ ಮಂಡಿಸಬೇಕಾಗಿದೆ ಮತ್ತು ನಿಸ್ಸಂಶಯವಾಗಿ, ನಾವು ಆ ಪ್ರಯತ್ನ ಮಾಡಬೇಕಾಗಿದೆ. ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಅಥವಾ ಅರ್ಜಿ ಸಲ್ಲಿಸಲು ನೀವು ಬಯಸಿದಾಗ ಎಷ್ಟು ಬಾರಿ ಮನೆಯಲ್ಲಿ ಐಡಿಗಾಗಿ ತಡಕಾಡುತ್ತೀರ? ಅದು ನನ್ನನ್ನು ನಿರಾಶೆಗೊಳಿಸುತ್ತದೆ" ಎಂದು ಯುಕೆಯಲ್ಲಿ ಡಿಜಿಟಲ್ ಐಡಿ ಉತ್ತೇಜಿಸುವ ನಿಟ್ಟಿನಲ್ಲಿ ಸ್ಟಾರ್ಮರ್ ಹೇಳಿದ್ದಾರೆ.

ಸ್ಟಾರ್ಮರ್ ಅವರ ವಕ್ತಾರರ ಪ್ರಕಾರ, ಯುಕೆ ವ್ಯವಸ್ಥೆಯು ಈ ಹಂತದಲ್ಲಿ ಡಿಜಿಟಲ್ ಐಡಿಗೆ ಬಯೋಮೆಟ್ರಿಕ್ ಡೇಟಾವನ್ನು ಬಳಸಲು ಯೋಜಿಸುವುದಿಲ್ಲ.

ಬ್ರಿಟಿಷ್ ನಾಗರಿಕರು ಮತ್ತು ಖಾಯಂ ನಿವಾಸಿಗಳು ಕೆಲಸ ಪಡೆಯಲು ಕಡ್ಡಾಯ ಡಿಜಿಟಲ್ ಗುರುತಿನ ಚೀಟಿ ಅಗತ್ಯವಿದೆ ಎಂದು ಕಳೆದ ತಿಂಗಳು ಸ್ಟಾರ್ಮರ್ ಘೋಷಿಸಿದ್ದರು. ಇದು ಭೂಗತ ಆರ್ಥಿಕತೆಯಲ್ಲಿ ಜನರು ಕೆಲಸ ಮಾಡುವುದನ್ನು ಕಷ್ಟಕರವಾಗಿಸುವ ಮೂಲಕ ಅನಧಿಕೃತ ವಲಸೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದರು.

ಡಿಜಿಟಲ್ ಐಡಿ, ಜನರು ಆರೋಗ್ಯ ರಕ್ಷಣೆ, ಕಲ್ಯಾಣ, ಮಕ್ಕಳ ಆರೈಕೆ ಮತ್ತು ಇತರ ಸಾರ್ವಜನಿಕ ಸೇವೆಗಳನ್ನು ಪ್ರವೇಶಿಸುವುದನ್ನು ಸರಳಗೊಳಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು. "ನೀವು ಡಿಜಿಟಲ್ ಐಡಿ ಹೊಂದಿಲ್ಲದಿದ್ದರೆ ಯುನೈಟೆಡ್ ಕಿಂಗ್‌ಡಂನಲ್ಲಿ ಕೆಲಸ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಅದು ಅಷ್ಟೇ ಸರಳವಾಗಿದೆ" ಎಂದು ಅವರು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Tsunami: ದಕ್ಷಿಣ ಫಿಲಿಪೈನ್ಸ್‌ನಲ್ಲಿ 7.6 ತೀವ್ರತೆಯ ಭೂಕಂಪ; ಅಪಾಯಕಾರಿ ಸುನಾಮಿಯ ಎಚ್ಚರಿಕೆ!

Bus strike-ಬೇಡಿಕೆಗೆ ಕ್ಯಾರೇ ಎನ್ನದ ಸರ್ಕಾರ: ಮತ್ತೆ ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರು

ಕುತೂಹಲ ಮೂಡಿಸಿದ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟ್: ಗರಿಗೆದರಿದ ಸಂಪುಟ ಪುನಾರಚನೆ, ಡಿಸಿಎಂ ಡಿಕೆಶಿ ಏನೆಂದರು?

ಸಚಿವ ಸಂಪುಟ ಪುನಾರಚನೆ ವಿಚಾರ ನನಗೆ ಗೊತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

Big shake-up: ಎರಡೂವರೆ ವರ್ಷಗಳ ಅವಧಿ ಮುಗಿಯುತ್ತಿದ್ದಂತೆ ಶೇ.50ರಷ್ಟು ಸಚಿವರನ್ನು ಸಿದ್ದು ಕೈಬಿಡುವ ಸಾಧ್ಯತೆ?

SCROLL FOR NEXT