ಪಾಂಗಾಂಗ್ ಸರೋವರದಲ್ಲಿ ಮಿಲಿಟರಿ ಕಟ್ಟಡಗಳ ನಿರ್ಮಾಣ 
ವಿದೇಶ

ಭಾರತದ ಗಡಿಯಲ್ಲಿ ಚೀನಾ ಹೊಸದಾದ 'ವಾಯು ರಕ್ಷಣಾ ವ್ಯವಸ್ಥೆ' ನಿರ್ಮಾಣ! Satellite Images

ಕಮಾಂಡ್ ಮತ್ತು ಕಂಟ್ರೋಲ್ ಕಟ್ಟಡಗಳು, ಬ್ಯಾರಕ್‌ಗಳು, ವಾಹನ ಶೆಡ್‌ಗಳು, ಯುದ್ಧಸಾಮಗ್ರಿ ಸಂಗ್ರಹಣೆ ಮತ್ತು ರಾಡಾರ್ ಸ್ಥಾನಗಳನ್ನು ಒಳಗೊಂಡಿರುವ ಚೀನಾದ ಹೊಸ ವಾಯು ರಕ್ಷಣಾ ಸಂಕೀರ್ಣವೊಂದನ್ನು ಸ್ಯಾಟಲೈಟ್ ಪೋಟೋಗಳು ತೋರಿಸುತ್ತವೆ.

ನವದೆಹಲಿ: ಟಿಬೆಟ್‌ನ ಪಾಂಗಾಂಗ್ ಸರೋವರದ ಪೂರ್ವ ಭಾಗದ ದಡದಲ್ಲಿ, 2020 ರ ಗಡಿ ಘರ್ಷಣೆಯ ಬಿಂದುಗಳಲ್ಲಿ ಒಂದರ ಸುಮಾರು 110 ಕಿಮೀ ದೂರದಲ್ಲಿ ಚೀನಾ ಕ್ಷೀಪ್ರಗತಿಯಲ್ಲಿ ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿದೆ.

ಕಮಾಂಡ್ ಮತ್ತು ಕಂಟ್ರೋಲ್ ಕಟ್ಟಡಗಳು, ಬ್ಯಾರಕ್‌ಗಳು, ವಾಹನ ಶೆಡ್‌ಗಳು, ಯುದ್ಧಸಾಮಗ್ರಿ ಸಂಗ್ರಹಣೆ ಮತ್ತು ರಾಡಾರ್ ಸ್ಥಾನಗಳನ್ನು ಒಳಗೊಂಡಿರುವ ಚೀನಾದ ಹೊಸ ವಾಯು ರಕ್ಷಣಾ ಸಂಕೀರ್ಣವೊಂದನ್ನು ಸ್ಯಾಟಲೈಟ್ ಪೋಟೋಗಳು ತೋರಿಸುತ್ತವೆ.

ಕ್ಷಿಪಣಿಗಳನ್ನು ಸಾಗಿಸುವ, ಉಡಾಯಿಸುವ ಟ್ರಾನ್ಸ್‌ಪೋರ್ಟರ್ ಎರೆಕ್ಟರ್ ಲಾಂಚರ್ (TEL) ರಾಕೆಟ್ ಗೆ ಅನುಕೂಲವಾಗುವಂತೆ ಇದನ್ನು ನಿರ್ಮಿಸಲಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಇದು ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಚೀನಾದ ದೀರ್ಘ-ಶ್ರೇಣಿಯ HQ-9 ಕ್ಷಿಪಣಿ ವ್ಯವಸ್ಥೆಗೆ ರಕ್ಷಣೆ ನೀಡಬಹುದು ಎನ್ನಲಾಗುತ್ತಿದೆ.

ಚೀನಾದ ಹೊಸ ವಾಯು ರಕ್ಷಣಾ ಸಂಕೀರ್ಣವನ್ನು US ಮೂಲದ ಜಿಯೋ-ಇಂಟೆಲಿಜೆನ್ಸ್ ಸಂಸ್ಥೆ ಆಲ್ಸೋರ್ಸ್ ಅನಾಲಿಸಿಸ್‌ನ ಸಂಶೋಧಕರು ವಾಸ್ತವ ನಿಯಂತ್ರಣ ರೇಖೆಯಿಂದ 65 ಕಿ.ಮೀ ದೂರದಲ್ಲಿರುವ ಗಾರ್ ಕೌಂಟಿಯಲ್ಲಿ ಮೊದಲಿಗೆ ಗುರುತಿಸಿದ್ದಾರೆ. ಇದು ಭಾರತ ಇತ್ತೀಚಿಗೆ ಉನ್ನತೀಕರಿಸಿರುವ ನಿಯೋಮಾ ವಿಮಾನ ನಿಲ್ದಾಣಕ್ಕೆ ಎದುರಿಗಿದೆ.

ಯುಎಸ್ ಮೂಲದ ಬಾಹ್ಯಾಕಾಶ ಗುಪ್ತಚರ ಕಂಪನಿ Vantor ತಂಡದಿಂದ ಪಡೆದ ಸ್ಯಾಟಲೈಟ್ ಫೋಟೋಗಳಲ್ಲಿ ಕ್ಷಿಪಣಿ ಉಡಾವಣಾ ಬೇಗಳ ಮೇಲಿನ ಮೇಲ್ಫಾವಣಿ ಕಂಡುಬರುತ್ತದೆ. ಪ್ರತಿಯೊಂದೂ ಎರಡು ವಾಹನಗಳಿಗೆ ಸ್ಥಳಾವಕಾಶ ನೀಡುವಷ್ಟು ದೊಡ್ಡದಾಗಿದೆ.

ಸೆಪ್ಟೆಂಬರ್ 29 ರ ವ್ಯಾಂಟರ್ ಸ್ಯಾಟಲೈಟ್ ಫೋಟೋದಲ್ಲಿ ಗಾರ್ ಕಂಟ್ರಿಯಲ್ಲಿ ಅಂತಹ ಒಂದು ಉಡಾವಣಾ ಕೇಂದ್ರದ ಮೇಲಿನ ತೆರೆದ ಛಾವಣಿಗಳನ್ನು ತೋರಿಸುತ್ತದೆ. ಪಾಂಗಾಂಗ್ ಸರೋವರದ ಬಳಿ ಎರಡನೇ ವಾಯು ರಕ್ಷಣಾ ಸಂಕೀರ್ಣ ಕಾಮಗಾರಿಯ ಆರಂಭಿಕ ಹಂತವನ್ನು ಜುಲೈ ಅಂತ್ಯದಲ್ಲಿ ಜಿಯೋಸ್ಪೇಷಿಯಲ್ ಸಂಶೋಧಕ ಡೇಮಿಯನ್ ಸೈಮನ್ ಅವರು ಗುರುತಿಸಿದ್ದರು. ಆದರೆ ಆ ಸಮಯದಲ್ಲಿ ಮುಚ್ಚಿದ ಕ್ಷಿಪಣಿ ಉಡಾವಣಾ ಕೇಂದ್ರಗಳ ಸ್ವರೂಪ ತಿಳಿದಿರಲಿಲ್ಲ.

ASA ವಿಶ್ಲೇಷಕರು ಮೂಲಸೌಕರ್ಯವನ್ನು ಪತ್ತೆ ಹಚ್ಚಿದ್ದಾರೆ. HQ-9 ವಾಯು ರಕ್ಷಣಾ ವ್ಯವಸ್ಥೆಯನ್ನು ತನ್ನ ಕಮಾಂಡ್ ಸಿಸ್ಟಮ್ ಜೊತೆಗೆ ಸಂಪರ್ಕಿಸಲು ಇದನ್ನು ಇಡಲಾಗಿದೆ ಎನ್ನಲಾಗುತ್ತಿದೆ. ಪಾಂಗಾಂಗ್ ಸರೋವರದ ಬಳಿಯ ಮೂಲಸೌಕರ್ಯ ಕಾರ್ಯಗಳು ಇನ್ನು ನಿರ್ಮಾಣ ಹಂತದಲ್ಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಚರ್ಚೆ ನಡುವಲ್ಲೇ ನವೆಂಬರ್‌ನಲ್ಲಿ ರಾಹುಲ್ ಗಾಂಧಿ ಬೆಂಗಳೂರಿಗೆ..?

ಕರ್ನೂಲ್ ಬಸ್ ಬೆಂಕಿ ದುರಂತ: ರಾಜ್ಯದ 6 ಮಂದಿ ಬಲಿ

'ನೀನು ಹಾಗೆ ಮಾತನಾಡಿದ್ದೀಯ ಎಂದು ಯತೀಂದ್ರನ್ನ ಕೇಳಿದೆ, ಅದಕ್ಕವನು ಹೀಗೆ ಹೇಳಿದ'...ಪುತ್ರನ 'ಉತ್ತರಾಧಿಕಾರಿ' ಹೇಳಿಕೆಗೆ ಸಿಎಂ ಸಿದ್ದರಾಮಯ್ಯ-Video

ಭಾರತ ಅಮೆರಿಕ ವ್ಯಾಪಾರ ಒಪ್ಪಂದ: 'ಬಹುತೇಕ ಎಲ್ಲ ಸಮಸ್ಯೆಗಳು ಇತ್ಯರ್ಥವಾಗಿವೆ': ಸರ್ಕಾರಿ ಮೂಲಗಳು!

ರಷ್ಯನ್ ತೈಲ: ಆರ್ಥಿಕ ಅವಶ್ಯಕತೆ ಮತ್ತು ಅಮೆರಿಕದ ಒತ್ತಡಗಳ ನಡುವೆ ಸಿಲುಕಿದ ಭಾರತ, ಚೀನಾ (ಜಾಗತಿಕ ಜಗಲಿ)

SCROLL FOR NEXT