ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಚಿತ್ರ 
ವಿದೇಶ

ಪಾಕಿಸ್ತಾನದಲ್ಲಿ ಭಾರಿ ಪ್ರವಾಹ: ರಕ್ಷಣಾ ಕಾರ್ಯಾಚರಣೆ ದೋಣಿ ಮಗುಚಿ ಐವರು ಸಾವು!

ಕಳೆದ ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಮೂರು ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿದ್ದು, ಭಾರಿ ಪ್ರವಾಹ ಉಂಟಾಗಿದೆ.

ಕರಾಚಿ: ಭಾರಿ ಪ್ರವಾಹಕ್ಕೆ ಪಾಕಿಸ್ತಾನ ನಲುಗಿದ್ದು, ಜನರನ್ನು ರಕ್ಷಿಸುತ್ತಿದ್ದ ದೋಣಿ ಮಗುಚಿ, 70 ವರ್ಷದ ಮಹಿಳೆ ಮತ್ತು ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಕಳೆದ ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಮೂರು ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿದ್ದು, ಭಾರಿ ಪ್ರವಾಹ ಉಂಟಾಗಿದೆ. ಇದರಿಂದಾಗಿ ಅಪಾರ ಪ್ರಮಾಣದ ಕೃಷಿಭೂಮಿ ಜಲಾವೃತಗೊಂಡು ಬೆಳೆ ನಷ್ಟವಾಗಿದೆ.

"ನೀರೊಳಗಿನ ವಸ್ತುವೊಂದು ರಕ್ಷಣಾ ಕಾರ್ಯಾಚರಣೆಯ ದೋಣಿಗೆ ಡಿಕ್ಕಿ ಹೊಡೆದಾಗ ಈ ಘಟನೆ ಸಂಭವಿಸಿದೆ ಎಂದು ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಹಾನಿರ್ದೇಶಕ ಇರ್ಫಾನ್ ಅಲಿ ಕಥಿಯಾ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

"ಇತರ ಹತ್ತು ಜನರನ್ನು ರಕ್ಷಿಸಲಾಗಿದೆ ಆದರೆ ದುರದೃಷ್ಟವಶಾತ್ ಘಟನೆಯಲ್ಲಿ ಐದು ಜನರು ಪ್ರಾಣ ಕಳೆದುಕೊಂಡಿದ್ದಾರೆ" ಎಂದು ಅವರು ಮಾಹಿತಿ ನೀಡಿದ್ದಾರೆ.

ಭಾರೀ ಮಳೆಯು ದೇಶದ ಎರಡನೇ ಅತಿದೊಡ್ಡ ನಗರವಾದ ಲಾಹೋರ್‌ನ ಸೇರಿದಂತೆ ಅನೇಕ ನಗರ ಪ್ರದೇಶದಲ್ಲಿಯೂ ಪ್ರವಾಹ ಪರಿಸ್ಥಿತಿಯನ್ನುಂಟು ಮಾಡಿದೆ. ವಾಡಿಕೆಗಿಂತ ಹೆಚ್ಚಾಗಿ ಸುರಿಯುತ್ತಿರುವ ಮಾನ್ಸೂನ್ ಮಳೆಯಿಂದ ಭಾರಿ ಭೂಕುಸಿತಗಳು ಮತ್ತು ಪ್ರವಾಹ ಉಂಟಾಗಿದ್ದು, ಜೂನ್‌ನಿಂದ ರಾಷ್ಟ್ರವ್ಯಾಪಿ 850 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮದ್ದೂರಿನಲ್ಲಿ ಪ್ರತಿಭಟನೆ ವೇಳೆ ಕಲ್ಲು ತೂರಾಟ, ಪೊಲೀಸರಿಂದ ಲಾಠಿಚಾರ್ಜ್, 21 ಮಂದಿ ಬಂಧನ: ಪೊಲೀಸರಿಗೆ ಸಿಎಂ ಖಡಕ್ ಸೂಚನೆ

ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ, ನಾಲ್ವರು ಹೋಂಗಾರ್ಡ್​ ಸೇರಿ 8 ಮಂದಿ ಗಾಯ,ಸೆಕ್ಷನ್ 144 ಜಾರಿ

Ramayana: ಸೀತಾ ಪಾತ್ರಕ್ಕೆ Miss Universe India 2025 'ಮಣಿಕಾ' ಆಯ್ಕೆ!

ಜಿಎಸ್‌ಟಿ ಕಡಿತ: ಕಾರು ಪ್ರಿಯರಿಗೆ ಬಂಪರ್, Hyundai India ಬೆಲೆಯಲ್ಲಿ ಭಾರಿ ಇಳಿಕೆ! ಎಷ್ಟು ಅಗ್ಗ ಗೊತ್ತಾ?

'ಭಾರತದ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್‌ಗೆ ತನ್ನ ತಪ್ಪಿನ ಅರಿವಾಗಿದೆ': ಭಾರತದ ಮಾಜಿ ರಾಜತಾಂತ್ರಿಕ ಕೆಪಿ ಫ್ಯಾಬಿಯನ್

SCROLL FOR NEXT