ಉತಾಹ್‌ನ ಓರೆಮ್‌ನಲ್ಲಿರುವ ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ಮಾತನಾಡುವ ಮೊದಲು ಚಾರ್ಲಿ ಕಿರ್ಕ್ ಜನರೊಂದಿಗೆ ಸಂಭಾಷಣೆ 
ವಿದೇಶ

ಡೊನಾಲ್ಡ್ ಟ್ರಂಪ್ ಆಪ್ತ ಚಾರ್ಲಿ ಕಿರ್ಕ್ ಗುಂಡಿಕ್ಕಿ ಹತ್ಯೆ: ಹಂತಕನ ಬಂಧನಕ್ಕೆ ತೀವ್ರ ಶೋಧ

ಆರಂಭದಲ್ಲಿ, ಶಂಕಿತರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಹೇಳಲಾಗುತ್ತಿತ್ತು. ಗವರ್ನರ್ ಸ್ಪೆನ್ಸರ್ ಕಾಕ್ಸ್ ಆರಂಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪೊಲೀಸರು ಶಂಕಿತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದರು.

ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ಚಾರ್ಲಿ ಕಿರ್ಕ್ ಮೇಲೆ ನಡೆದ ಮಾರಣಾಂತಿಕ ಗುಂಡಿನ ದಾಳಿಯ ನಂತರ ಯಾರನ್ನೂ ಬಂಧಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನಿನ್ನೆ ಸೆಪ್ಟೆಂಬರ್ 10 ರಂದು ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ 31 ವರ್ಷದ ಕಿರ್ಕ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಗುಂಡಿನ ದಾಳಿಯು ಗುರಿಯಿಟ್ಟುಕೊಂಡ ನಡೆಸಿದ ದಾಳಿ ಎಂದು ನಂಬಲಾಗಿದೆ, ತನಿಖಾಧಿಕಾರಿಗಳು ಹತ್ತಿರದ ಕಟ್ಟಡದ ಛಾವಣಿಯಿಂದ ಮಾರಕ ಗುಂಡು ಹಾರಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಆರಂಭದಲ್ಲಿ, ಶಂಕಿತರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಹೇಳಲಾಗುತ್ತಿತ್ತು. ಗವರ್ನರ್ ಸ್ಪೆನ್ಸರ್ ಕಾಕ್ಸ್ ಆರಂಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪೊಲೀಸರು ಶಂಕಿತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದರು. ಆದರೆ ಉತಾಹ್ ಸಾರ್ವಜನಿಕ ಸುರಕ್ಷತಾ ಇಲಾಖೆಯ ಆಯುಕ್ತ ಬ್ಯೂ ಮೇಸನ್ ಅದೇ ಪತ್ರಿಕಾಗೋಷ್ಠಿಯಲ್ಲಿ ಶಂಕಿತ ಅಪರಾಧಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಿದರು

ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಅವರು ಹೆಸರು ಹೇಳದ ವ್ಯಕ್ತಿಯನ್ನು ವಿಚಾರಣೆಗಾಗಿ ಬಂಧಿಸಲಾಗಿದೆ ಎಂದು ಹೇಳಿದರು, ನಂತರ ಬಿಡುಗಡೆ ಮಾಡಲಾಯಿತು. 'ನಮ್ಮ ತನಿಖೆ ಮುಂದುವರೆದಿದೆ' ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.

ಎಫ್‌ಬಿಐ, ಉತಾಹ್ ಕೌಂಟಿ ಅಟಾರ್ನಿ ಕಚೇರಿ, ಉತಾಹ್ ಕೌಂಟಿ ಶೆರಿಫ್ ಕಚೇರಿ ಮತ್ತು ಸ್ಥಳೀಯ ಪೊಲೀಸ್ ಇಲಾಖೆಗಳ ಸಹಭಾಗಿತ್ವದಲ್ಲಿ ತನಿಖೆ ಮುಂದುವರೆದಿದೆ ಎಂದು ಉತಾಹ್ ಸಾರ್ವಜನಿಕ ಸುರಕ್ಷತಾ ಇಲಾಖೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಾಹಸಸಿಂಹ ವಿಷ್ಣುವರ್ಧನ್, ಸರೋಜಾದೇವಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಣೆ

ABVP ಕಾರ್ಯಕ್ರಮದಲ್ಲಿ ಭಾಗಿಯಾದ ವಿಚಾರ: ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದೇನು? Video

ಬೆಂಗಳೂರು: ಮಹಿಳೆ ಮೇಲೆ ಹಲ್ಲೆ; BMTC ಡ್ರೈವರ್ ತಾತ್ಕಾಲಿಕ ವಜಾ; ಮುತ್ತಿಕ್ಕುವಂತೆ ಪೀಡಿಸಿದ ಚಾಲಕ ಆರೀಫ್‍ಗೆ ಧರ್ಮದೇಟು!

'ಅಶ್ಲೀಲ ದೃಶ್ಯ'ದಲ್ಲಿ ನಟಿಸುವಂತೆ ನನ್ನನ್ನು ಒತ್ತಾಯಿಸಲಾಗಿತ್ತು: ಶ್ರೀರಾಮ ಚಂದ್ರ ಬೆಡಗಿ ಮೋಹಿನಿ ಬಿಚ್ಚಿಟ್ಟ ಅಸಲಿ ಸಂಗತಿ ಏನು?

ನಿಮ್ಮ ಕಲ್ಪನೆಗೂ ಒಂದು ಮಿತಿ ಇರಲಿ: ವಿನಯ್ ಜತೆ ಸುತ್ತಾಟ ಎಂದವರಿಗೆ ರಮ್ಯಾ ತಿರುಗೇಟು

SCROLL FOR NEXT