ಹತ್ಯೆಯಾದ ತೆಲಂಗಾಣದ ಟೆಕ್ಕಿ  
ವಿದೇಶ

Telangana techie shot: ಅಮೆರಿಕದಲ್ಲಿ ರೂಮ್ ಮೇಟ್ ಜೊತೆಗೆ ಹೊಡೆದಾಟ; ಪೊಲೀಸರ ಗುಂಡೇಟಿಗೆ ತೆಲಂಗಾಣದ ಟೆಕ್ಕಿ ಬಲಿ!

ಏನಾಯಿತು ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಕ್ಷುಲಕ ವಿಚಾರಕ್ಕೆ ರೂಮ್‌ಮೇಟ್‌ನೊಂದಿಗೆ ಜಗಳ ನಡೆದಿದೆ. ಗುರುವಾರ ಬೆಳಗ್ಗೆ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ತಿಳಿಸಲಾಗಿದೆ ಎಂದು ಅವರು ಹೇಳಿದರು.

ಹೈದರಾಬಾದ್: ರೂಮ್ ಮೇಟ್ ಜೊತೆಗೆ ಹೊಡೆದಾಟದ ನಂತರ ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯ 29 ವರ್ಷದ ಟೆಕ್ಕಿಯನ್ನು ಅಮೆರಿಕದಲ್ಲಿ ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿರುವುದಾಗಿ ಅವರು ಕುಟುಂಬ ಗುರುವಾರ ತಿಳಿಸಿದೆ.

ಕ್ಯಾಲಿಫೋರ್ನಿಯಾದಲ್ಲಿ ಸಾಫ್ಟ್‌ವೇರ್ ವೃತ್ತಿಪರರಾಗಿದ್ದ ಮೊಹಮ್ಮದ್ ನಿಜಾಮುದ್ದೀನ್ ಅವರನ್ನು ಸೆಪ್ಟೆಂಬರ್ 3 ರಂದು ಸಾಂಟಾ ಕ್ಲಾರಾ ಪೊಲೀಸರು ಕೊಂದಿದ್ದಾರೆ ಎಂದು ಹೇಳಲಾಗಿದೆ. ಈ ವಿಷಯವನ್ನು ತನ್ನ ಮಗನ ಸ್ನೇಹಿತನ ಮೂಲಕ ತಿಳಿದಿರುವುದಾಗಿ ಅವರ ತಂದೆ ಮೊಹಮ್ಮದ್ ಹಸ್ನುದ್ದೀನ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಏನಾಯಿತು ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಕ್ಷುಲಕ ವಿಚಾರಕ್ಕೆ ರೂಮ್‌ಮೇಟ್‌ನೊಂದಿಗೆ ಜಗಳ ನಡೆದಿದೆ. ಗುರುವಾರ ಬೆಳಗ್ಗೆ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ತಿಳಿಸಲಾಗಿದೆ ಎಂದು ಅವರು ಹೇಳಿದರು.

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿರುವ ಹಸ್ನುದ್ದೀನ್ ತಮ್ಮ ಮಗನ ಮೃತದೇಹವನ್ನು ಮಹಬೂಬ್‌ನಗರಕ್ಕೆ ತರಲು ನೆರವು ನೀಡುವಂತೆ ಕೋರಿದ್ದಾರೆ. ವಾಷಿಂಗ್ಟನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಅಧಿಕಾರಿಗಳಿಂದ ತುರ್ತು ಸಹಾಯವನ್ನು ಕೋರಿದ್ದು, ಅಮೆರಿಕದ ಪೊಲೀಸರು ತನ್ನ ಮಗನನ್ನು ಯಾಕೆ ಗುಂಡಿಕ್ಕಿ ಕೊಂದಿದ್ದಾರೆ ಎಂಬುದಕ್ಕೆ ನಿಜವಾದ ಕಾರಣಗಳು ನನಗೆ ತಿಳಿದಿಲ್ಲ ಎಂದಿದ್ದಾರೆ.

ಮಜ್ಲಿಸ್ ಬಚಾವೋ ತಹ್ರೀಕ್ (ಎಂಬಿಟಿ) ವಕ್ತಾರ ಅಮ್ಜೆದ್ ಉಲ್ಲಾ ಖಾನ್ ಕುಟುಂಬದ ಮನವಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದು, ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದ್ದಾರೆ. ನಿಜಾಮುದ್ದೀನ್ ಅಮೇರಿಕಾದಲ್ಲಿ ಸಾಫ್ಟ್‌ವೇರ್ ವೃತ್ತಿಪರರಾಗಿ ಕೆಲಸ ಮಾಡುವ ಮೊದಲು ಎಂಎಸ್ ಮುಗಿಸಿದ್ದರು ಎಂದು ಅವರ ತಂದೆ ಹೇಳಿದರು.

ಪೊಲೀಸರ ಹೇಳಿಕೆ ಏನು?

ಐಸೆನ್‌ಹೋವರ್ ಡ್ರೈವ್‌ನಲ್ಲಿರುವ ಮನೆಯೊಳಗೆ ತನ್ನ ರೂಮ್‌ಮೇಟ್‌ಗೆ ಇರಿದ ಆರೋಪದ ನಂತರ ಒಬ್ಬ ವ್ಯಕ್ತಿಯನ್ನು ಅಧಿಕಾರಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಸಾಂಟಾ ಕ್ಲಾರಾ ಪೋಲೀಸರು ತಿಳಿಸಿದ್ದಾರೆ. ಸೆಪ್ಟೆಂಬರ್ 3 ರಂದು ಬೆಳಿಗ್ಗೆ 6:18 ರ ಸುಮಾರಿಗೆ ಚಾಕು ಹೊಂದಿದ್ದ ಶಸ್ತ್ರಸಜ್ಜಿತ ಶಂಕಿತನ ಮೇಲೆ ಗುಂಡು ಹಾರಿಸಲಾಯಿತು. ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತದನಂತರ ಆತ ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಸಂತ್ರಸ್ತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ನಮ್ಮ ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಹೆಚ್ಚಿನ ಹಾನಿ ತಡೆಯಲು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಇದರಿಂದ ಒಬ್ಬರ ಜೀವ ಉಳಿಸಿದ್ದೇವೆ ಎಂದು ಪೊಲೀಸ್ ಮುಖ್ಯಸ್ಥ ಕೋರಿ ಮೋರ್ಗಾನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್ ಸೇರಿ ನಾಲ್ವರ ಜಾಮೀನು ಅರ್ಜಿ ವಿಚಾರಣೆ ಸೆ.22ಕ್ಕೆ ಮುಂದೂಡಿಕೆ

ಕರ್ನಾಟಕದಲ್ಲಿ ಮತ್ತೆ ಜಾತಿ ಜಂಜಾಟ: ಇಂತಹ ಸಮೀಕ್ಷೆ ನಡೆಸುವುದು ಬೇಕಿತ್ತಾ? (ನೇರ ನೋಟ)

ತಮಿಳುನಾಡಿಗೆ ಕಂಗನಾ ಬಂದ್ರೆ ಕಪಾಳಕ್ಕೆ ಬಾರಿಸಿ: ಕಾಂಗ್ರೆಸ್ ನಾಯಕ K.S ಅಳಗಿರಿ ವಿವಾದಾತ್ಮಕ ಹೇಳಿಕೆ

ಹಫೀಜ್‌ ಸಯೀದ್‌ ಭೇಟಿಗಾಗಿ ಮಾಜಿ PM ಸಿಂಗ್‌ ಧನ್ಯವಾದ ಹೇಳಿದ್ದರು: ಯಾಸಿನ್‌ ಮಲ್ಲಿಕ್‌ ಸ್ಫೋಟಕ ಹೇಳಿಕೆ!

ಜಾತಿಗಣತಿ ಸಮೀಕ್ಷೆ 2025: ಸಚಿವರಲ್ಲಿಯೇ ಭಿನ್ನಮತ ಸ್ಫೋಟ, ಸಿಎಂ ಸಮ್ಮುಖದಲ್ಲೇ ನಾಯಕರ ಆಕ್ಷೇಪ

SCROLL FOR NEXT