ಪಾಕಿಸ್ತಾನ ಸೇನಾ ವಾಹನಗಳ ಮೇಲೆ ಬಿಎಲ್ಎ ದಾಳಿ 
ವಿದೇಶ

ಮತ್ತೆ ಪಾಕ್ ಸೇನೆ ವಿರುದ್ಧ ಮುಗಿಬಿದ್ದ Baloch Liberation Army: ರಾಕೆಟ್ ದಾಳಿಗೆ ಪಾಕ್ ಸೈನಿಕರು ಛಿದ್ರ! Video

ಪಾಕಿಸ್ತಾನ ಸೇನೆಯ ವಾಹನ ಸ್ಫೋಟಗೊಂಡು ಅದರಲ್ಲಿದ್ದ ಸೈನಿಕರು ಗಾಳಿಯಲ್ಲಿ ಹಾರಿ ಛಿದ್ರಗೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಇದೀಗ ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಇಸ್ಲಾಮಾಬಾದ್: ಪಾಕಿಸ್ತಾನ ಸೇನೆ ವಿರುದ್ಧ ಬಲೂಚಿಸ್ತಾನ ಲಿಬರೇಷನ್ ಆರ್ಮಿ ಹೋರಾಟ ಮುಂದುವರೆದಿದ್ದು, ಪಾಕಿಸ್ತಾನ ಸೇನೆಯ ವಾಹನಗಳ ಮೇಲೆ ಭೀಕರ ದಾಳಿ ನಡೆಸಿ ಕನಿಷ್ಟ 8 ಸೈನಿಕರನ್ನು ಕೊಂದು ಹಾಕಿದ್ದಾರೆ.

ಹೌದು.. ಬಲೂಚಿಸ್ತಾನದಲ್ಲಿರುವ ಟಂಪ್ ಮತ್ತು ಝಮುರಾನ್‌ನ ಪ್ರಕ್ಷುಬ್ಧ ಪ್ರದೇಶಗಳಲ್ಲಿ ಪಾಕಿಸ್ತಾನಿ ಮಿಲಿಟರಿ ಪಡೆಗಳನ್ನು ಗುರಿಯಾಗಿಸಿಕೊಂಡು ಬಿಎಲ್ಎ (BLA) ಐಇಡಿ ಮತ್ತು ರಾಕೆಟ್ ದಾಳಿ ಮಾಡಿದ್ದು ಈ ಭೀಕರ ದಾಳಿಯಲ್ಲಿ ಪಾಕಿಸ್ತಾನ ಸೇನಾಧಿಕಾರಿ ವಕಾರ್ ಕಾಕರ್ ಸೇರಿದಂತೆ 8 ಸೈನಿಕರು ಹತರಾಗಿದ್ದಾರೆ.

ಈ ದಾಳಿಯ ವಿಡಿಯೋವನ್ನು ಸ್ವತಃ ಬಲೂಚ್ ಲಿಬರೇಶನ್ ಆರ್ಮಿಯ ಮಾಧ್ಯಮ ವಿಭಾಗ ಹಕ್ಕಲ್ ಬಿಡುಗಡೆ ಮಾಡಿದ್ದು, ಪಾಕಿಸ್ತಾನ ಸೇನೆಯ ವಾಹನ ಸ್ಫೋಟಗೊಂಡು ಅದರಲ್ಲಿದ್ದ ಸೈನಿಕರು ಗಾಳಿಯಲ್ಲಿ ಹಾರಿ ಛಿದ್ರಗೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಇದೀಗ ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಇನ್ನು ಬಿಎಲ್ಎ ನಡೆಸಿದ ಈ ದಾಳಿ ಸೆಪ್ಟೆಂಬರ್ 15ರಂದು ಬಲೂಚಿಸ್ತಾನದಲ್ಲಿರುವ ಟಂಪ್ ಮತ್ತು ಝಮುರಾನ್‌ ಪ್ರದೇಶಗಳಲ್ಲಿ ನಡೆದ ದಾಳಿ ಎನ್ನಲಾಗಿದೆ. ಪಾಕಿಸ್ತಾನ ಸೈನಿಕರು ಸೇನಾವಾಹನದಲ್ಲಿ ತೆರಳುತ್ತಿದ್ದಾಗ ಅವರನ್ನು ಗುರಿಯಾಗಿಸಿಕೊಂಡು ಬಿಎಲ್ಎ ಈ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ.

8 ಪಾಕ್ ಸೈನಿಕರ ಕೊಂದಿದ್ದು ನಾವೇ: ಬಿಎಲ್ಎ ಹೇಳಿಕೆ

ಇನ್ನು ಈ ದಾಳಿ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಬಿಎಲ್ಎ, 'ತಾವು ನಡೆಸಿದ ಸಂಘಟಿತ ಸ್ಫೋಟದಲ್ಲಿ ಪಾಕಿಸ್ತಾನ ಸೇನೆಯ ಒಂಬತ್ತು ಸೈನಿಕರು ಹತರಾಗಿದ್ದಾರೆ. ಇತರ ಮೂವರು ಗಾಯಗೊಂಡಿದ್ದಾರೆ. ಬಲೂಚಿಸ್ತಾನದಲ್ಲಿ ಪಾಕಿಸ್ತಾನಿ ಪಡೆಗಳು ಆಕ್ರಮಿಸಿಕೊಳ್ಳಲು ಮುಂದಾದರೆ ಸಂಘಟಿತ, ಮಾರಕ ಮತ್ತು ಪರಿಣಾಮಕಾರಿ ಹಾನಿ"ಯನ್ನುಂಟುಮಾಡುತ್ತೇವೆ. ಇದು ಪಾಕಿಸ್ತಾನ ಸೇನೆ ವಿರುದ್ಧ ಬಿಎಲ್ಎ ಹೊಂದಿರುವ ವಿಶಾಲ ಕಾರ್ಯತಂತ್ರದ ಭಾಗವಾಗಿದೆ. ಮುಂದೆಯೂ ಇದು ಮುಂದುವರೆಯುತ್ತದೆ ಎಂದು ಬಿಎಲ್ಎ ಎಚ್ಚರಿಕೆ ನೀಡಿದೆ.

ಇನ್ನು ಜುಲೈನಲ್ಲಿ ಬಲೂಚಿಸ್ತಾನ್ ಪೋಸ್ಟ್ ವರದಿ ಮಾಡಿದಂತೆ, ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) 2025 ರ ಮೊದಲಾರ್ಧದಲ್ಲಿ 284 ಸಶಸ್ತ್ರ ದಾಳಿಗಳನ್ನು ನಡೆಸಿದೆ. ಈ ಕಾರ್ಯಾಚರಣೆಗಳು ಫಿದಾಯೀನ್ ದಾಳಿಗಳು, ಪಟ್ಟಣಗಳನ್ನು ವಶಪಡಿಸಿಕೊಳ್ಳುವುದು ಮತ್ತು ಜಾಫರ್ ಎಕ್ಸ್‌ಪ್ರೆಸ್ ರೈಲಿನ ಅಪಹರಣ ಸೇರಿದಂತೆ ತೀವ್ರಗೊಂಡ ಸಂಘರ್ಷದ ಹಂತದಲ್ಲಿ 668 ಕ್ಕೂ ಹೆಚ್ಚು ಪಾಕಿಸ್ತಾನಿ ಮಿಲಿಟರಿ ಸಿಬ್ಬಂದಿಯ ಸಾವಿಗೆ ಕಾರಣವಾಯಿತು ಎಂದು ಹೇಳಿದೆ.

2025 ರ ಮೊದಲ ಆರು ತಿಂಗಳಲ್ಲಿ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ನಡೆಸಿದ ದಾಳಿಗಳ ಸಂಖ್ಯೆಯು ಹಿಂದಿನ ವರ್ಷದ ಗುಂಪಿನ ಒಟ್ಟು ಕಾರ್ಯಾಚರಣೆಗಳಿಗೆ ಬಹುತೇಕ ಸಮನಾಗಿದೆ. 2024 ರಲ್ಲಿ, ಬಿಎಲ್‌ಎ 302 ದಾಳಿಗಳ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು, ಇದು 580 ಕ್ಕೂ ಹೆಚ್ಚು ಸಾವುಗಳು ಮತ್ತು 370 ಕ್ಕೂ ಹೆಚ್ಚು ಗಾಯಗಳಿಗೆ ಕಾರಣವಾಯಿತು ಎಂದು ವರದಿ ಹೇಳಿದೆ.

ಏನಿದು ಬಿಎಲ್ಎ? ಅದರ ಉದ್ದೇಶವೇನು?

ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಬಲೂಚಿಸ್ತಾನದಲ್ಲಿರುವ ಸಶಸ್ತ್ರ ಪ್ರತ್ಯೇಕತಾವಾದಿ ಗುಂಪಾಗಿದ್ದು, ಇದು ಪಾಕಿಸ್ತಾನದಿಂದ ಸ್ವಾತಂತ್ರ್ಯವನ್ನು ಬಯಸುತ್ತದೆ. ಮಿಲಿಟರಿ ಗುರಿಗಳು, ಗುಪ್ತಚರ ಕಾರ್ಯಕರ್ತರು ಮತ್ತು ರಾಜ್ಯ ಬೆಂಬಲಿತ ಸೇನಾಪಡೆಗಳ ಮೇಲಿನ ದಾಳಿಗಳು ಸೇರಿದಂತೆ ಸಶಸ್ತ್ರ ದಂಗೆಯ ಮೂಲಕ ಪಾಕಿಸ್ತಾನಿ ಪಡೆಗಳು ಬಲೂಚಿಸ್ತಾನದ "ಆಕ್ರಮಣ" ಎಂದು ಕರೆಯುವುದನ್ನು ಕೊನೆಗೊಳಿಸುವ ಗುರಿಯನ್ನು ಇದು ಹೊಂದಿದೆ. ಸ್ವತಂತ್ರ ಬಲೂಚ್ ರಾಜ್ಯವನ್ನು ಸ್ಥಾಪಿಸುವುದು ಮತ್ತು ಪ್ರದೇಶದ ಸಂಪನ್ಮೂಲಗಳು ಮತ್ತು ರಾಜಕೀಯ ಸ್ವಾಯತ್ತತೆಯ ಮೇಲೆ ನಿಯಂತ್ರಣ ಸಾಧಿಸುವುದು ಬಿಎಲ್‌ಎಯ ಗುರಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Palestine ಗೆ 'ರಾಷ್ಟ್ರ' ಮಾನ್ಯತೆ: ಯುಕೆ, ಆಸ್ಟ್ರೇಲಿಯಾ, ಕೆನಡಾ ಬೆಂಬಲ; Israel ಆಕ್ರೋಶ

Asia Cup 2025: ಮತ್ತೆ ಪಾಕಿಸ್ತಾನ ಬಗ್ಗು ಬಡಿದ ಭಾರತ, 6 ವಿಕೆಟ್ ಭರ್ಜರಿ ಜಯ

Asia Cup 2025: ಮೈದಾನದಲ್ಲೇ ಹೈಡ್ರಾಮಾ, Abhishek Sharma ಜೊತೆ ಪಾಕ್ ವೇಗಿ Harris Rauf ಮಾತಿನ ಚಕಮಕಿ!

Asia Cup 2025: ಮತ್ತೆ ಪಾಕ್ ಗೆ ಮುಜುಗರ, No HandShake policy ಮುಂದುವರೆಸಿದ Suryakumar Yadav ಪಡೆ

Asia Cup 2025: 'ಬಿದ್ರೂ ಮೀಸೆ ಮಣ್ಣಾಗ್ಲಿಲ್ಲಾ..!' ಅರ್ಧಶತಕ ಸಿಡಿಸಿ 'Gun-Firing' ಸಂಭ್ರಮ ಮಾಡಿದ ಪಾಕ್ ಬ್ಯಾಟರ್!

SCROLL FOR NEXT