ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ 
ವಿದೇಶ

'ಪಾಕ್ ಸೇನಾ ಮುಖ್ಯಸ್ಥರು ಬ್ಯಾಟಿಂಗ್ ಮಾಡಿದರೆ ಮಾತ್ರ...': ಭಾರತವನ್ನು ಸೋಲಿಸುವ ಬಗ್ಗೆ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್

ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್‌ 2025 ಪಂದ್ಯಾವಳಿಯಲ್ಲಿ ಭಾರತವು ಪಾಕಿಸ್ತಾನವನ್ನು ಎರಡು ಪಂದ್ಯಗಳಲ್ಲಿ ಸೋಲಿಸಿದ ನಂತರ ಇಮ್ರಾನ್ ಖಾನ್ ಪಿಸಿಬಿ ವಿರುದ್ಧ ವ್ಯಂಗ್ಯ ಹೇಳಿಕೆ ನೀಡಿದ್ದಾರೆ.

ಲಾಹೋರ್: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರನ್ನು ಟೀಕಿಸಿರುವ ಮಾಜಿ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್ ಖಾನ್, ಭಾರತದ ವಿರುದ್ಧ ಕ್ರಿಕೆಟ್ ಪಂದ್ಯ ಗೆಲ್ಲಬೇಕಾದರೆ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಜೊತೆಗೆ ನಾನು ಆರಂಭಿಕ ಆಟಗಾರರಾಗಿ ಬ್ಯಾಟಿಂಗ್ ಮಾಡಬೇಕು ಎಂದು ಹೇಳಿದ್ದಾರೆ.

ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್‌ 2025 ಪಂದ್ಯಾವಳಿಯಲ್ಲಿ ಭಾರತವು ಪಾಕಿಸ್ತಾನವನ್ನು ಎರಡು ಪಂದ್ಯಗಳಲ್ಲಿ ಸೋಲಿಸಿದ ನಂತರ ಇಮ್ರಾನ್ ಖಾನ್ ಪಿಸಿಬಿ ವಿರುದ್ಧ ವ್ಯಂಗ್ಯ ಹೇಳಿಕೆ ನೀಡಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಇಮ್ರಾನ್ ಅವರ ಸಹೋದರಿ ಅಲೀಮಾ ಖಾನ್, ಭಾರತದ ವಿರುದ್ಧ ಕ್ರಿಕೆಟ್ ಪಂದ್ಯ ಗೆಲ್ಲಲು ಏಕೈಕ ಮಾರ್ಗವೆಂದರೆ ಸೇನಾ ಮುಖ್ಯಸ್ಥ ಜನರಲ್ ಮುನೀರ್ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ನಖ್ವಿ ಆರಂಭಿಕರಾಗಿ ಬ್ಯಾಟಿಂಗ್ ಮಾಡಿದರೆ ಮಾತ್ರ ಸಾಧ್ಯ. ಆದರೆ, ಅಂಪೈರ್‌ಗಳಾಗಿ ಪಾಕಿಸ್ತಾನದ ಮಾಜಿ ಮುಖ್ಯ ನ್ಯಾಯಮೂರ್ತಿ ಖಾಜಿ ಫೈಜ್ ಇಸಾ ಮತ್ತು ಪಾಕಿಸ್ತಾನದ ಮುಖ್ಯ ಚುನಾವಣಾ ಆಯುಕ್ತ ಸಿಕಂದರ್ ಸುಲ್ತಾನ್ ರಾಜಾ ಇರಬೇಕು ಎಂದು ಇಮ್ರಾನ್ ಸೂಚಿಸಿದ್ದಾರೆ ಎಂದು ಹೇಳಿದರು.

ಮೂರನೇ ಅಂಪೈರ್ ಇಸ್ಲಾಮಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸರ್ಫರಾಜ್ ದೋಗರ್ ಆಗಿರಬೇಕು ಎಂದು ಅವರು ಹೇಳಿದ್ದಾಗಿ ತಿಳಿಸಿದ್ದಾರೆ.

ಭಾರತದ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡದ ಸತತ ಸೋಲುಗಳ ಬಗ್ಗೆ ತನ್ನ ಸಹೋದರನಿಗೆ ಹೇಳಿದ್ದಾಗಿ ಅಲೀಮಾ ಹೇಳಿದ್ದಾರೆ.

1992ರಲ್ಲಿ ಪಾಕಿಸ್ತಾನವನ್ನು ಏಕದಿನ ವಿಶ್ವಕಪ್‌ನಲ್ಲಿ ಮೊದಲ ಮತ್ತು ಏಕೈಕ ಗೆಲುವಿಗೆ ಕಾರಣರಾದ ಖಾನ್, ತಮ್ಮ ಅಸಮರ್ಥತೆ ಮತ್ತು ಸ್ವಜನಪಕ್ಷಪಾತದಿಂದ ಪಾಕಿಸ್ತಾನಿ ಕ್ರಿಕೆಟ್ ಅನ್ನು ನಾಶಮಾಡಿದ್ದಕ್ಕೆ ನಖ್ವಿ ಅವರನ್ನು ದೂಷಿಸುತ್ತಾರೆ.

2024ರ ಫೆಬ್ರುವರಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಗಿನ ಸಿಜೆಪಿ ಇಸಾ ಮತ್ತು ಮುಖ್ಯ ಚುನಾವಣಾ ಆಯುಕ್ತ ರಾಜಾ ಅವರ ಸಹಾಯದಿಂದ ಜನರಲ್ ಮುನೀರ್ ತಮ್ಮ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್‌ನ ಜನಾದೇಶವನ್ನು ಕದ್ದಿದ್ದಾರೆ ಎಂದು 72 ವರ್ಷದ ಇಮ್ರಾನ್ ಬಹಳ ಹಿಂದಿನಿಂದಲೂ ಆರೋಪಿಸುತ್ತಿದ್ದಾರೆ.

ಪಿಟಿಐ ಸಂಸ್ಥಾಪಕ 2023ರ ಆಗಸ್ಟ್‌ನಿಂದ ಹಲವಾರು ಪ್ರಕರಣಗಳಲ್ಲಿ ಜೈಲಿನಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸುಂಕಾಸ್ತ್ರ, H-1B ಶುಲ್ಕ ಹೆಚ್ಚಳ ವಿವಾದ: ಜೈಶಂಕರ್‌-ಮಾರ್ಕೊ ರುಬಿಯೊ ಭೇಟಿ ಬೆನ್ನಲ್ಲೇ ಭಾರತದ ಸಂಬಂಧ ನಿರ್ಣಾಯಕ ಎಂದ ಅಮೆರಿಕಾ

"False Hindu God": ಅಮೆರಿಕದಲ್ಲಿ ಹನುಮಂತನ ಪ್ರತಿಮೆ ಬಗ್ಗೆ ರಿಪಬ್ಲಿಕನ್ ನಾಯಕನ ವಿವಾದಾತ್ಮಕ ಹೇಳಿಕೆ!

GST ಕಡಿತ, ಹಬ್ಬದ ಸೀಸನ್ ನಲ್ಲಿ ಮಾರುತಿ ಸುಜುಕಿ ಕಾರುಗಳ ಬುಕ್ಕಿಂಗ್ ಗಗನಕ್ಕೆ; ಎಂದಿಗಿಂತ ಶೇ.50 ರಷ್ಟು ಹೆಚ್ಚಳ!

Dharmasthala Case: ದೂರುದಾರ ಚಿನ್ನಯ್ಯನಿಗೆ ಹಣಕಾಸು ನೆರವು ನೀಡಿದ್ದು ಯಾರು..? SIT ತನಿಖೆ ಮತ್ತಷ್ಟು ಚುರುಕು, ಹಲವರಿಗೆ ನೋಟಿಸ್..!

ದೇಶದಾದ್ಯಂತ ರಸ್ತೆ ಗುಂಡಿ ಸಮಸ್ಯೆ ಇದೆ, ಕರ್ನಾಟಕದಲ್ಲಿ ಮಾತ್ರ ಎಂದು ಬಿಂಬಿಸುವುದು ಸರಿಯಲ್ಲ: ಡಿಕೆ ಶಿವಕುಮಾರ್

SCROLL FOR NEXT