ಡೊನಾಲ್ಡ್ ಟ್ರಂಪ್ ಮತ್ತು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ 
ವಿದೇಶ

"ದಿನಕ್ಕೊಂದು, ಕ್ಷಣಕ್ಕೊಂದು ಮಾತನಾಡಬೇಡಿ": ಇರಾನ್ ಯುದ್ಧದ ಬಗ್ಗೆ ಟ್ರಂಪ್​ಗೆ ಮ್ಯಾಕ್ರನ್ ಮಂಗಳಾರತಿ!

ನೀವು ಗಂಭೀರವಾಗಿರಬೇಕು. ದಿನಕ್ಕೊಂದು ಕ್ಷಣಕ್ಕೊಂದು ಮಾತನಾಡಬೇಡಿ. ಒಂದು ದಿನ ಒಂದು ಮಾತು, ಮತ್ತೊಂದು ದಿನ ಇನ್ನೊಂದು ಮಾತು ಹೇಳಬಾರದು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಧ್ಯಪ್ರಾಚ್ಯ ಸಂಘರ್ಷದ ಬಗ್ಗೆ ಪದೇ ಪದೇ ಮಾತನಾಡುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಗುರುವಾರ ಹೇಳಿದ್ದಾರೆ.

"ನೀವು ಗಂಭೀರವಾಗಿರಬೇಕು. ದಿನಕ್ಕೊಂದು ಕ್ಷಣಕ್ಕೊಂದು ಮಾತನಾಡಬೇಡಿ. ಒಂದು ದಿನ ಒಂದು ಮಾತು, ಮತ್ತೊಂದು ದಿನ ಇನ್ನೊಂದು ಮಾತು ಹೇಳಬಾರದು. ನಿತ್ಯವೂ ಇಂತಹ ಹೇಳಿಕೆಗಳನ್ನು ನೀಡುವ ಬದಲು, ಪರಿಸ್ಥಿತಿಯನ್ನು ತಿಳಿಗೊಳಿಸಿ ಶಾಶ್ವತ ಶಾಂತಿಯತ್ತ ಗಮನ ಹರಿಸುವುದು ಉತ್ತಮ" ಎಂದು ಮ್ಯಾಕ್ರನ್ ಅವರು ಟ್ರಂಪ್​ಗೆ ಸರಿಯಾಗಿ ಮಂಗಳಾರತಿ ಮಾಡಿದ್ದಾರೆ.

"ಕದನ ವಿರಾಮ ಘೋಷಿಸಬೇಕು"

ಹೋರ್ಮುಜ್ ಜಲಸಂಧಿಯನ್ನು ಸ್ವತಂತ್ರಗೊಳಿಸಲು ಮಿಲಿಟರಿ ಕಾರ್ಯಾಚರಣೆ ನಡೆಸುವುದು "ಅವಾಸ್ತವಿಕ" ಎಂದು ಮ್ಯಾಕ್ರನ್ ಹೇಳಿದ್ದಾರೆ.

"ಮಿಲಿಟರಿ ಕಾರ್ಯಾಚರಣೆಯ ಮೂಲಕ ಬಲವಂತವಾಗಿ ಹಾರ್ಮುಜ್ ಜಲಸಂಧಿಯನ್ನು ವಿಮೋಚನೆಗೊಳಿಸಲು ಪ್ರತಿಪಾದಿಸುವವರಿದ್ದಾರೆ, ಈ ನಿಲುವನ್ನು ಕೆಲವೊಮ್ಮೆ ಯುನೈಟೆಡ್ ಸ್ಟೇಟ್ಸ್ ವ್ಯಕ್ತಪಡಿಸಿದೆ. ಇದು ಅವಾಸ್ತವಿಕ. ಏಕೆಂದರೆ ಇದು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ಜಲಸಂಧಿಯನ್ನು ದಾಟುವ ಪ್ರತಿಯೊಬ್ಬರು ಇರಾನಿನ ಕ್ರಾಂತಿಕಾರಿ ಗಾರ್ಡ್‌ಗಳಿಂದ ಭಾರೀ ಬೆದರಿಕೆ ಎದುರಿಸಬೇಕಾಗುತ್ತದೆ. ಹೀಗಾಗಿ ಕದನ ವಿರಾಮ ಘೋಷಿಸಬೇಕು" ಎಂದು ಮ್ಯಾಕ್ರನ್ ಹೇಳಿದ್ದಾರೆ.

'ನ್ಯಾಟೋವನ್ನು ದುರ್ಬಲಗೊಳಿಸಿದ ಟ್ರಂಪ್ '

ಮ್ಯಾಕ್ರಾನ್ ಅವರು ಗುರುವಾರ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಟ್ರಂಪ್ ಅವರು ಅಮೆರಿಕದ ಮೈತ್ರಿಕೂಟದ ಬದ್ಧತೆಯ ಬಗ್ಗೆ "ನಿತ್ಯವೂ ಅನುಮಾನ" ಸೃಷ್ಟಿಸುವ ಮೂಲಕ ನಾರ್ತ್ ಆಟ್ಲಾಂಟಿಕ್ ಟ್ರೀಟಿ ಆರ್ಗ್ನೈಸೇಷನ್ (ನ್ಯಾಟೋ)ಅನ್ನು ದುರ್ಬಲಗೊಳಿಸಿದ್ದಾರೆ ಎಂದು ಮ್ಯಾಕ್ರನ್ ಆರೋಪಿಸಿದರು.

ಮಿತ್ರರಾಷ್ಟ್ರಗಳು ಇರಾನ್ ವಿರುದ್ಧದ ಅಮೆರಿಕದ ಮಿಲಿಟರಿ ಕ್ರಮವನ್ನು ಬೆಂಬಲಿಸಲು ವಿಫಲವಾದ ನಂತರ ಅಮೆರಿಕ ನ್ಯಾಟೋದಿಂದ ಹೊರಬರುವ ಬಗ್ಗೆ ಪರಿಗಣಿಸುತ್ತಿರುವುದಾಗಿ ಟ್ರಂಪ್ ಹೇಳಿದ್ದರು.

ನ್ಯಾಟೋವನ್ನು "ಪೇಪರ್ ಟೈಗರ್" ಎಂದು ಟೀಕಿಸಿದ ಟ್ರಂಪ್, ದೊಡ್ಡ ಯುದ್ಧ ಬಂದರೆ ನ್ಯಾಟೋ ನಿಷ್ಪ್ರಯೋಜಕವಾಗಲಿದೆ ಎಂದರು. ಅಮೆರಿಕಕ್ಕೆ ತಮ್ಮ ಸೇನಾ ನೆಲೆಗಳನ್ನು ಬಳಸಲು ಅವಕಾಶ ನೀಡದಿರುವ ಯುರೋಪಿಯನ್ ರಾಷ್ಟ್ರಗಳ ಕ್ರಮಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಅಮೆರಿಕವನ್ನು ನ್ಯಾಟೋದಿಂದ ಹೊರತರುವ ಬಗ್ಗೆಯೂ ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಜಲಸಂಧಿ ಕುರಿತು ಬ್ರಿಟನ್ ನೇತೃತ್ವದಲ್ಲಿ ಮಾತುಕತೆ; ಭಾರತ ಭಾಗಿ: ತೈಲ ಬಿಕ್ಕಟ್ಟಿಗೆ ಬ್ರೇಕ್?

ಪಶ್ಚಿಮ ಏಷ್ಯಾ ಯುದ್ಧದ ಪರಿಸ್ಥಿತಿ ನಿರ್ವಹಣೆ: ಮೋದಿ ಸರ್ಕಾರವನ್ನು ಹಾಡಿ ಹೊಗಳಿದ ಕಾಂಗ್ರೆಸ್ ಹಿರಿಯ ನಾಯಕ; ಪಕ್ಷಕ್ಕೆ ತೀವ್ರ ಮುಜುಗರ!

"ಸೇನಾ ದಾಳಿ ಮಾರ್ಗದಿಂದ...": ಇರಾನ್ ನ್ನು ಶಿಲಾಯುಗಕ್ಕೆ ಅಟ್ಟುವ ಟ್ರಂಪ್ ಬೆದರಿಕೆಗೆ ಚೀನಾ ತೀಕ್ಷ್ಣ ಪ್ರತಿಕ್ರಿಯೆ...

ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ಚೀನಾದ ಹಸ್ತಕ್ಷೇಪ: ಪನಾಮ ಧ್ವಜದ ಹಡಗುಗಳಿಗೆ ತಡೆ, ಸಿಡಿದೆದ್ದ ಅಮೆರಿಕ!

ಯುಎಸ್ ನಿರ್ಬಂಧದ ಹೊರತಾಗಿ ಭಾರತಕ್ಕೆ ತೈಲ ಟ್ಯಾಂಕರ್ ಪ್ರಯಾಣ; ಮತ್ತೊಂದು ರಾಜತಾಂತ್ರಿಕ ಗೆಲುವು

SCROLL FOR NEXT