ಡೊನಾಲ್ಡ್ ಟ್ರಂಪ್- ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್- ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್  online desk
ವಿದೇಶ

'ನಿಮ್ದೊಂದೆರಡು ಕಿತ್ತೋದ ವಿಮಾನವಾಹಕ ನೌಕೆಗಳು ಇದ್ಯಲ್ಲಾ ಯುದ್ಧಕ್ಕೆ ಕಳಿಸ್ತೀರಾ?' ಅಂತ ಕೇಳಿದ್ದೆ, ಮ್ಯಾಕ್ರಾನ್ ಗೆ ಹೆಂಡ್ತಿ ಕಾಟ: ಬ್ರಿಟನ್, ಫ್ರಾನ್ಸ್ ಬಗ್ಗೆ ಟ್ರಂಪ್ ವ್ಯಂಗ್ಯ

ನಿಮ್ಮ ಬಳಿ ಎರಡು ಹಳೆಯ, ಜೀರ್ಣಗೊಂಡ (ಕಿತ್ತೋದ) ವಿಮಾನವಾಹಕ ನೌಕೆಗಳಿವೆ, ಅವನ್ನು ಇರಾನ್ ವಿರುದ್ಧದ ಯುದ್ಧಕ್ಕೆ ಕಳುಹಿಸಬಹುದೇ?’ ಎಂದು ಕೇಳಿದ್ದಾಗಿ ಟ್ರಂಪ್ ಹೇಳಿದ್ದಾರೆ.

ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬ್ರಿಟನ್ ಪ್ರಧಾನಮಂತ್ರಿ ಕೀರ್ ಸ್ಟಾರ್ಮರ್ ಅವರನ್ನು ಅಪಹಾಸ್ಯ ಮಾಡಿ, ಯುದ್ಧಕ್ಕೆ ವಿಮಾನವಾಹಕ ನೌಕೆಗಳನ್ನು ಕಳುಹಿಸುವ ವಿಷಯದಲ್ಲಿ ಅವರು ತಪ್ಪಿಸಿಕೊಳ್ಳುವ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ವೈಟ್ ಹೌಸ್‌ನಲ್ಲಿ ಈಸ್ಟರ್ ಮಧ್ಯಾಹ್ನದ ಊಟದ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ, ಇರಾನ್ ವಿರುದ್ಧ ನಡೆಯುತ್ತಿರುವ ಅಮೆರಿಕಾ–ಇಸ್ರೇಲ್ ಯುದ್ಧಕ್ಕೆ ಬ್ರಿಟನ್‌ನ ವಿಮಾನವಾಹಕ ನೌಕೆಗಳನ್ನು ಕಳುಹಿಸುವ ಬಗ್ಗೆ ನಾನು ಕೇಳಿದಾಗ, ತೀರ್ಮಾನಿಸಲು ತಮ್ಮ ತಂಡದವರ ಜೊತೆ ಮಾತನಾಡಬೇಕೆಂದು ಸ್ಟಾರ್ಮರ್ ಹೇಳಿದ್ದನ್ನು ಟ್ರಂಪ್ ಉಲ್ಲೇಖಿಸಿದ್ದಾರೆ.

ಬ್ರಿಟನ್ “ನಮ್ಮ ಅತ್ಯುತ್ತಮ” ಮಿತ್ರನಾಗಿರಬೇಕು, ಆದರೆ ಯುದ್ಧದ ಸಂದರ್ಭದಲ್ಲಿ ಅವರು ಅಮೆರಿಕವನ್ನು ನಿರಾಶೆಗೊಳಿಸಿದರು. “ನಾನು ಯುಕೆಯನ್ನು ಕೇಳಿದೆ, ನೀವು ನಮ್ಮ ಅತ್ಯುತ್ತಮ ಮಿತ್ರರಾಗಿರಬೇಕು. ಎರಡು ವಾರಗಳಲ್ಲಿ ಬ್ರಿಟನ್ ರಾಜ ಇಲ್ಲಿಗೆ ಬರ್ತಿದ್ದಾರೆ, ಕಿಂಗ್ ಚಾರ್ಲ್ಸ್ ಒಳ್ಳೆಯ ವ್ಯಕ್ತಿ.” ಎಂದು ಟ್ರಂಪ್ ಹೇಳಿದ್ದಾರೆ.

“ಬ್ರಿಟನ್ ನಮ್ಮ ಅತ್ಯುತ್ತಮರಾಗಿರಬೇಕಾದರೂ ಹಾಗೆ ಆಗಲಿಲ್ಲ. ‘ನಿಮ್ಮ ಬಳಿ ಎರಡು ಹಳೆಯ, ಜೀರ್ಣಗೊಂಡ (ಕಿತ್ತೋದ) ವಿಮಾನವಾಹಕ ನೌಕೆಗಳಿವೆ, ಅವನ್ನು ಇರಾನ್ ವಿರುದ್ಧದ ಯುದ್ಧಕ್ಕೆ ಕಳುಹಿಸಬಹುದೇ?’ ಎಂದು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರಲ್ಲಿ ಕೇಳಿದ್ದೆ. ಆಗ ಅವರು, ‘ಓಹ್, ನನ್ನ ತಂಡವನ್ನು ಕೇಳಬೇಕು’ ಎಂದರು. ನಾನು, ‘ನೀವು ಪ್ರಧಾನಮಂತ್ರಿ, ನೀವು ಯಾರನ್ನೂ ಕೇಳಬೇಕಾಗಿಲ್ಲ’ ಎಂದೆ. ಅವರು, ‘ಇಲ್ಲ, ಇಲ್ಲ, ನನ್ನ ತಂಡವನ್ನು ಕೇಳಬೇಕು. ನಾವು ಮುಂದಿನ ವಾರ ಸಭೆ ಮಾಡ್ತಿದ್ದೇವೆ’ ಎಂದರು. ಆದರೆ ಯುದ್ಧ ಈಗಾಗಲೇ ಆರಂಭವಾಗಿದೆ. ಮುಂದಿನ ವಾರಕ್ಕೆ ಯುದ್ಧ ಮುಗಿದೇ ಹೋಗುತ್ತದೆ… ಮೂರು ದಿನಗಳಲ್ಲಿ ಯುದ್ಧ ಮುಗಿದಿರತ್ತೆ,” ಎಂದು ಟ್ರಂಪ್ ವ್ಯಂಗ್ಯವಾಗಿ ಹೇಳಿದ್ದಾರೆ.

ಮ್ಯಾಕ್ರಾನ್ ಗೆ ಪಾಪ ಹೆಂಡ್ತಿ ಕಾಟ

ವೈಟ್ ಹೌಸ್ ಈ ಭಾಷಣದ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದರೂ, ನಂತರ ಅದನ್ನು ಅಳಿಸಿದೆ. ಅದೇ ಭಾಷಣದಲ್ಲಿ ಟ್ರಂಪ್ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಫ್ರೆಂಚ್ ಜನರನ್ನೂ ಹಾಸ್ಯ ಮಾಡಿದ್ದಾರೆ. “ನಾನು ಫ್ರಾನ್ಸ್‌ಗೆ, ಮ್ಯಾಕ್ರೋನ್‌ಗೆ ಕರೆ ಮಾಡಿದೆ ಪಾಪ ಅವರ ಹೆಂಡತಿ ಅವರನ್ನು ತುಂಬಾ ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ. ಇನ್ನೂ ಗಲ್ಲಕ್ಕೆ ಬಿದ್ದ ಹೊಡೆತದಿಂದ ಮ್ಯಾಕ್ರಾನ್ ಚೇತರಿಸಿಕೊಳ್ಳುತ್ತಿದ್ದಾರೆ,” ಎಂದು ಟ್ರಂಪ್ ಅಪಹಾಸ್ಯ ಮಾಡಿದ್ದಾರೆ.

ಫ್ರಾನ್ಸ್ ಕುರಿತು ಮಾತನಾಡುತ್ತಿದ್ದಾಗ ಟ್ರಂಪ್ 2025ರ ಮೇ ತಿಂಗಳ ಒಂದು ವೀಡಿಯೊವನ್ನು ಉಲ್ಲೇಖ ಮಾಡುತ್ತಿದ್ದರು. ವೈರಲ್ ಆಗಿದ್ದ ಆ ವೀಡಿಯೊದಲ್ಲಿ ಬ್ರಿಜಿಟ್ ಮ್ಯಾಕ್ರೋನ್, ವಿಯೆಟ್ನಾಂ ಪ್ರವಾಸದ ವೇಳೆ ಮ್ಯಾಕ್ರೋನ್ ಅವರ ಮುಖವನ್ನು ತಳ್ಳಿದಂತೆ ಕಾಣುತ್ತಿತ್ತು. ನಂತರ ಮ್ಯಾಕ್ರೋನ್ ಅದನ್ನು ತಪ್ಪುಮಾಹಿತಿ ಅಭಿಯಾನದ ಭಾಗವೆಂದು ತಳ್ಳಿ ಹಾಕಿದ್ದರು. ಅದನ್ನೇ ಟ್ರಂಪ್ ಈಗ ಉಲ್ಲೇಖಿಸಿದ್ದಾರೆ.

“ನಾನು ಎಮ್ಯಾನುಯೆಲ್ ಗೆ ಕರೆ ಮಾಡಿ, ನಾವು ಗಲ್ಫ್ ಪ್ರದೇಶದಲ್ಲಿ ಸ್ವಲ್ಪ ಸಹಾಯವನ್ನು ಬಯಸುತ್ತೇವೆ, ಯಾಕೆಂದರೆ ನಾವು ದುಷ್ಟರನ್ನು ಹೊಡೆದುರುಳಿಸುವಲ್ಲಿ, ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಾಶ ಮಾಡುವಲ್ಲಿ ದಾಖಲೆಗಳನ್ನು ನಿರ್ಮಿಸುತ್ತಿದ್ದರೂ, ನಿಮ್ಮ ಸಹಾಯ ಬೇಕಿದೆ. ಸಾಧ್ಯವಾದರೆ, ದಯವಿಟ್ಟು ತಕ್ಷಣವೇ ಹಡಗುಗಳನ್ನು ಕಳುಹಿಸಬಹುದೇ?’” ಎಂದು ಕೇಳಿದ್ದೆ ಎಂದಿರುವ ಟ್ರಂಪ್, ಫ್ರೆಂಚ್ ಉಚ್ಚಾರಣೆಯನ್ನು ಅನುಕರಿಸಿ ಮ್ಯಾಕ್ರೋನ್ ಅವರ ಉತ್ತರವನ್ನು ವ್ಯಂಗ್ಯವಾಗಿ ಅನುಕರಣೆ ಮಾಡಿ ಹೇಳಿದ್ದಾರೆ.

“‘ಇಲ್ಲ ಇಲ್ಲ, ನಾನು ಹಡಗುಗಳನ್ನು ಕಳಿಸಲಾರೆ, ಡೊನಾಲ್ಡ್. ಯುದ್ಧ ಗೆದ್ದ ನಂತರ ಬೇಕಾದರೆ ಕಳಿಸಬಹುದು" ಎಂದು ಮಾಕ್ರಾನ್ ಹೇಳಿದರು. ನಾನು, ‘ಇಲ್ಲ ಇಲ್ಲ, ನನಗೆ ಯುದ್ಧ ಗೆದ್ದ ನಂತರ ಬೇಡ, ಎಮ್ಯಾನುಯೆಲ್’ ಎಂದೆ,” ಎಂದು ಟ್ರಂಪ್ ವ್ಯಂಗ್ಯವಾಗಿ ಹೇಳಿದ್ದಾರೆ.

“ಇಷ್ಟೆಲ್ಲಾ ಆದ ನಂತರ ನಾನು ನಾಟೋ ಬಗ್ಗೆ ಕಲಿತೆ. ನಾವು ಯಾವಾಗಲಾದರೂ ‘ದೊಡ್ಡ’ ಯುದ್ಧವನ್ನು ಎದುರಿಸಬೇಕಾದರೆ, ಆಗ ನಾಟೋ ನಮ್ಮ ಜೊತೆ ಇರೋದಿಲ್ಲ ಎಂಬುದು ಅರ್ಥವಾಯಿತು". ನಾಟೋ “ಕಾಗದದ ಹುಲಿ” ಎಂದು ಹೇಳುವ ಮೂಲಕ ನ್ಯಾಟೋ ವಿರುದ್ಧದ ತೀವ್ರ ಟೀಕೆಯನ್ನು ಟ್ರಂಪ್ ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Bengal polls: ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ರಾಜಕಾರಣಿಗಳಿಗೆ ಸೆಕ್ಯೂರಿಟಿ ವಾಪಸ್, ಚುನಾವಣಾ ಆಯೋಗ ನಿರ್ದೇಶನ!

ಅಮೆರಿಕದ ಬಲಿಷ್ಠ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್: ವಿಮಾನದಿಂದ ಧುಮುಕಿದ ಪೈಲಟ್‌ ಗಾಗಿ ಶೋಧ; ಬಹುಮಾನ ಘೋಷಣೆ

Iran War: Hormuz ಕುರಿತು ಬಹ್ರೇನ್ ನೇತೃತ್ವದಲ್ಲಿ ಕರಡು ನಿರ್ಣಯ; UNSC ಮತದಾನ ನಾಳೆ!

ಏನಾಗ್ತಿದೆ ಅಮೇರಿಕಾದಲ್ಲಿ?: ಸೇನಾ ಮುಖ್ಯಸ್ಥರನ್ನು ಕಿತ್ತೆಸೆದ ಬೆನ್ನಲ್ಲೇ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಗೆ Fraud Czar ಪಟ್ಟ ಕಟ್ಟಿದ ಟ್ರಂಪ್!

ಚುನಾವಣೆಗೂ ಮುನ್ನವೇ TVK ವಿಜಯ್‌ಗೆ ಸಂಕಷ್ಟ? ಎರಡು ಕಡೆ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತ ಸಾಧ್ಯತೆ!

SCROLL FOR NEXT