ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಟ್ಯಾಂಕರ್ ಗಳ ಮೇಲೆ ಇರಾನ್ ದಾಳಿ 
ವಿದೇಶ

ಹಾರ್ಮುಜ್'ನಲ್ಲಿ ಹಡಗುಗಳ ಮೇಲೆ ಗುಂಡಿನ ದಾಳಿ: ಭಾರತ-ಇರಾನ್ ಸಂಬಂಧ 5,000 ವರ್ಷಗಳಷ್ಟು ಹಳೆಯದು, ಅಲ್ಪಕಾಲಿಕ ಘಟನೆಗಳು ಪರಿಣಾಮ ಬೀರಲ್ಲ; ಟೆಹ್ರಾನ್

ಭಾರತ ಮತ್ತು ಇರಾನ್ ನಡುವಿನ ಸಂಬಂಧವು ಕೇವಲ ರಾಜತಾಂತ್ರಿಕವಲ್ಲ, ಬದಲಾಗಿ 5,000 ವರ್ಷಗಳ ಹಳೆಯದಾದ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ನಾಗರಿಕ ಸಂಬಂಧವಾಗಿದೆ. ಈ ಸಂಬಂಧವು ಎಷ್ಟು ಗಾಢವಾಗಿದೆ ಎಂದರೆ ಯಾವುದೇ ಅಲ್ಪಕಾಲಿಕ ಘಟನೆಗಳು ಇದನ್ನು ಹಾನಿಗೊಳಿಸಲು ಸಾಧ್ಯವಿಲ್ಲ.

ಹಾರ್ಮೂಜ್ ಜಲಸಂಧಿಯಲ್ಲಿ ಎರಡು ಭಾರತೀಯ ಧ್ವಜದ ಹಡಗುಗಳ ಮೇಲೆ ನಡೆದ ಗುಂಡಿನ ದಾಳಿಯ ಘಟನೆ ಬಳಿಕ ಇರಾನ್ ಮತ್ತು ಭಾರತದ ನಡುವಿನ ಸಂಬಂಧಗಳ ಬಗ್ಗೆ ಚರ್ಚೆಗಳು ಆರಂಭವಾಗಿದ್ದು, ಇದರ ಬೆನ್ನಲ್ಲೇ ಭಾರತ–ಇರಾನ್ ಸಂಬಂಧಗಳು ಅತ್ಯಂತ ಬಲಿಷ್ಠವಾಗಿವೆ ಎಂದು ಸ್ಪಷ್ಟಪಡಿಸಿದೆ.

ಇರಾನ್‌ ರಾಷ್ಟ್ರದ ಪರಮೋಚ್ಛ ನಾಯಕನ ಭಾರತದ ಪ್ರತಿನಿಧಿ ಡಾ. ಅಬ್ದುಲ್ ಮಜೀದ್ ಹಕೀಮ್ ಇಲಾಹಿ ಅವರು ಮಾತನಾಡಿ, ಭಾರತ–ಇರಾನ್ ಸಂಬಂಧಗಳು ಅತ್ಯಂತ ಬಲಿಷ್ಠವಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ ಹಾಗೂ ಈ ಪ್ರದೇಶದಲ್ಲಿ ಶಾಂತಿ ಕಾಪಾಡಬೇಕೆಂದು ಕರೆ ನೀಡಿದ್ದಾರೆ.

ಭಾರತ ಮತ್ತು ಇರಾನ್ ನಡುವಿನ ಸಂಬಂಧ ಅತ್ಯಂತ ಗಟ್ಟಿಯಾಗಿದೆ. ಎರಡೂ ದೇಶಗಳ ನಡುವಿನ ಉತ್ತಮ ಸಂಬಂಧದಿಂದ ಭಾರತಕ್ಕೆ ಹಾರ್ಮೂಜ್ ಜಲಸಂಧಿಯ ಮೂಲಕ ತೈಲ ಸಾಗಣೆ ಮತ್ತು ಟ್ಯಾಂಕರ್ ಸಂಚಾರದಲ್ಲಿ ಬಹಳ ಲಾಭವಾಗಿದೆ ಎಂದು ಹೇಳಿದ್ದಾರೆ.

ಭಾರತದ ಪ್ರಧಾನಿ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಷ್ಕಿಯಾನ್ ನಡುವೆ ಯಶಸ್ವಿ ಮಾತುಕತೆಗಳು ನಡೆದಿದ್ದು, ವಿದೇಶಾಂಗ ಸಚಿವರ ಮಟ್ಟದಲ್ಲಿಯೂ ನಿರಂತರ ಮಾತುಕತೆಗಳು ನಡೆದಿವೆ ಎಂದು ವಿವರಿಸಿದ್ದಾರೆ.

ಭಾರತ ಮತ್ತು ಇರಾನ್ ನಡುವಿನ ಸಂಬಂಧವು ಸುಮಾರು 5,000 ವರ್ಷಗಳ ನಾಗರಿಕತೆ, ಸಂಸ್ಕೃತಿ ಮತ್ತು ಇತಿಹಾಸದ ಆಧಾರವನ್ನು ಹೊಂದಿದೆ. ಭಾರತ ಮತ್ತು ಇರಾನ್ ನಡುವಿನ ಸಂಬಂಧವು ಕೇವಲ ರಾಜತಾಂತ್ರಿಕವಲ್ಲ, ಬದಲಾಗಿ 5,000 ವರ್ಷಗಳ ಹಳೆಯದಾದ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ನಾಗರಿಕ ಸಂಬಂಧವಾಗಿದೆ. ಈ ಸಂಬಂಧವು ಎಷ್ಟು ಗಾಢವಾಗಿದೆ ಎಂದರೆ ಯಾವುದೇ ಅಲ್ಪಕಾಲಿಕ ಘಟನೆಗಳು ಇದನ್ನು ಹಾನಿಗೊಳಿಸಲು ಸಾಧ್ಯವಿಲ್ಲ ಈ ಸಂಬಂಧ ಇನ್ನಷ್ಟು ಬಲವಾಗುತ್ತಲೇ ಹೋಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಭಾರತೀಯ ಹಡಗುಗಳ ಮೇಲೆ ನಡೆದ ಗುಂಡಿನ ದಾಳಿ ಕುರಿತು ಮಾತನಾಡಿರುವ ಅವರು, ಗುಂಡಿನ ದಾಳಿ ಕುರಿತು ನನಗೆ ವಿವರಗಳು ಸ್ಪಷ್ಟವಾಗಿ ತಿಳಿದಿಲ್ಲ ಎಂದು ಹೇಳಿದ್ದು, “ಈ ಘಟನೆ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ, ಇದು ಶೀಘ್ರದಲ್ಲೇ ಪರಿಹಾರವಾಗಲಿ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ಈ ಪ್ರದೇಶದಲ್ಲಿ ಯುದ್ಧ ಬೇಡ, ಶಾಂತಿ ಬೇಕು ಎಂಬುದನ್ನು ಒತ್ತಿ ಹೇಳಿದ್ದಾರೆ.

ನಾವು ಯುದ್ಧವನ್ನು ಬಯಸುವುದಿಲ್ಲ, ಶಾಂತಿ ಬೇಕು. ಇತರೆ ರಾಷ್ಟ್ರಗಳೂ ಶಾಂತಿಗೆ ಸಹಕರಿಸಬೇಕು ಎಂದು ಹೇಳಿದ್ದಾರೆ.

ಬಳಿಕ ಹಾರ್ಮುಜ್ ಜಲಸಂಧಿಯ ಸ್ಥಿತಿಗತಿಗಳ ಬಗ್ಗೆ ಮಾತನಾಡಿದ ಅವರು, ಭದ್ರತಾ ಕಾರಣಗಳಿಂದ ಕೆಲ ಸಮಯದ ಮಟ್ಟಿಗೆ ಸಂಚಾರದಲ್ಲಿ ಅಡಚಣೆ ಉಂಟಾಗಿದೆ ಎಂದು ತಿಳಿಸಿದ್ದಾರೆ.

“ಜಲಸಂಧಿ ಮೊದಲು ತೆರೆದಿತ್ತು, ಆದರೆ ಇರಾನ್ ವಿರುದ್ಧ ಹೇರಲಾಗಿರುವ ಒತ್ತಡ ಮತ್ತು ಭದ್ರತಾ ಸಮಸ್ಯೆಗಳ ಕಾರಣದಿಂದ ಕೆಲ ನಿರ್ಬಂಧಗಳು ಬಂದಿವೆ. ಸಮಸ್ಯೆಗಳು ಪರಿಹಾರವಾದ ನಂತರ ಇದು ಮತ್ತೆ ಸಂಪೂರ್ಣವಾಗಿ ತೆರೆದಿಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇಲಾಹಿ ಅವರು ಅಮೆರಿಕ ಮತ್ತು ಇರಾನ್ ನಡುವೆ ನಡೆದ ಶಾಂತಿ ಮಾತುಕತೆಗಳ ಕುರಿತು ಕೂಡ ಪ್ರತಿಕ್ರಿಯಿಸಿದ್ದು, ಮಾತುಕತೆಗಳು ವಿಫಲವಾಗಿರುವಾಗಿ ತಿಳಿಸಿದ್ದಾರೆ.

ಅಮೆರಿಕ ಆರಂಭದಲ್ಲಿ 10 ಅಂಶಗಳ ಆಧಾರದ ಮೇಲೆ ಮಾತುಕತೆಗೆ ಒಪ್ಪಿಕೊಂಡಿದ್ದರೂ ನಂತರ ಬೇರೆ ಬೇಡಿಕೆಗಳನ್ನು ಮುಂದಿಟ್ಟ ಕಾರಣದಿಂದ ಚರ್ಚೆಗಳು ವಿಫಲವಾದವು ಎಂದು ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ಪ್ರಸ್ತಾವನೆಗಳ ಆಧಾರದ ಮೇಲೆ ಮಾತುಕತೆಗಳು ನಡೆಯಬಹುದೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್; ಭಾರತ್ ಜೋಡೋ ಯುವ ಸಂಘಕ್ಕೆ 10 ಲಕ್ಷ ರೂ: ನೂತನ CM ಡಿಕೆಶಿ ಹಲವು ಘೋಷಣೆ

KPCC ಅಧ್ಯಕ್ಷ ಸ್ಥಾನಕ್ಕೆ CM ಡಿಕೆಶಿ ರಾಜೀನಾಮೆ: ಬಿ.ಕೆ ಹರಿಪ್ರಸಾದ್ ನೂತನ ಸಾರಥಿ; ಸತೀಶ್ ಜಾರಕಿಹೊಳಿಗೆ ತೀವ್ರ ನಿರಾಸೆ!

IPL 2026: ನಿಷೇಧದ ಬೆನ್ನಲ್ಲೇ RCB ಸ್ಫೋಟಕ ಬ್ಯಾಟರ್ ಸಿಗರೇಟ್ ಸೇದುವ ವಿಡಿಯೋ ವೈರಲ್; ಮತ್ತೆ ನಿಯಮ ಉಲ್ಲಂಘಿಸಿದ್ರಾ ಟಿಮ್?

'ಯೋಗಿ ಜೀ ನಮ್ಮನ್ನು ಕ್ಷಮಿಸಿ': ಉತ್ತರ ಪ್ರದೇಶ CM ಕ್ಷಮೆ ಕೋರಿದ 150 ರೌಡಿಶೀಟರ್ಸ್!

ನೆತನ್ಯಾಹು 'ಹುಚ್ಚ'; ಇರಾನ್ ಜೊತೆಗಿನ ಶಾಂತಿ ಮಾತುಕತೆ ಹಳ್ಳಹಿಡಿಸುತ್ತಿದ್ದಾರೆ: ಡೊನಾಲ್ಡ್ ಟ್ರಂಪ್

SCROLL FOR NEXT