ಸಂಗ್ರಹ ಚಿತ್ರ 
ವಿದೇಶ

ಪಾಕ್'ನಲ್ಲಿ 2ನೇ ಸುತ್ತಿನ ಸಂಧಾನ ಸಭೆ: ನೇರ ಮಾತುಕತೆಗೆ ಅಮೆರಿಕಾ ಒತ್ತಾಯ, ಇರಾನ್ ನಕಾರ

ಇರಾನ್ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ತೋರಿಸುತ್ತಿಲ್ಲ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ನೇರ ಮಾತುಕತೆಗಳಿಗೆ ಸಮ್ಮತಿಸದೆ, ಪಾಕಿಸ್ತಾನವನ್ನು ಮಧ್ಯವರ್ತಿಯಾಗಿ ಬಳಸಿಕೊಂಡು ಪರೋಕ್ಷ (indirect) ಸಂಧಾನವನ್ನೇ ಮುಂದುವರಿಸಲು ತೀರ್ಮಾನಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಉದ್ವಿಗ್ನತೆ ಮತ್ತು ಹಾರ್ಮುಜ್ ಸಂಕಷ್ಟದ ನಡುವೆ ಪಾಕಿಸ್ತಾನದಲ್ಲಿ ಅಮೆರಿಕಾ–ಇರಾನ್ ನಡುವಿನ ಎರಡನೇ ಸುತ್ತಿನ ಸಂಧಾನ ಸಭೆ ನಡೆಯುತ್ತಿದ್ದು, ಈ ಮಾತುಕತೆ ಮಹತ್ವ ಪಡೆದುಕೊಂಡಿದೆ. ಆದರೆ, ನೇರ ಮಾತುಕತೆ ಕುರಿತಾಗಿ ಎರಡೂ ದೇಶಗಳ ನಡುವೆ ಭಿನ್ನಾಭಿಪ್ರಾಯಗಳು ಮುಂದುವರಿದಿರುವುದು ಸಂಧಾನ ಪ್ರಕ್ರಿಯೆಗೆ ಸವಾಲಾಗಿ ಪರಿಣಮಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಆಡಳಿತವು ಈ ಬಾರಿ ನೇರ (direct) ಮಾತುಕತೆಗಳಿಗೆ ಒತ್ತಾಯಿಸುತ್ತಿದೆ. ತಮ್ಮ ವಿಶೇಷ ಪ್ರತಿನಿಧಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಅವರನ್ನು ಇಸ್ಲಾಮಾಬಾದ್‌ಗೆ ಕಳುಹಿಸಿರುವ ಅಮೆರಿಕಾ, ಮುಖಾಮುಖಿ ಚರ್ಚೆಗಳ ಮೂಲಕ ತ್ವರಿತವಾಗಿ ಒಪ್ಪಂದಕ್ಕೆ ಬರಲು ಯತ್ನಿಸುತ್ತಿದೆ.

ವೈಟ್‌ಹೌಸ್ ಪ್ರಕಾರ, ನೇರ ಸಂವಾದವೇ ನಂಬಿಕೆ ನಿರ್ಮಾಣಕ್ಕೆ ಮತ್ತು ಯುದ್ಧ ವಿರಾಮದ ದಿಕ್ಕಿನಲ್ಲಿ ಸ್ಪಷ್ಟ ಪ್ರಗತಿಗೆ ಸಹಕಾರಿ ಎಂದು ಹೇಳಿದೆ.

ಆದರೆ, ಇರಾನ್ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ತೋರಿಸುತ್ತಿಲ್ಲ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ನೇರ ಮಾತುಕತೆಗಳಿಗೆ ಸಮ್ಮತಿಸದೆ, ಪಾಕಿಸ್ತಾನವನ್ನು ಮಧ್ಯವರ್ತಿಯಾಗಿ ಬಳಸಿಕೊಂಡು ಪರೋಕ್ಷ (indirect) ಸಂಧಾನವನ್ನೇ ಮುಂದುವರಿಸಲು ತೀರ್ಮಾನಿಸಿದ್ದಾರೆ.

ಅಮೆರಿಕಾದ ನೌಕಾ ದಿಗ್ಬಂಧನ (naval blockade) ಮುಂದುವರಿದಿರುವವರೆಗೆ ನೇರ ಸಂಧಾನ ಸಾಧ್ಯವಿಲ್ಲ ಎಂಬುದು ಇರಾನ್ ಕಠಿಣ ನಿಲುವಾಗಿದೆ.

ಈ ನಡುವೆ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಉದ್ವಿಗ್ನತೆ ಜಾಗತಿಕ ಇಂಧನ ಸರಬರಾಜಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆ ಕುಂಠಿತವಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ಕಂಡುಬರುತ್ತಿದೆ. ಹಾರ್ಮುಜ್ ಮಾರ್ಗವು ವಿಶ್ವದ ಇಂಧನ ಸಾಗಣೆಯ ಪ್ರಮುಖ ದಾರಿಯಾಗಿರುವುದರಿಂದ, ಇದರ ಅಡಚಣೆಗಳು ಹಲವು ದೇಶಗಳ ಆರ್ಥಿಕ ಸ್ಥಿತಿಗತಿ ಮೇಲೆ ನೇರ ಪರಿಣಾಮ ಬೀರಿವೆ.

ಮೊದಲ ಸುತ್ತಿನ ಮಾತುಕತೆಗಳು ಉಪಾಧ್ಯಕ್ಷ ಜೆಡಿ.ವ್ಯಾನ್ಸ್ ನೇತೃತ್ವದಲ್ಲಿ ನಡೆದರೂ ಯಾವುದೇ ಸ್ಪಷ್ಟ ಫಲಿತಾಂಶ ನೀಡಲಿಲ್ಲ. ಹೀಗಾಗಿ, ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಅವರನ್ನು ಇಸ್ಲಾಮಾಬಾದ್‌ಗೆ ಕಳುಹಿಸುತ್ತಿದ್ದು, ಮಾತುಕತೆಗಳು ಯಶಸ್ನಿಯಾದರೆ ಮಾತ್ರ ಜೆಡಿ.ವ್ಯಾನ್ಸ್ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆಂದು ಹೇಳಲಾಗುತ್ತಿದೆ.

ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಸೇರಿದಂತೆ ಅಮೆರಿಕದ ರಾಷ್ಟ್ರೀಯ ಭದ್ರತಾ ತಂಡ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದೆ.

ಈ ನಡುವೆ ಯುರೋಪಿಯನ್ ಕೌನ್ಸಿಲ್‌ನ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಅವರು ಹಾರ್ಮುಜ್ ಮಾರ್ಗವನ್ನು ತಕ್ಷಣವೇ ಯಾವುದೇ ನಿರ್ಬಂಧವಿಲ್ಲದೆ ತೆರೆಯಬೇಕು ಎಂದು ಒತ್ತಾಯಿಸಿದ್ದು, “ಇದು ಜಾಗತಿಕ ಆರ್ಥಿಕತೆಗೆ ಅತ್ಯಗತ್ಯ” ಎಂದು ಹೇಳಿದ್ದಾರೆ.

ಇಸ್ಲಾಮಾಬಾದ್​ಗೆ ಬಂದಿಳಿದ ಇರಾನ್ ನಿಯೋಗ

ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ನೇತೃತ್ವದ ನಿಯೋಗವು ತಡರಾತ್ರಿ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್​ಗೆ ಆಗಮಿಸಿದೆ.

ವಿದೇಶಾಂಗ ಸಚಿವ ಅರಘ್ಚಿ ಸೇರಿದಂತೆ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕೈ ಒಳಗೊಂಡ ಇರಾನ್ ನಿಯೋಗ ಇಸ್ಲಾಮಾಬಾದ್​ಗೆ ಬಂದಿಳಿದಿದ್ದು, ಪಾಕ್​ ಜೊತೆ ಚರ್ಚೆ ನಡೆಸಲಿದೆ.

ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಪಾಕಿಸ್ತಾನ ರಕ್ಷಣಾ ಪಡೆಗಳ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಜನರಲ್ ಅಸಿಮ್ ಮುನೀರ್ ಅವರ ಜೊತೆ ಇರಾನ್ ನಿಯೋಗ ಮಾತುಕತೆ ನಡೆಸಲಿದೆ ಎಂದು ಪಾಕಿಸ್ತಾನಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಗೆಯೇ ಇರಾನ್ ಸಚಿವರು ಎರಡನೇ ಸುತ್ತಿನ ಶಾಂತಿ ಮಾತುಕತೆಗಾಗಿ ಅಮೆರಿಕದ ಅಧಿಕಾರಿಗಳನ್ನು ಸಹ ಭೇಟಿ ಮಾಡಬಹುದು ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ–ಇರಾನ್ ನಡುವೆ ಮುಂದುವರೆದ ಶಾಂತಿ ಪ್ರಯತ್ನ: ಪಾಕ್'ನಲ್ಲಿ 2ನೇ ಸುತ್ತಿನ ಸಂಧಾನ ಸಭೆ, ವ್ಯಾನ್ಸ್ ಬದಲು ವಿಟ್ಕಾಫ್, ಕುಶ್ನರ್‌ಗೆ ಜವಾಬ್ದಾರಿ..!

IPL 2026: ಶುಭ್ ಮನ್ ಗಿಲ್ ಗೆ ಸಖತ್ತಾಗಿ ಟಾಂಟ್ ಕೊಟ್ಟ ಸ್ಪಿನ್ನರ್ ಸುಯಾಶ್ ಶರ್ಮಾ! ನೆಟ್ಟಿಗರು 'ಫಿದಾ'

AAP ತೊರೆದು ಬಿಜೆಪಿ ಸೇರಿದ 7 ಸಂಸದರು, ಮೇಲ್ಮನೆಯಲ್ಲಿ ಬಲ ಹೆಚ್ಚಿಸಿಕೊಂಡ NDA: ಮೂರನೇ ಎರಡು ಬಹುಮತಕ್ಕೆ ಕೇವಲ 17 ಸೀಟು ಬಾಕಿ

ರಷ್ಯಾ-ಇರಾನ್ ತೈಲಕ್ಕೆ ಅಮೆರಿಕಾ ಕಟ್ಟುನಿಟ್ಟಿನ ನಿಲುವು: ವಿನಾಯಿತಿ ವಿಸ್ತರಣೆ ಇಲ್ಲ; ಅಮೆರಿಕಾ ಕಠಿಣ ನಿಲುವು

ಕುದೂರು BDCC ಬ್ಯಾಂಕಿನಲ್ಲಿ ನಕಲಿ ಚಿನ್ನದ ಹಗರಣ: ಮಾಗಡಿಯ ಮಾಜಿ- ಹಾಲಿ ಶಾಸಕರ ಬಹಿರಂಗ ಚರ್ಚೆ! ಚಕ್ರಬಾವಿಯಲ್ಲಿ ನಿಷೇಧಾಜ್ಞೆ ಜಾರಿ!

SCROLL FOR NEXT