ವೈಟ್ ಹೌಸ್ ಮೇಲೆ ದಾಳಿಗೆ ಯತ್ನಿಸಿದ ದಾಳಿಕೋರ  
ವಿದೇಶ

ಅಮೆರಿಕ ವೈಟ್ ಹೌಸ್ ನಲ್ಲಿ ಡೊನಾಲ್ಡ್ ಟ್ರಂಪ್ ಮೇಲೆ ದಾಳಿಗೆ ಯತ್ನಿಸಿದ Cole Tomas Allen ಯಾರು?

ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರನ್ನು ತಕ್ಷಣವೇ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ವೇದಿಕೆಯಿಂದ ಸುರಕ್ಷಿತವಾಗಿ ಹೊರಕ್ಕೆ ಕರೆತಂದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಕಾನೂನು ಜಾರಿಗೆ ಸಂಬಂಧಿಸಿದ ಅಧಿಕಾರಿಗಳು, ನಿನ್ನೆ ಶನಿವಾರ ರಾತ್ರಿ ವಾಷಿಂಗ್ಟನ್ ಹಿಲ್ಟನ್‌ನಲ್ಲಿ ಗುಂಡಿನ ದಾಳಿ ನಡೆಸಿದ ಶಂಕಿತನನ್ನು ಕ್ಯಾಲಿಫೋರ್ನಿಯಾದ 31 ವರ್ಷದ ಎಂಜಿನಿಯರ್ ಮತ್ತು ಕಂಪ್ಯೂಟರ್ ವಿಜ್ಞಾನಿ ಕೋಲ್ ಟೋಮಾಸ್ ಆಲೆನ್ ಎಂದು ಗುರುತಿಸಿದ್ದಾರೆ.

ಟೋರನ್ಸ್ ನಿವಾಸಿಯಾಗಿರುವ ಆಲೆನ್, ವೈಟ್ ಹೌಸ್ ವರದಿಗಾರರ ವಾರ್ಷಿಕ ಔತಣಕೂಟ ಕಾರ್ಯಕ್ರಮದ ವೇಳೆ ಹೈ-ಸಿಕ್ಯೂರಿಟಿ ತಪಾಸಣಾ ಕೇಂದ್ರದತ್ತ ದೌಡಾಯಿಸಿದ ನಂತರ ಯುನೈಟೆಡ್ ಸ್ಟೇಟ್ಸ್ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳಿಂದ ಬಂಧಿಸಲ್ಪಟ್ಟನು.

ಈ ಘಟನೆ ಹೊಟೇಲ್ ನ ಬಾಲ್‌ರೂಮ್ ಹೊರಭಾಗದಲ್ಲಿ ಭೀತಿಯ ವಾತಾವರಣವನ್ನು ಉಂಟುಮಾಡಿತು. ಎಎಫ್‌ಪಿ ವರದಿಯ ಪ್ರಕಾರ, ಶಸ್ತ್ರಸಜ್ಜಿತ ತಾಂತ್ರಿಕ ತಂಡಗಳು ಸ್ಥಳಕ್ಕೆ ಧಾವಿಸಿದಾಗ, ಸಚಿವ ಸಂಪುಟದ ಸದಸ್ಯರು ಮತ್ತು ಪತ್ರಕರ್ತರು ಸೇರಿದಂತೆ ಅತಿಥಿಗಳು ಮೇಜುಗಳ ಕೆಳಗೆ ಅಡಗಿ ಕುಳಿತರು.

ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರನ್ನು ತಕ್ಷಣವೇ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ವೇದಿಕೆಯಿಂದ ಸುರಕ್ಷಿತವಾಗಿ ಹೊರಕ್ಕೆ ಕರೆತಂದರು. ಘಟನೆಯ ತಕ್ಷಣದ ನಂತರ, ಟ್ರಂಪ್ ಟ್ರೂತ್ ಸೋಶಿಯಲ್‌ನಲ್ಲಿ “LET THE SHOW GO ON” ಎಂದು ಪೋಸ್ಟ್ ಮಾಡಿದ್ದರೂ, ಭದ್ರತಾ ಕಾರಣಗಳಿಂದ ಕಾರ್ಯಕ್ರಮವನ್ನು ಕೊನೆಯಲ್ಲಿ ರದ್ದುಗೊಳಿಸಲಾಯಿತು.

ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಸೀಕ್ರೆಟ್ ಸರ್ವಿಸ್‌ನ ಒಬ್ಬ ಅಧಿಕಾರಿ ಸಮೀಪದಿಂದ ಗುಂಡಿಗೆ ಗುರಿಯಾದರೂ, ಬುಲೆಟ್‌ಪ್ರೂಫ್ ಜಾಕೆಟ್‌ನಿಂದ ಗಂಭೀರ ಗಾಯದಿಂದ ತಪ್ಪಿಸಿಕೊಂಡಿದ್ದಾನೆ ಎಂದು ಟ್ರಂಪ್ ತಿಳಿಸಿದ್ದಾರೆ.

WIRED ನಡೆಸಿದ ಸಾರ್ವಜನಿಕ ದಾಖಲೆಗಳ ಪರಿಶೀಲನೆಯ ಪ್ರಕಾರ, ಆಲೆನ್‌ಗೆ ವಿದ್ಯಾಭ್ಯಾಸ ಮತ್ತು ತಾಂತ್ರಿಕ ಹಿನ್ನೆಲೆ ಇದ್ದರೂ, ಆನ್‌ಲೈನ್‌ನಲ್ಲಿ ಸಕ್ರಿಯವಾಗಿರುವುದು ಕಡಿಮೆ ಇದೆ. ಅವನ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, 2017ರಲ್ಲಿ ಕ್ಯಾಲ್ಟೆಕ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದು, 2025ರಲ್ಲಿ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿ ಡೊಮಿಂಗ್ವೆಜ್ ಹಿಲ್ಸ್‌ನಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾನೆ. ಕ್ಯಾಲ್ಟೆಕ್ ವೆಬ್‌ಸೈಟ್‌ನಲ್ಲಿರುವ ಒಂದು ಚಿತ್ರದಲ್ಲಿ ಅವನು ರೋಬೋಟಿಕ್ಸ್ ಡಿಸೈನ್ ಲ್ಯಾಬ್ ಸದಸ್ಯನಾಗಿರುವುದು ಗುರುತಿಸಲಾಗಿದೆ ಎಂದು WIRED ತಿಳಿಸಿದೆ.

ವೃತ್ತಿಪರವಾಗಿ, ಆಲೆನ್ C2 ಎಜುಕೇಶನ್ ಎಂಬ ಖಾಸಗಿ ಟ್ಯೂಟರಿಂಗ್ ಸಂಸ್ಥೆಯಲ್ಲಿ ಅರೆಕಾಲ ಶಿಕ್ಷಕನಾಗಿ ಕೆಲಸ ಮಾಡಿದ್ದು, 2024 ಡಿಸೆಂಬರ್‌ನಲ್ಲಿ “ಟೀಚರ್ ಆಫ್ ದ ಮಂಥ್” ಪ್ರಶಸ್ತಿಯನ್ನು ಪಡೆದಿದ್ದಾನೆ. 2018ರಿಂದ ಅವನು ಇಂಡಿ ಗೇಮ್ ಡೆವಲಪರ್ ಆಗಿಯೂ ಗುರುತಿಸಿಕೊಂಡಿದ್ದು, ‘Bohrdom’ ಎಂಬ ರಸಾಯನಶಾಸ್ತ್ರ ಆಧಾರಿತ “ಅಟಾಮಿಕ್ ಫೈಟಿಂಗ್ ಗೇಮ್” ನ್ನು ಸ್ಟೀಮ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಿದ್ದಾನೆ.

ಎಎಫ್‌ಪಿ ವರದಿಯ ಪ್ರಕಾರ, ಬಂಧನದ ನಂತರ ಎಫ್‌ಬಿಐ ಅಧಿಕಾರಿಗಳು ಕ್ಯಾಲಿಫೋರ್ನಿಯಾದ ಟೋರನ್ಸ್‌ನಲ್ಲಿರುವ ಒಂದು ನಿವಾಸವನ್ನು ಶೋಧಿಸಿದರು.

ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆ ತಾತ್ಕಾಲಿಕ ಮುಖ್ಯಸ್ಥ ಜೆಫ್ರಿ ಕ್ಯಾರೋಲ್, ಆಲೆನ್ ತಪಾಸಣಾ ಕೇಂದ್ರದತ್ತ ದೌಡಾಯಿಸಿದಾಗ ಅವನ ಬಳಿ ಒಂದು ಶಾಟ್‌ಗನ್, ಒಂದು ಹ್ಯಾಂಡ್‌ಗನ್ ಮತ್ತು ಹಲವು ಚಾಕುಗಳು ಇದ್ದವು. ದಾಳಿಯ ಉದ್ದೇಶ ಇನ್ನೂ ತನಿಖೆಯಲ್ಲಿದ್ದರೂ, ಒಂಟಿ ದಾಳಿಕೋರ ಆಗಿರುವ ಸಾಧ್ಯತೆ ಇದೆ ಎಂದು ಕ್ಯಾರೋಲ್ ಹೇಳಿದ್ದಾರೆ. ಎಎಫ್‌ಪಿ ಪ್ರಕಾರ, ನಾಳೆ ನ್ಯಾಯಾಲಯದಲ್ಲಿ ಶಸ್ತ್ರಾಸ್ತ್ರ ಮತ್ತು ದಾಳಿ ಆರೋಪಗಳ ಮೇಲೆ ಹಾಜರುಪಡಿಸುವ ನಿರೀಕ್ಷೆಯಿದೆ.

ಈ ಘಟನೆ 2024ರಲ್ಲಿ ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ಹತ್ಯೆ ಪ್ರಯತ್ನದಿಂದ ಪಾರಾದ ಡೊನಾಲ್ಡ್ ಟ್ರಂಪ್‌ಗೆ ಸಂಬಂಧಿಸಿದ ಇತ್ತೀಚಿನ ಭದ್ರತಾ ಲೋಪವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ರದ್ದತಿಗೆ ಈಶ್ವರ್ ಖಂಡ್ರೆ ಪಟ್ಟು; UPSC ಮಾದರಿ ತನ್ನಿ ಎಂದು ಸಿಎಂಗೆ ಗ್ರಾಮೀಣಾಭಿವೃದ್ಧಿ ಸಚಿವ ಮನವಿ

'ಹಾಸ್ಯಾಸ್ಪದ, ನಾಚಿಕೆಗೇಡು': ಬ್ರಿಕ್ಸ್ ಭೋಜನಕೂಟದ ಮೆನು ಕುರಿತ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಆಕ್ರೋಶ

ಜೈಲಿನಲ್ಲಿ ಮಾಜಿ ಪ್ರಧಾನಿ: 52ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಇಮ್ರಾನ್ ಖಾನ್ ಮಾಜಿ ಪತ್ನಿ!

BBK 13: ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಓಂ ಪ್ರಕಾಶ್ ರಾವ್, ಆಸ್ಪತ್ರೆಗೆ ದಾಖಲು..!

ಪಾಕ್‌ನ ಹೊಸ ನವರಂಗಿ ಆಟ: FATF ಸಭೆಯ ಮುನ್ನ ಉಗ್ರ ಮಸೂದ್ ಅಜರ್ ಮೇಲಿನ ಬಹುಮಾನದ ಮೊತ್ತ 70 ಲಕ್ಷಕ್ಕೆ ಏರಿಕೆ!