ಮೊಜ್ತಾಬಾ ಖಮೇನಿ  
ವಿದೇಶ

ಇರಾನ್‌ನ ಸರ್ವೋಚ್ಛ ನಾಯಕ ಮೊಜ್ತಾಬಾ ಖಮೇನಿ 'ಅತ್ಯಂತ ಗಂಭೀರ ಸ್ಥಿತಿ'ಯಲ್ಲಿ: ವರದಿ

ಮೊಜ್ತಾಬಾ ಖಮೇನಿ ಅವರ ಆರೋಗ್ಯದ ಕುರಿತಾದ ಊಹಾಪೋಹಗಳು ಇರಾನ್‌ನ ಆಡಳಿತ ವಲಯದಲ್ಲಿ ಹೆಚ್ಚಾಗಿದ್ದು, ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂಬ ವದಂತಿಗಳು ಹಿರಿಯ ಅಧಿಕಾರಿಗಳ ನಡುವೆ ಹರಿದಾಡುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಟೆಹ್ರಾನ್: ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್ ನ ಸರ್ವೋಚ್ಛ ನಾಯಕರಾಗಿದ್ದ ಅಲಿ ಖಮೇನಿ ಮೃತಪಟ್ಟಾಗಿನಿಂದಲೂ ಅವರ ಪುತ್ರ ಮೊಜ್ತಾಬಾ ಖಮೇನಿ ದೇಶದ ಯಾವುದೇ ಸಂಪುಟ ಸದಸ್ಯರನ್ನು ಭೇಟಿಯಾಗಿಲ್ಲ ಎಂದು 'ಇರಾನ್‌ವೈರ್' (IranWire) ವರದಿ ಮಾಡಿದೆ. ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರ ಆಡಳಿತಕ್ಕೆ ಹತ್ತಿರವಿರುವ ಇಬ್ಬರು ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ಈ ಮಾಹಿತಿಯನ್ನು ನೀಡಲಾಗಿದೆ.

ಮೊಜ್ತಾಬಾ ಖಮೇನಿ ಅವರ ಆರೋಗ್ಯದ ಕುರಿತಾದ ಊಹಾಪೋಹಗಳು ಇರಾನ್‌ನ ಆಡಳಿತ ವಲಯದಲ್ಲಿ ಹೆಚ್ಚಾಗಿದ್ದು, ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂಬ ವದಂತಿಗಳು ಹಿರಿಯ ಅಧಿಕಾರಿಗಳ ನಡುವೆ ಹರಿದಾಡುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅವರು ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದು, ಯಾವುದೇ ಕ್ಷಣದಲ್ಲಿ ಮೃತಪಡಬಹುದು ಎಂಬ ವದಂತಿಗಳು ಆಡಳಿತದ ಉನ್ನತ ಮಟ್ಟದಲ್ಲಿ ವ್ಯಾಪಕವಾಗಿ ಹರಡುತ್ತಿವೆ ಎಂದು ಮೂಲಗಳು ತಿಳಿಸಿವೆ.

'ಇರಾನ್‌ವೈರ್' ಉಲ್ಲೇಖಿಸಿದ ಮೂಲವೊಂದರ ಪ್ರಕಾರ, "ಅವರ ಮರಣ ಸುದ್ದಿ ಶೀಘ್ರದಲ್ಲೇ ಕೇಳಿಬಂದರೆ ನಮಗೆ ಆಶ್ಚರ್ಯವಾಗುವುದಿಲ್ಲ." ಮೊಜ್ತಾಬಾ ಖಮೇನಿ ಅವರು ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಎಂದು ವರದಿ ಆರೋಪಿಸಿದೆ. ಅಲ್ಲದೆ, ಅವರ ಯಾವುದೇ ಆಡಿಯೋ ಅಥವಾ ವಿಡಿಯೋ ರೆಕಾರ್ಡಿಂಗ್‌ಗಳನ್ನು ಬಿಡುಗಡೆ ಮಾಡಲಾಗಿಲ್ಲ ಮತ್ತು ಸರ್ಕಾರಿ ಮಾಧ್ಯಮಗಳು ಅವರಿಗೆ ಆರೋಪಿಸಲಾದ ಲಿಖಿತ ಹೇಳಿಕೆಗಳನ್ನು ಮಾತ್ರ ಪ್ರಕಟಿಸುತ್ತಿವೆ ಎಂದು ಅದು ಹೇಳಿದೆ.

ತಮ್ಮ ತಂದೆಯ ಸಾವಿಗೆ ಕಾರಣವಾದ ದಾಳಿಯ ಸಮಯದಲ್ಲಿ ಖಮೇನಿ ಗಾಯಗೊಂಡಿದ್ದರು ಮತ್ತು ಅಂದಿನಿಂದ ಸಾರ್ವಜನಿಕರ ಕಣ್ಣಿಗೆ ಕಾಣಿಸಿಕೊಂಡಿಲ್ಲ. ದಾಳಿಗೆ ಗುರಿಯಾಗುವ ಅಪಾಯವನ್ನು ಕಡಿಮೆ ಮಾಡಲು ಅವರು ಅನೇಕ ಮಧ್ಯವರ್ತಿಗಳ ಮೂಲಕ ಆಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಸಂವಹನ ನಡೆಸುತ್ತಿದ್ದಾರೆ ಎಂದು ಇರಾನ್ ವೈರ್ ಹೇಳಿಕೊಂಡಿದೆ. ಈ ಊಹಾಪೋಹಗಳಿಗೆ ಪುಷ್ಟಿ ನೀಡುವಂತೆ ಬುಧವಾರ ಸರ್ಕಾರಿ ಟಿವಿ ಚಾನೆಲ್ ವೊಂದರಲ್ಲಿ ಪ್ರಸಾರವಾದ ಸಂದರ್ಶನವೊಂದರಲ್ಲಿ ಮಾತನಾಡಿದ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್, ಖಮೇನಿ ಜೊತೆಗೆ ಸದ್ಯ ಮಾತನಾಡುವುದು ಅತ್ಯಂತ ಕಷ್ಟಕರವಾಗಿದೆ" ಎಂದು ಹೇಳಿದ್ದಾರೆ.

ಇರಾನ್ ಇಂಟರ್‌ನ್ಯಾಶನಲ್' ವರದಿಯ ಪ್ರಕಾರ, ಮೊಜ್ತಬಾ ಖಮೇನಿ ಅವರನ್ನು ಭೇಟಿಯಾಗಲು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರನ್ನು ಟೆಹ್ರಾನ್‌ನ ರಹಸ್ಯ ಸ್ಥಳವೊಂದಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಕತ್ತಲಾದ ಮತ್ತು ಗಾಢ ಬಣ್ಣದ ಕಿಟಕಿಗಳನ್ನು ಹೊಂದಿರುವ ವಾಹನದ ಒಳಗಡೆಯೇ ಈ ಭೇಟಿ ನಡೆದಿದ್ದರಿಂದ, ಅಧ್ಯಕ್ಷರಿಗೆ ಖಮೇನಿ ಅವರನ್ನು ನೇರವಾಗಿ ನೋಡಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ. ಕೇವಲ ಕೆಲವೇ ನಿಮಿಷಗಳ ಕಾಲ ಈ ಭೇಟಿ ನಡೆದಿದ್ದು, ನಂತರ ಪೆಜೆಶ್ಕಿಯನ್ ಅವರನ್ನು ಅಲ್ಲಿಂದ ಹೊರಹೋಗುವಂತೆ ಸೂಚಿಸಲಾಯಿತು ಎಂದು ವರದಿ ತಿಳಿಸಿದೆ.

ಅಲ್ಲದೆ, ಖಮೇನಿ ಅವರ ಭದ್ರತಾ ಸಿಬ್ಬಂದಿಯು ಅಧ್ಯಕ್ಷರಿಗೆ ಸುಪ್ರೀಂ ಲೀಡರ್ ಅವರೊಂದಿಗೆ ಕೈಕುಲುಕಲು ಅವಕಾಶ ನೀಡಲಿಲ್ಲ ಎಂದೂ ಆರೋಪಿಸಲಾಗಿದೆ. ವರದಿಯ ಪ್ರಕಾರ, ತಮಗೆ ಕೇಳಿಸಿದ ಧ್ವನಿ ನಿಜವಾಗಿಯೂ ಮೊಜ್ತಬಾ ಖಮೇನಿ ಅವರದ್ದೇ ಆಗಿತ್ತೇ? ಎಂದು ಪೆಜೆಶ್ಕಿಯನ್ ನಂತರ ಸಂಶಯ ವ್ಯಕ್ತಪಡಿಸಿದ್ದರು. ಆದರೆ, ಪೆಜೆಶ್ಕಿಯನ್ ಈ ಭೇಟಿಯ ಬಗ್ಗೆ ಈ ಹಿಂದೆ ವಿಭಿನ್ನವಾಗಿ ವಿವರಿಸಿದ್ದರು. ಮೇ ತಿಂಗಳಲ್ಲಿ ವ್ಯಾಪಾರ ಸಂಘಗಳ ಪ್ರತಿನಿಧಿಗಳ ಸಭೆಯೊಂದರಲ್ಲಿ ಮಾತನಾಡಿದ್ದ ಅವರು, ಖಮೇನಿ ಅವರೊಂದಿಗೆ "ಸೌಹಾರ್ದಯುತ ವಾತಾವರಣದಲ್ಲಿ" ಎರಡೂವರೆ ಗಂಟೆಗಳ ಕಾಲ ಕಳೆದಿದ್ದಾಗಿ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕ SIR ಅವಧಿ ಮತ್ತೆ ವಿಸ್ತರಣೆ: BLO ಮನೆ ಮನೆ ಭೇಟಿಗೆ ಆಗಸ್ಟ್ 17 ಕೊನೆ ದಿನ; ಅ. 27ಕ್ಕೆ ಅಂತಿಮ ಕರಡು ಪಟ್ಟಿ ಪ್ರಕಟ!

ಉಡುಪಿ: ಗುಂಡಿಕ್ಕಿ Congress ಮುಖಂಡ ಹಾಗೂ ಉದ್ಯಮಿ ಡೇವಿಡ್ ಡಿಸೋಜಾ ಹತ್ಯೆ

RBI ಅಸಿಸ್ಟೆಂಟ್ ಮ್ಯಾನೇಜರ್ ಕೆಲಸಕ್ಕೆ ಇಶಾನ್ ಕಿಶನ್ ಹಾಜರ್! ಕ್ರಿಕೆಟ್​​ಗೆ ಸುದೀರ್ಘ ರಜೆ; ವೇತನ ಎಷ್ಟು ಗೊತ್ತಾ?

'ಅವರು Mojtaba Khamenei ಹೌದೋ, ಅಲ್ಲವೋ ಗೊತ್ತಾಗುತ್ತಿಲ್ಲ': ಇರಾನ್ ಅಧ್ಯಕ್ಷ ಶಾಕಿಂಗ್ ಹೇಳಿಕೆ; ಸುಪ್ರೀಂ ಲೀಡರ್ ಜೀವಂತವಾಗಿರುವ ಬಗ್ಗೆ ಅನುಮಾನ ಮತ್ತಷ್ಟು ಗಾಢ!

ನಾವಿಕರ ಸುಳಿವೇ ಇಲ್ಲ, ಶೋಧ ಕಾರ್ಯಾಚರಣೆ ಸ್ಥಗಿತ; ಕುಟುಂಬಗಳಿಗೆ ವಿಮೆ ಕೊಡಿಸಲು ಸುಪ್ರೀಂ ಕೋರ್ಟ್ ಸೂಚನೆ