ರಷ್ಯಾ ಮೇಲೆ ಉಕ್ರೇನ್ ಭೀಕರ ದಾಳಿ 
ವಿದೇಶ

ರಷ್ಯಾ ಮೇಲೆ ಉಕ್ರೇನ್ ಭೀಕರ ದಾಳಿ: 13 ಮಂದಿ ಬಲಿ, 75 ಜನರಿಗೆ ಗಾಯ; ಇದು 4 ವರ್ಷಗಳಲ್ಲೇ ಅತ್ಯಂತ ಡೆಡ್ಲಿ ಅಟ್ಯಾಕ್!

ಉಕ್ರೇನಿಯನ್ ಗಡಿಯಿಂದ 1,000 ಕಿಲೋಮೀಟರ್(620 ಮೈಲುಗಳು) ದೂರದಲ್ಲಿರುವ ರಷ್ಯಾದ ಪ್ರಮುಖ ಕೈಗಾರಿಕಾ ನಗರವಾದ ನಿಜ್ನೆಕಾಮ್ಸ್ಕ್‌ನಲ್ಲಿರುವ ತೈಲ ಸಂಸ್ಕರಣಾಗಾರದ ಮೇಲೆ ದಾಳಿ ನಡೆಸಲಾಗಿದೆ ಎಂದು ಕೈವ್ ಹೇಳಿದೆ.

ಮಾಸ್ಕೋ: ರಷ್ಯಾದ ಟಾಟರ್ಸ್ತಾನ್ ಮೇಲೆ ಉಕ್ರೇನ್ ಬೀಕರ ಡ್ರೋನ್ ದಾಳಿ ನಡೆಸಿದ್ದು, ದಾಳಿಯಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಮತ್ತು 39 ಜನ ಗಾಯಗೊಂಡಿದ್ದಾರೆ. ಇದು ನಾಲ್ಕು ವರ್ಷಗಳ ಹಿಂದೆ ಯುದ್ಧ ಪ್ರಾರಂಭವಾದಾಗಿನಿಂದ ಕೈವ್ ನಡೆಸಿದ ಅತ್ಯಂತ ಮಾರಕ ದಾಳಿಗಳಲ್ಲಿ ಒಂದಾಗಿದೆ.

ಉಕ್ರೇನಿಯನ್ ಗಡಿಯಿಂದ 1,000 ಕಿಲೋಮೀಟರ್(620 ಮೈಲುಗಳು) ದೂರದಲ್ಲಿರುವ ರಷ್ಯಾದ ಪ್ರಮುಖ ಕೈಗಾರಿಕಾ ನಗರವಾದ ನಿಜ್ನೆಕಾಮ್ಸ್ಕ್‌ನಲ್ಲಿರುವ ತೈಲ ಸಂಸ್ಕರಣಾಗಾರದ ಮೇಲೆ ದಾಳಿ ನಡೆಸಲಾಗಿದೆ ಎಂದು ಕೈವ್ ಹೇಳಿದೆ.

ಈ ವರ್ಷ ಎರಡೂ ದೇಶಗಳು ತಮ್ಮ ದೀರ್ಘ-ಶ್ರೇಣಿಯ ದಾಳಿಗಳನ್ನು ಗಮನಾರ್ಹವಾಗಿ ಹೆಚ್ಚಿಸಿವೆ. ಇದು ನಾಗರಿಕರ ಸಾವುಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ನಿಜ್ನೆಕಾಮ್ಸ್ಕ್ ಮೇಲಿನ ದಾಳಿಯಲ್ಲಿ "13 ಜನರು ಸಾವನ್ನಪ್ಪಿದ್ದಾರೆ" ಎಂದು ಪ್ರಾದೇಶಿಕ ಪತ್ರಿಕಾ ಸೇವೆ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನೂ ದಾಳಿಯಲ್ಲಿ 75 ಜನ ಗಾಯಗೊಂಡಿದ್ದು, ಅವರಲ್ಲಿ 21 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಕ್ರೇನ್ ಇತ್ತೀಚಿಗೆ ರಷ್ಯಾದ ತೈಲ ಸಂಸ್ಕರಣಾಗಾರಗಳ ಮೇಲೆ ದಾಳಿಯನ್ನು ತೀವ್ರಗೊಳಿಸಿದ್ದು, ಟಾಟರ್ಸ್ತಾನ್ ಪ್ರದೇಶವು ಇಂಧನ ಸಂಪನ್ಮೂಲಗಳಿಂದ ಸಮೃದ್ಧವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಂತರ್ ಮಂತರ್ ಪ್ರತಿಭಟನೆ: ಮಹಿಳೆಯ ಮಾರ್ಫ್ ಮಾಡಿದ ಚಿತ್ರ ತೆಗೆದುಹಾಕಲು Metaಗೆ ಹೈಕೋರ್ಟ್ ಸೂಚನೆ; CJP ನಾಯಕರಿಗೆ ನೋಟಿಸ್

ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್​​ಗೆ ನೋಟಿಸ್; ಸಿಡಿದೆದ್ದ VHP

ಮಲಗಿದ್ದಕ್ಕೆ ಕೆಲಸ ಕಳೆದುಕೊಂಡ ಟೆಕ್ಕಿ; ಈಗ 964 ಕೋಟಿ ರೂ ಪರಿಹಾರಕ್ಕೆ ಬೇಡಿಕೆ!

Asian Games 2026: ಭಾರತದ 'ಚಿನ್ನದ' ಬೇಟೆ; ಶೂಟಿಂಗ್ ನಲ್ಲಿ ಸುರುಚಿ ಸಿಂಗ್-ಕಮಲ್ಜೀತ್ ಚಿನ್ನ; ಬೆಳ್ಳಿಗೆ ಮುತ್ತಿಟ್ಟ ಗುಲ್ವೀರ್ ಸಿಂಗ್!

ಕರ್ನಾಟಕಕ್ಕೆ ನೀಡಬೇಕಿದ್ದ 2,186 ಕೋಟಿ ರೂ. ಅನುದಾನಕ್ಕೆ ಕೇಂದ್ರ ಸರ್ಕಾರ ತಡೆ: ಸಚಿವ ಈಶ್ವರ್ ಖಂಡ್ರೆ