ಮಿನಿಯಾಪೊಲಿಸ್: ಇತ್ತೀಚಿಗೆ ಅಮೆರಿಕದ ಮಿನಿಸೋಟಾ ರಾಜ್ಯದ ಮಿನಿಯಾಪೊಲಿಸ್‌ನಲ್ಲಿ ವಲಸೆ ಮತ್ತು ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ (ICE) ಅಧಿಕಾರಿಯಿಂದ ಗುಂಡೇಟಿಗೆ ಬಲಿಯಾದ ಮಹಿಳೆ ರಿನೀ ನಿಕೊಲೆ ಗುಡ್ ಅವರ ಅಂತಿಮ ಕ್ಷಣದ ವಿಡಿಯೋ ವೈರಲ್ ಆಗಿದೆ.
ದುರಂತದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರೆ, , ICE ಅಧಿಕಾರಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆಂದು ಅಮೆರಿಕ ಆಡಳಿತ ಸಮರ್ಥಿಸಿಕೊಂಡಿತ್ತು.
47 ಸೆಕೆಂಡ್ ಗಳ ವಿಡಿಯೋದಲ್ಲಿ ಕಾರಿನಲ್ಲಿದ್ದ ಮಹಿಳೆ ಗುಡ್ ICE ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದ್ದು, ಬಳಿಕ ICE ಅಧಿಕಾರಿ ಜೊನಾಥನ್ ರಾಸ್ ಮೊಬೈಲ್ ಹಿಡಿದು ಕಾರಿನಲ್ಲಿ ತೆರಳುವ ದೃಶ್ಯವಿದೆ. ಮಿನಿಯಾಪೊಲಿಸ್ ಮೂಲದ Alpha News ಆನ್ ಲೈನ್ ನಲ್ಲಿ ಹಂಚಿಕೊಂಡಿದೆ. ತದನಂತರ ಒಳಾಡಳಿತ ಭದ್ರತಾ ಇಲಾಖೆಯ ಸೋಶಿಯಲ್ ಮೀಡಿಯಾದಲ್ಲಿ ರಿಪೋಸ್ಟ್ ಮಾಡಲಾಗಿದೆ.
ICE ಅಧಿಕಾರಿ ಆಕೆಯ ಕಾರಿನತ್ತ ಹೋದಾಗ ನನಗೆ ನಿನ್ನ ಮೇಲೆ ಹುಚ್ಚು ಇಲ್ಲ ಅಂತಾ ಗುಡ್ ಹೇಳುತ್ತಾಳೆ. ಆಕೆಯ ಒಂದು ಕೈಯಲ್ಲಿ ಸ್ಟೀರಿಂಗ್ ಹಿಡಿದಿರುತ್ತಾಳೆ ಮತ್ತೊಂದು ಕೈಯನ್ನು ಕಾರಿನ ಹೊರಗಡೆ ಹಾಕಿರುತ್ತಾಳೆ. ಐಸಿಇ ಅಧಿಕಾರಿ ಜೊನಾಥನ್ ರಾಸ್ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಾ ಆಕೆಯ ಕಾರಿನ ಬಳಿಗೆ ತೆರಳುತ್ತಾನೆ.
ಅದೇ ಸಮಯಕ್ಕೆ ಮತ್ತೋರ್ವ ಅಧಿಕಾರಿ ಅಲ್ಲಿಗೆ ಬಂದು ಕಾರಿನಿಂದ ಇಳಿಯುವಂತೆ ಗುಡ್ ಅವರಿಗೆ ಹೇಳುತ್ತಾನೆ. ಆದರೆ, ಆಕೆ ಕಾರನ್ನು ಮುಂದೆ ಚಲಾಯಿಸುತ್ತಿದ್ದಂತೆಯೇ ರಾಸ್ ಗುಂಡು ಹಾರಿಸುತ್ತಾನೆ. ರಸ್ತೆಯಲ್ಲಿ ನಿಂತಿದ್ದ ಇತರರ ಮೇಲೆ ಗೂಡ್‌ನ ಕಾರು ಡಿಕ್ಕಿ ಹೊಡೆದಂತೆ ಶಬ್ದ ಕೇಳಿಸುತ್ತದೆ.