ಭಾರತದೊಂದಿಗಿನ ಯಾವುದೇ ಭವಿಷ್ಯದ ವ್ಯಾಪಾರ ಒಪ್ಪಂದದಲ್ಲಿ ದ್ವಿದಳ ಧಾನ್ಯಗಳಿಗೆ ಅನುಕೂಲಕರವಾದ ನಿಬಂಧನೆಗಳನ್ನು ಪಡೆಯಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಮೆರಿಕದ ಇಬ್ಬರು ಶಾಸಕರು ಒತ್ತಾಯಿಸಿದ್ದಾರೆ. ಭಾರತ ವಿಧಿಸಿರುವ ಅನ್ಯಾಯಯುತ ಸುಂಕಗಳಿಂದಾಗಿ ಅಮೆರಿಕದ ಬೆಳೆಗಾರರಿಗೆ ತೀವ್ರ ಪೈಪೋಟಿ ಎದುರಾಗುತ್ತದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪತ್ರ ಬರೆದಿರುವ, ಮಾಂಟಾನಾದ ರಿಪಬ್ಲಿಕನ್ ಸೆನೆಟರ್‌ಗಳಾದ ಸ್ಟೀವ್ ಡೈನ್ಸ್ ಮತ್ತು ಉತ್ತರ ಡಕೋಟಾದ ಕೆವಿನ್ ಕ್ರೇಮರ್, ಬಟಾಣಿ ಸೇರಿದಂತೆ ದ್ವಿದಳ ಧಾನ್ಯಗಳ ಎರಡು ದೊಡ್ಡ ಉತ್ಪಾದಕ ರಾಜ್ಯ ನಮ್ಮದಾಗಿದೆ. ಆದರೆ ಭಾರತವು ವಿಶ್ವದ ಅತಿದೊಡ್ಡ ಗ್ರಾಹಕನಾಗಿದ್ದು, ಜಾಗತಿಕ ಬಳಕೆಯ ಸುಮಾರು ಶೇಕಡಾ 27ರಷ್ಟು ಹೋಗುತ್ತದೆ.
ಭಾರತದಲ್ಲಿ ಸಾಮಾನ್ಯವಾಗಿ ಸೇವಿಸುವ ದ್ವಿದಳ ಧಾನ್ಯ ಬೆಳೆಗಳಲ್ಲಿ ಮಸೂರ, ಕಡಲೆ, ಒಣಗಿದ ಬೀನ್ಸ್ ಮತ್ತು ಬಟಾಣಿ ಸೇರಿವೆ. ಭಾರತ, ಅಮೆರಿಕದ ರಫ್ತಿನ ಮೇಲೆ ಅಧಿಕ ಸುಂಕಗಳನ್ನು ವಿಧಿಸಿದೆ.
ಭಾರತವು ಕಳೆದ ವರ್ಷ ಅಕ್ಟೋಬರ್ 30 ರಂದು ಹಳದಿ ಬಟಾಣಿಗಳ ಮೇಲೆ ಶೇಕಡಾ 30ರಷ್ಟು ಸುಂಕ ಘೋಷಿಸಿತು. ಇದು ಕಳೆದ ವರ್ಷ ನವೆಂಬರ್ 1ರಿಂದ ಜಾರಿಗೆ ಬಂದಿದೆ. ಅನ್ಯಾಯಯುತವಾಗಿ ಅಧಿಕ ಭಾರತೀಯ ಸುಂಕಗಳ ಪರಿಣಾಮವಾಗಿ, ಯುಎಸ್ ದ್ವಿದಳ ಧಾನ್ಯ ಬೆಳೆ ಉತ್ಪಾದಕರು ತಮ್ಮ ಉತ್ತಮ-ಗುಣಮಟ್ಟದ ಉತ್ಪನ್ನವನ್ನು ಭಾರತಕ್ಕೆ ರಫ್ತು ಮಾಡುವಾಗ ತೀವ್ರ ಸ್ಪರ್ಧಾತ್ಮಕ ಪೈಪೋಟಿ ಅನನುಕೂಲತೆ ಎದುರಿಸುತ್ತಿದ್ದಾರೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಅಮೆರಿಕದ ವ್ಯಾಪಾರ ಪ್ರತಿನಿಧಿ (USTR) ಕಚೇರಿಯ ಸಂಶೋಧನೆಗಳನ್ನು ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದು ಭಾರತದ ಕೃಷಿ ಉತ್ಪನ್ನಗಳ ಮೇಲಿನ ಸರಾಸರಿ ಅನ್ವಯಿಕ ಸುಂಕವು ಭಾರತದಲ್ಲಿ ಶೇಕಡಾ 39ರಷ್ಟು ಮತ್ತು ಅಮೆರಿಕದಲ್ಲಿ ಶೇಕಡಾ 5 ರಷ್ಟಿದೆ. ತಾಂತ್ರಿಕ ಮತ್ತು ನಿಯಂತ್ರಕ ಅಡೆತಡೆಗಳು ಹಾಗೂ ಕೃಷಿ ಸೇರಿದಂತೆ ವಲಯಗಳಲ್ಲಿನ ಮಾರುಕಟ್ಟೆ ಪ್ರವೇಶ ನಿರ್ಬಂಧಗಳನ್ನು ಸಂಸ್ಥೆಯು ಸೂಚಿಸಿದ್ದು, ಇದು ಭಾರತಕ್ಕೆ ಅಮೆರಿಕದ ರಫ್ತುಗಳನ್ನು ಕಡಿತಗೊಳಿಸಿದೆ ಎಂದು ಅದು ಹೇಳಿದೆ.
ಎರಡು ದೇಶಗಳ ನಡುವಿನ ಆರ್ಥಿಕ ಸಹಕಾರವನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರನ್ನು ದ್ವಿದಳ ಧಾನ್ಯಗಳ ಸುಂಕಗಳ ಕುರಿತು ತೊಡಗಿಸಿಕೊಳ್ಳಲು ಒತ್ತಾಯಿಸುವುದು ಅಮೆರಿಕದ ಉತ್ಪಾದಕರು ಮತ್ತು ಭಾರತೀಯ ಗ್ರಾಹಕರಿಗೆ ಪರಸ್ಪರ ಪ್ರಯೋಜನಕಾರಿ ಎಂದು ಡೈನ್ಸ್ ಮತ್ತು ಕ್ರೇಮರ್ ಪತ್ರದಲ್ಲಿ ತಿಳಿಸಿದ್ದಾರೆ.
ಉತ್ತರ ಡಕೋಟಾ ಮತ್ತು ಮೊಂಟಾನಾದಲ್ಲಿ ಕೃಷಿ ಉತ್ಪಾದಕರಿಗೆ ಅನುಕೂಲಕರ ಆರ್ಥಿಕ ವಾತಾವರಣವನ್ನು ಒದಗಿಸಲು ಟ್ರಂಪ್ ಅವರ ಪ್ರಯತ್ನಗಳಿಗೆ ಧನ್ಯವಾದ ಹೇಳಿದ ಸೆನೆಟರ್‌ಗಳು, ವ್ಯಾಪಾರ ಮಾತುಕತೆಗಳು ಮುಂದುವರಿಯುತ್ತಿದ್ದಂತೆ, ಭಾರತದೊಂದಿಗೆ ಅಮೆರಿಕ ಸಹಿ ಮಾಡುವ ಯಾವುದೇ ಒಪ್ಪಂದದಲ್ಲಿ ಅನುಕೂಲಕರ ದ್ವಿದಳ ಧಾನ್ಯಗಳ ನಿಬಂಧನೆಗಳನ್ನು ಪಡೆಯಲು ಅವರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಟ್ರಂಪ್ ಅವರು ಅಧ್ಯಕ್ಷರಾಗಿದ್ದ ಮೊದಲ ಅವಧಿಯಲ್ಲಿ, ಭಾರತದೊಂದಿಗೆ 2020 ರ ವ್ಯಾಪಾರ ಮಾತುಕತೆಗಳಿಗೆ ಮೊದಲು ಅವರು ಈ ವಿಷಯವನ್ನು ಎತ್ತಿದ್ದರು. ಅಧ್ಯಕ್ಷರು ಮೋದಿಗೆ ಬರೆದ ಪತ್ರವನ್ನು ಕೈಯಿಂದ ತಲುಪಿಸಿದ್ದರು. ಇದು ಯುಎಸ್ ಉತ್ಪಾದಕರನ್ನು ಮಾತುಕತೆಗೆ ತರಲು ಸಹಾಯ ಮಾಡಿದೆ ಎಂದು ಅವರು ಹೇಳಿದರು.
ಅಮೆರಿಕವು ವ್ಯಾಪಾರ ಅಸಮಾನತೆಗಳನ್ನು ಸರಿತೂಗಿಸಲು ಪ್ರಯತ್ನಿಸುತ್ತಿರುವಾಗ, ಅಮೆರಿಕದ ರೈತರು ಈ ಅಂತರವನ್ನು ತುಂಬಲು ಸಹಾಯ ಮಾಡಲು ಸಿದ್ಧರಿದ್ದಾರೆ. ವ್ಯಾಪಾರ ಅವಕಾಶಗಳನ್ನು ಮುಕ್ತಗೊಳಿಸಿದರೆ ಅವರು ಜಗತ್ತಿಗೆ ಆಹಾರ ಮತ್ತು ಇಂಧನವನ್ನು ನೀಡುವ ಅಗಾಧ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಶಾಸಕರು ಪತ್ರದಲ್ಲಿ ತಿಳಿಸಿದ್ದಾರೆ.
ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡುವ ಮೊದಲು 2020 ರಲ್ಲಿ ಬರೆದಿದ್ದ ಪತ್ರದಲ್ಲಿ, ಸೆನೆಟರ್‌ಗಳು ದ್ವಿದಳ ಧಾನ್ಯಗಳ ಬೆಳೆಗಳ ಮೇಲಿನ ಅನ್ಯಾಯ ಭಾರತೀಯ ಸುಂಕಗಳು ಅಮೆರಿಕದ ದ್ವಿದಳ ಧಾನ್ಯಗಳ ಉತ್ಪಾದಕರಿಗೆ ಹಾನಿ ಮಾಡಿವೆ ಎಂದು ಹೇಳಿದ್ದರು. ಜೂನ್ 2019 ರಲ್ಲಿ ಭಾರತವನ್ನು ಸಾಮಾನ್ಯೀಕೃತ ಆದ್ಯತೆಗಳ ವ್ಯವಸ್ಥೆಯಿಂದ ತೆಗೆದುಹಾಕಿದ ನಂತರ, ಅಮೆರಿಕದ ರಫ್ತಿನ ಮೇಲೆ ಹೆಚ್ಚುವರಿ ಸುಂಕಗಳನ್ನು ವಿಧಿಸಲಾಯಿತು.