ಖಮೇನಿ ಶವಪೆಟ್ಟಿಗೆ ಹಾಗೂ ಧಾರ್ಮಿಕ ಮುಖಂಡರು 
ವಿದೇಶ

ಹತ್ಯೆಯಾಗಿ 4 ತಿಂಗಳ ಬಳಿಕ ಖಮೇನಿ ಅಂತ್ಯಕ್ರಿಯೆಗೆ ಇರಾನ್ ಸಿದ್ಧತೆ: ಶವಪೆಟ್ಟಿಗೆ ಪ್ರದರ್ಶನ; ಇಷ್ಟು ದಿನ ಎಲ್ಲಿತ್ತು ಶರೀರ?

ಇರಾನ್ ಶುಕ್ರವಾರ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದು, 86 ವರ್ಷದ ನಾಯಕನ ಶವಪೆಟ್ಟಿಗೆಯನ್ನು ಟೆಹ್ರಾನ್ ನಲ್ಲಿ ಪ್ರದರ್ಶಿಸಲಾಗಿದೆ.

ಟೆಹ್ರಾನ್: ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಹತರಾದ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ ಬರೋಬ್ಬರಿ ನಾಲ್ಕು ತಿಂಗಳ ಬಳಿಕ ನಡೆಯುತ್ತಿದ್ದು, ಇತಿಹಾಸ ಕಂಡ ಅತ್ಯಂತ ರಹಸ್ಯಮಯ ಅಂತ್ಯಸಂಸ್ಕಾರಕ್ಕೆ ಸಿದ್ಧತೆಗಳು ಆರಂಭವಾಗಿವೆ.

ಇರಾನ್ ಶುಕ್ರವಾರ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದು, 86 ವರ್ಷದ ನಾಯಕನ ಶವಪೆಟ್ಟಿಗೆಯನ್ನು ಟೆಹ್ರಾನ್ ನಲ್ಲಿ ಪ್ರದರ್ಶಿಸಲಾಗಿದೆ. ಅಲ್ಲದೆ ದೇಶದ ಸರ್ವೋಚ್ಚ ನಾಯಕನನ್ನು ಕೊಂದ ವಿನಾಶಕಾರಿ ಯುದ್ಧದ ನಂತರ ಇಸ್ಲಾಮಿಕ್ ಗಣರಾಜ್ಯವನ್ನು ಬೆಂಬಲಿಸುವಂತೆ ಸಾರ್ವಜನಿಕರಿಗೆ ಒತ್ತಾಯಿಸುವ ಬ್ಯಾನರ್‌ಗಳು ಟೆಹ್ರಾನ್‌ನಾದ್ಯಂತ ರಾರಾಜಿಸುತ್ತಿವೆ.

ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್‌ಕಾಸ್ಟಿಂಗ್(ಐಆರ್​ಐಬಿ) ಪ್ರಕಾರ, ಪೂರ್ವಘೋಷಣೆಯಿಲ್ಲದ ಕಾರ್ಯಕ್ರಮವೊಂದರಲ್ಲಿ, ಹುತಾತ್ಮ ನಾಯಕ ಅಯತೊಲ್ಲಾ ಖಮೇನಿ ಅವರ ಪಾರ್ಥಿವ ಶರೀರವಿದ್ದ ಶವಪೆಟ್ಟಿಗೆಯನ್ನು ಇಂದು ಅವರು ಹುತಾತ್ಮರಾದ ಸ್ಥಳಕ್ಕೆ ತರಲಾಯಿತು.

ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್​ಜಿಸಿ) ಪ್ರಕಾರ, ರಾಜಧಾನಿಯಲ್ಲಿ ಜುಲೈ 4 ಮತ್ತು 5ರಂದು ಸಾರ್ವಜನಿಕ ವಿದಾಯ ಕಾರ್ಯಕ್ರಮಗಳು ನಡೆಯಲಿದ್ದು, ದಾಖಲೆಯ 2 ಕೋಟಿ ಜನರು ಆಗಮಿಸುವ ನಿರೀಕ್ಷೆಯಿದೆ.

ಟೆಹ್ರಾನ್‌ನಲ್ಲಿ ಶವಪೆಟ್ಟಿಗೆ ಪ್ರದರ್ಶನ

ಕಳೆದ ಮೂರು ದಶಕಗಳಿಂದ ಇರಾನ್ ಅನ್ನು ಆಳಿದ ಖಮೇನಿ, ಫೆಬ್ರವರಿ 28 ರಂದು ಟೆಹ್ರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯ ಮೊದಲ ದಿನ ಹತ್ಯೆಯಾಗಿದ್ದರು.

ಕಳೆದ ಮಾರ್ಚ್ ತಿಂಗಳಲ್ಲಿ ನಡೆಯಬೇಕಿದ್ದ ಖಮೇನಿ ಅಂತ್ಯಕ್ರಿಯೆಯನ್ನು ಸಂಘರ್ಷದಿಂದಾಗಿ ಮುಂದೂಡಲಾಗಿತ್ತು. ಇದೀಗ ನಾಳೆಯಿಂದ ಅಂತ್ಯಕ್ರಿಯೆಯ ವಿಧಿವಿಧಾನಗಳು ಆರಂಭವಾಗಲಿದ್ದು, ಇಂದು ಅವರ ಸದಸ್ಯರ ಜೊತೆಗೆ ಧ್ವಜದಿಂದ ಹೊದಿಸಲಾದ ಖಮೇನಿಯ ಶವಪೆಟ್ಟಿಗೆಯನ್ನು ಟೆಹ್ರಾನ್‌ನ ಗ್ರ್ಯಾಂಡ್ ಮೊಸಲ್ಲಾದಲ್ಲಿ ಪ್ರದರ್ಶಿಸಲಾಗಿದೆ.

ಹತ್ಯೆಯಾದವರಲ್ಲಿ ಖಮೇನಿ ಅವರ ಅಳಿಯ, ಅವರ ಹಿರಿಯ ಮಗಳು, 14 ತಿಂಗಳ ಮೊಮ್ಮಗಳು ಮತ್ತು ಅವರ ಮಗ ಅಯತೊಲ್ಲಾ ಮೊಜ್ತಬಾ ಖಮೇನಿಯ ಪತ್ನಿ ಸೇರಿದ್ದಾರೆ.

ಧಾರ್ಮಿಕ ಮುಖಂಡರು ಮತ್ತು ವಿದೇಶಿ ಗಣ್ಯರು ಮಿಲಿಟರಿ ಬ್ಯಾಂಡ್ ನುಡಿಸುತ್ತಿದ್ದಂತೆ ಅಥವಾ ವ್ಯಕ್ತಿಯೊಬ್ಬರು ಪ್ರಾರ್ಥನೆ ಹಾಡುತ್ತಿದ್ದಂತೆ ಖಮೇನಿಯ ಶವಪೆಟ್ಟಿಗೆಯ ಬಳಿಗೆ ನಡೆದರು. ಇರಾನ್‌ನ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಖಲೀಬಾಫ್, ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮತ್ತು ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ದೇಶದ ನಾಗರಿಕ ಸರ್ಕಾರದ ಪ್ರಮುಖ ನಾಯಕರು ಸೇರಿದಂತೆ ಹಲವು ಗಣ್ಯರು ಗೌರವ ಸಲ್ಲಿಸಿದರು.

ಇಷ್ಟು ದಿನ ಎಲ್ಲಿತ್ತು ಖಮೇನಿ ಶರೀರ?

ಸಾಮಾನ್ಯವಾಗಿ ಇಸ್ಲಾಮಿಕ್ ಷರಿಯಾ ಕಾನೂನಿನ ಪ್ರಕಾರ, ಯಾವುದೇ ವ್ಯಕ್ತಿ ಮರಣ ಹೊಂದಿದ 24 ಗಂಟೆಗಳ ಒಳಗಾಗಿ ಅಂತ್ಯಸಂಸ್ಕಾರ ನೆರವೇರಿಸಬೇಕು. ಅಷ್ಟೇ ಅಲ್ಲದೆ, ದೇಹಕ್ಕೆ ಯಾವುದೇ ರಾಸಾಯನಿಕಗಳನ್ನು ಲೇಪಿಸಿ ರಕ್ಷಿಸಿಡುವುದನ್ನು, ಇಸ್ಲಾಂ ಧರ್ಮ ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ಆದರೆ ಆಯತೊಲ್ಲಾ ಅಲಿ ಖಮೇನಿ ಅವರ ಪಾರ್ಥಿವ ಶರೀರವನ್ನು ಸಂರಕ್ಷಿಸಲು, ಕೆಲವು ವಿನಾಯಿತಿ ನೀಡಲಾಗಿತ್ತು. ಫೆಬ್ರವರಿಯಿಂದ ಜುಲೈವರೆಗೆ ಆಯತೊಲ್ಲಾ ಅವರ ಮೃತದೇಹವನ್ನು ಸುರಕ್ಷಿತವಾಗಿ ಇಡಲಾಗಿತ್ತು.

ವರದಿಗಳ ಪ್ರಕಾರ, ಇರಾನ್ ಆಡಳಿತವು ಅಲಿ ಖಮೇನಿ ಅವರ ಭೌತಿಕ ಕಾಯವನ್ನು ವಿಶೇಷ ಹಿಮಗೃಹದಲ್ಲಿ(Refrigerated Cold Storage) ಅತ್ಯಂತ ಕಡಿಮೆ ತಾಪಮಾನದಲ್ಲಿ ಸಂರಕ್ಷಿಸಿಟ್ಟಿತ್ತು. ಯಾವುದೇ ರಾಸಾಯನಿಕಗಳನ್ನು ಬಳಸದೆ ಕೇವಲ ತಾಪಮಾನ ನಿಯಂತ್ರಣದ ಮೂಲಕ ದೇಹವನ್ನು ಸಂರಕ್ಷಿಸಲಾಗಿದೆ.

ಶಿಯಾ ಮುಸ್ಲಿಂ ಧರ್ಮಶಾಸ್ತ್ರದಲ್ಲಿ ಯುದ್ಧ ಅಥವಾ ದೇಶದ ತುರ್ತು ಪರಿಸ್ಥಿತಿಯಂತಹ ಅಸಾಧಾರಣ ಸಂದರ್ಭಗಳಲ್ಲಿ ಅಂತ್ಯಸಂಸ್ಕಾರವನ್ನು ಮುಂದೂಡಲು ಮತ್ತು ಶೀತಲೀಕರಣದ ಮೂಲಕ ದೇಹವನ್ನು ಕಾಯ್ದಿರಿಸಲು ಅವಕಾಶವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಮ ಮಂದಿರ ಲೂಟಿ ದುರದೃಷ್ಟಕರ; ಇದನ್ನು ಬಳಸಿಕೊಂಡು ಹಿಂದೂ ಧರ್ಮವನ್ನು ಕೆಣಕಲು ಯತ್ನ: ಕೊನೆಗೂ ಮೌನ ಮುರಿದ RSS

ತಮ್ಮನ ಮದುವೆಯ ಖುಷಿಯಲ್ಲಿದ್ದಾಗಲೇ ಮನೆಗೆ ನುಗ್ಗಿ ಪುನೀತ್ ಕೆರೆಹಳ್ಳಿ ಬಂಧಿಸಿದ ಪೊಲೀಸರು!

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ಗೆ ಮತ್ತೆ ಸುಪ್ರೀಂ ಕೋರ್ಟ್ ಶಾಕ್‌; ʻದಾಸʼನಿಗೆ 1 ವರ್ಷ ಜೈಲೇ ಗತಿ!

Video: ಬೀದಿ ಬದಿ ವ್ಯಾಪಾರಿಗಳಿಗೆ ಅನ್ಯಾಯವಾಗಲು ಬಿಡಲ್ಲ, ಪಾದಚಾರಿಗಳ ಜೀವರಕ್ಷಣೆ ಸರ್ಕಾರದ ಜವಾಬ್ದಾರಿ: ಸಚಿವ ಕೃಷ್ಣ ಬೈರೇಗೌಡ

'ಬೆಂಗಳೂರು ನನಗೆ ಮೋಸ ಮಾಡಿದೆ' : ಏನಿದು ಬಾಲಿವುಡ್ ನಟಿ ಪಾರುಲ್ ಗುಲಾಟಿ ಆರೋಪ? VIDEO