ಅರಘ್ಚಿ  online desk
ವಿದೇಶ

ನಿಮ್ಮ ಸಹಿಯನ್ನು ಗೌರವಿಸಿ: ಬೆದರಿಕೆ ಮುಂದುವರೆದರೆ ಮಾತುಕತೆ ಬಂದ್; US ಗೆ ಅರಘ್ಚಿ ಎಚ್ಚರಿಕೆ

ಟೆಹ್ರಾನ್ ಜೊತೆ ಒಪ್ಪಂದ ಮಾಡಿಕೊಳ್ಳದಿದ್ದರೆ "ಕೆಲಸ ಮುಗಿಸುತ್ತೇನೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ನಂತರ ಈ ಹೇಳಿಕೆಗಳು ಬಂದಿದೆ.

ಇರಾನ್: "ಬೆದರಿಕೆಗಳು ಮುಂದುವರಿದರೆ" ವಾಷಿಂಗ್ಟನ್ ಜೊತೆ ಅಂತಿಮ ಒಪ್ಪಂದದ ಮಾತುಕತೆ ನಡೆಸಲು ಇರಾನ್ ದೃಢವಾಗಿ ನಿರಾಕರಿಸುತ್ತದೆ ಎಂದು ಅಲ್ಲಿನ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಮಂಗಳವಾರ ಅಮೆರಿಕಾಗೆ ಎಚ್ಚರಿಕೆ ನೀಡಿದ್ದಾರೆ.

ಟೆಹ್ರಾನ್ ಜೊತೆ ಒಪ್ಪಂದ ಮಾಡಿಕೊಳ್ಳದಿದ್ದರೆ "ಕೆಲಸ ಮುಗಿಸುತ್ತೇನೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ನಂತರ ಈ ಹೇಳಿಕೆಗಳು ಬಂದಿದೆ.

X ನಲ್ಲಿನ ಪೋಸ್ಟ್‌ನಲ್ಲಿ ಅರಘ್ಚಿ, ಹತ್ಯೆಗೀಡಾದ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯವರ ಭವ್ಯ ಅಂತ್ಯಕ್ರಿಯೆಯ ಮೆರವಣಿಗೆಯ ದೃಶ್ಯಗಳನ್ನು ಹಂಚಿಕೊಂಡಿದ್ದು ಇರಾನಿನ ಪಡೆಗಳು ಮತ್ತು ಸಾರ್ವಜನಿಕರು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ.

"ಗ್ರ್ಯಾಂಡ್ ಅಯತೊಲ್ಲಾ ಖಮೇನಿ ಮತ್ತು ಅವರ ಪರಂಪರೆಯನ್ನು ಗೌರವಿಸಲು ಲಕ್ಷಾಂತರ ಹೆಮ್ಮೆಯ ಇರಾನಿಯನ್ನರು ಒಗ್ಗಟ್ಟಿನಿಂದ ಒಟ್ಟುಗೂಡಿದರು. ಅವರಾಗಲಿ ಅಥವಾ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳಾಗಲಿ ಯಾವುದೇ ಬೆದರಿಕೆಗಳಿಂದ ವಿಚಲಿತರಾಗುವುದಿಲ್ಲ" ಎಂದು ಅವರು ಬರೆದಿದ್ದಾರೆ.

ಇರಾನ್ ಮತ್ತು ಯುಎಸ್ ನಡುವೆ ಸಹಿ ಹಾಕಲಾದ 14 ಅಂಶಗಳ ತಿಳುವಳಿಕೆ ಪತ್ರದ ಪ್ಯಾರಾಗ್ರಾಫ್ 13 ಅನ್ನು ಉಲ್ಲೇಖಿಸಿ, ಬೆದರಿಕೆಗಳು ಮುಂದುವರೆದರೆ ಅಂತಿಮ ಒಪ್ಪಂದದ ಕುರಿತು ಮಾತುಕತೆಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲ ಮತ್ತು ಅಮೆರಿಕ ತಾನೇ ಹಾಕಿರುವ ಸಹಿಯನ್ನು ಗೌರವಿಸಬೇಕು" ಎಂದು ಅರಘ್ಚಿ ಕರೆ ನೀಡಿದ್ದಾರೆ.

"ಎಂಒಯುನ ಪ್ಯಾರಾ 13 ಸ್ಪಷ್ಟವಾಗಿದೆ: ಬೆದರಿಕೆಗಳು ಮುಂದುವರಿದರೆ ಅಂತಿಮ ಒಪ್ಪಂದದ ಕುರಿತು ಮಾತುಕತೆಗಳು ಪ್ರಾರಂಭವಾಗುವುದಿಲ್ಲ ನಿಮ್ಮ ಸಹಿಯನ್ನು ಗೌರವಿಸಿ" ಎಂದು ಅರಘ್ಚಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoorನಲ್ಲಿ ಧ್ವಂಸವಾಗಿದ್ದ ಜೈಶ್ ನೆಲೆ ಮರುನಿರ್ಮಾಣ! ಪಾಕ್‌ ಸರ್ಕಾರದಿಂದ 25 ಕೋಟಿ ನೆರವು!

Onion Price: ದಿಢೀರ್ ಈರುಳ್ಳಿ ಬೆಲೆ ಏರಿಕೆ; ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮತ್ತಷ್ಟು ದುಬಾರಿ ಸಾಧ್ಯತೆ, ದರ ಏರಿಕೆಗೆ ಕಾರಣವೇನು?

ಮಹಿಳಾ ಮೀಸಲಾತಿ ಮಸೂದೆ ಬೆಂಬಲಿಸಿ, ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಪೂರ್ತಿಯಾಗಿ ಹಾಡಿ ತೋರಿಸಿ: ರಾಹುಲ್ ಗಾಂಧಿಗೆ ಸ್ಮೃತಿ ಇರಾನಿ ಸವಾಲು

ಮದ್ಯ ಸಾಗಣೆ ಹಗರಣ: ಆಂಧ್ರಪ್ರದೇಶದ ಮಾಜಿ ಸಚಿವರ ಬಂಧಿಸಿದ ED

'3 ರಾಷ್ಟ್ರಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ': SIR ಪಟ್ಟಿಯಲ್ಲಿ ಹೆಸರು ನಾಪತ್ತೆ ಬಗ್ಗೆ ಮಾಜಿ ರಾಯಭಾರಿ ಅಸಮಾಧಾನ!