ಖಮೇನಿ ಅಂತ್ಯಕ್ರಿಯೆ ವೇಳೆ ಟ್ರಂಪ್ ಹತ್ಯೆ ಮಾಡಿ ಎಂಬ ಪೋಸ್ಟ್ ಹಿಡಿದಿದ್ದ ವ್ಯಕ್ತಿ 
ವಿದೇಶ

'ಟ್ರಂಪ್‌ ಕೊಲ್ಲುತ್ತೇವೆ' ಪೋಸ್ಟರ್ ಬೆನ್ನಲ್ಲೇ ಅಮೆರಿಕ ಅಧ್ಯಕ್ಷರ ಹತ್ಯೆಗೆ 10 ಮಿಲಿಯನ್ ಡಾಲರ್ ಬಹುಮಾನ ಘೋಷಣೆ!

ಇಸ್ಲಾಮಿಕ್ ರೆಸಿಸ್ಟೆನ್ಸ್ ಇನ್ ಇರಾಕ್(IRI) ಎಂದು ತನ್ನನ್ನು ತಾನು ಕರೆದುಕೊಂಡಿರುವ ಸಂಘಟನೆ, ಈ ಬಹುಮಾನವನ್ನು ತನ್ನ ಸದಸ್ಯರು ಮತ್ತು ಬೆಂಬಲಿಗರಿಂದ ಬಂದ ದೇಣಿಗೆಗಳ ಮೂಲಕ ನೀಡಲಾಗುವುದು ಎಂದು ಹೇಳಿದೆ.

ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲಲು ಇರಾನ್ ಸಂಚು ರೂಪಿಸಿದೆ ಎಂಬ ವರದಿಗಳ ನಡುವೆ, ಇರಾನ್ ಬೆಂಬಲಿತ ಇರಾಕಿ ಮಿಲಿಟಿಯಾ ಸಂಘಟನೆ, ಟ್ರಂಪ್ ಹತ್ಯೆಗೆ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ.

2020ರಲ್ಲಿ ಅಮೆರಿಕ ನಡೆಸಿದ ದಾಳಿಯಲ್ಲಿ ಇರಾನಿನ ಜನರಲ್ ಖಾಸೆಮ್ ಸೊಲೈಮಾನಿ ಮತ್ತು ಇರಾಕಿ ಮಿಲಿಟಿಯಾ ಕಮಾಂಡರ್ ಅಬು ಮಹ್ದಿ ಅಲ್-ಮುಹಂದಿಸ್ ಅವರ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಟ್ರಂಪ್ ಹತ್ಯೆಗೆ ಬಹುಮಾನ ಘೋಷಿಸುತ್ತಿರುವುದಾಗಿ ಉಗ್ರ ಸಂಘಟನೆ ತಿಳಿಸಿದೆ.

ಇಸ್ಲಾಮಿಕ್ ರೆಸಿಸ್ಟೆನ್ಸ್ ಇನ್ ಇರಾಕ್(IRI) ಎಂದು ತನ್ನನ್ನು ತಾನು ಕರೆದುಕೊಂಡಿರುವ ಸಂಘಟನೆ, ಈ ಬಹುಮಾನವನ್ನು ತನ್ನ ಸದಸ್ಯರು ಮತ್ತು ಬೆಂಬಲಿಗರಿಂದ ಬಂದ ದೇಣಿಗೆಗಳ ಮೂಲಕ ನೀಡಲಾಗುವುದು ಎಂದು ಹೇಳಿದೆ.

ಇರಾನ್ ಉಗ್ರ ಸಂಘಟನೆಯೊಂದು ಟ್ರಂಪ್ ಹತ್ಯೆ ಮಾಡಿದವರಿಗೆ ಭಾರಿ ಮೊತ್ತದ ಬಹುಮಾನ ನೀಡುವುದಾಗಿ ಬಹಿರಂಗವಾಗಿ ಘೋಷಿಸಿರುವುದು ಸದ್ಯ ಅಮೆರಿಕ ಅಧ್ಯಕ್ಷರ ಭದ್ರತೆಯ ಕುರಿತು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಜೊತೆಗೆ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಹಾಗೂ ಮಿಲಿಟರಿ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಿದೆ.

"ಕ್ರಿಮಿನಲ್ ಟ್ರಂಪ್ ಅವರನ್ನು ಕೊಲ್ಲುವವರು ಅಥವಾ ಅವರನ್ನು ವೈಯಕ್ತಿಕವಾಗಿ ಹತ್ಯೆ ಮಾಡುವವರು ಹಾಗೂ ಇಂತಹ ಕಾರ್ಯಚರಣೆಯನ್ನು ಮಾಡಲು ನಿರ್ದೇಶಿಸುವ, ನಿರ್ವಹಿಸುವ ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಸಂಘಟನೆಗಳಿಗೆ 10 ಮಿಲಿಯನ್ ಡಾಲರ್ (ಸುಮಾರು 80 ಕೋಟಿ ರೂ.) ಬಹುಮಾನ ನೀಡುತ್ತೇವೆ" ಎಂದು ಸಂಘಟನೆ ತಿಳಿಸಿದೆ ಎಂದು ಇರಾನ್ ಸರ್ಕಾರಿ ಮಾಧ್ಯಮ ಪ್ರೆಸ್ ಟಿವಿ ವರದಿ ಮಾಡಿದೆ.

ಇತ್ತೀಚಿಗೆ ಟೆಹ್ರಾನ್‌ನ ಎಂಘೆಲಾಬ್ ಚೌಕದಲ್ಲಿ ಶವಪೆಟ್ಟಿಗೆಯಲ್ಲಿ ಅಮೆರಿಕ ಅಧ್ಯಕ್ಷರು ಮಲಗಿದ ದೈತ್ಯಾಕಾರದ ಪೋಸ್ಟರ್ ಅನ್ನು ಹಾಕಲಾಗಿತ್ತು. ಅದರ ಮೇಲೆ ‘ನಾವು ಡೊನಾಲ್ಡ್‌ ಟ್ರಂಪ್‌ ಅವರನ್ನು ಕೊಲ್ಲುತ್ತೇವೆ’ ಎಂದು ಬರೆಯಲಾಗಿದ್ದು, ಈ ಪೋಸ್ಟರ್ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೈಟ್ ಶಿಫ್ಟ್ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ಎದುರಾಯ್ತು ಸಾವು: ತಿರುಪತಿಯ ಫಾರ್ಮಾ ಘಟಕದಲ್ಲಿ ಸಿಡಿದ ಬಾಯ್ಲರ್, ಐವರು ಕಾರ್ಮಿಕರು ಸಾವು!

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

ಏಷ್ಯನ್ ಗೇಮ್ಸ್ 2026 ಫೈನಲ್: ವೈಭವ್ ಸೂರ್ಯವಂಶಿ ಅಣಕಿಸಿದ ಪಾಕ್ ಸ್ಟಾರ್ ಆಟಗಾರ! ಏನು ಮಾಡಿದ್ರು ಗೊತ್ತಾ? Video

'ಅಭಿವೃದ್ಧಿಶೀಲ ರಾಷ್ಟ್ರಗಳ ಕೈಕಟ್ಟಬೇಡಿ, ಡಂಪಿಂಗ್ ವಿರುದ್ಧ ಸಾಕ್ಷ್ಯಾಧಾರಿತ ಕ್ರಮ ಕೈಗೊಳ್ಳಿ': G20 ಸಭೆಯಲ್ಲಿ ಭಾರತ ಕೆಂಡ

ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಅಪಾಯಕ್ಕೆ ಸಿಲುಕಿದ ಪ್ರಯಾಣಿಕ, ಕ್ಷಣಮಾತ್ರದಲ್ಲಿ ಎಚ್ಚೆತ್ತ RPF ಕಾನ್‌ಸ್ಟೆಬಲ್, ರಕ್ಷಣೆ-Video