ಸಂಗ್ರಹ ಚಿತ್ರ 
ವಿದೇಶ

Iran ತಿರುಗೇಟು: 'ಕಣ್ಣಿಗೆ ಕಣ್ಣು' ಉತ್ತರ; ಮೂಲಸೌಕರ್ಯಗಳ ಮೇಲೆ ದಾಳಿಯಾದರೆ ಪ್ರಬಲ ಪ್ರತೀಕಾರ ಎಂದ ಟೆಹ್ರಾನ್

ನಮ್ಮ ರಕ್ಷಣಾ ಸಿದ್ಧಾಂತ ಸ್ಪಷ್ಟವಾಗಿದೆ – ಕಣ್ಣಿಗೆ ಕಣ್ಣು. ಇರಾನ್ ಅಥವಾ ಅದರ ಮೂಲಸೌಕರ್ಯಗಳ ಮೇಲೆ ಯಾವುದೇ ರೀತಿಯ ದಾಳಿ ನಡೆದರೂ ಅದಕ್ಕೆ ಪ್ರಬಲ ಮತ್ತು ನಿರ್ಣಾಯಕ ಪ್ರತಿಕ್ರಿಯೆ ನೀಡಲಾಗುವುದು.

ಇರಾನ್‌ನ ಮೂಲಸೌಕರ್ಯಗಳ ಮೇಲೆ ಅಮೆರಿಕ ದಾಳಿ ನಡೆಸಿದರೆ ಅದೇ ರೀತಿಯ ಪ್ರಬಲ ಪ್ರತಿದಾಳಿ ನಡೆಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆದರೆ ಇರಾನ್‌ನ ಸೇತುವೆಗಳು ಮತ್ತು ವಿದ್ಯುತ್ ಸ್ಥಾವರಗಳಂತಹ ಮೂಲಸೌಕರ್ಯಗಳನ್ನು ಗುರಿಯಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಬೆನ್ನಲ್ಲೇ ಟೆಹ್ರಾನ್ ಈ ಕಠಿಣ ಪ್ರತಿಕ್ರಿಯೆ ನೀಡಿದೆ.

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದಿದ್ದು, "ನಮ್ಮ ರಕ್ಷಣಾ ಸಿದ್ಧಾಂತ ಸ್ಪಷ್ಟವಾಗಿದೆ – ಕಣ್ಣಿಗೆ ಕಣ್ಣು. ಇರಾನ್ ಅಥವಾ ಅದರ ಮೂಲಸೌಕರ್ಯಗಳ ಮೇಲೆ ಯಾವುದೇ ರೀತಿಯ ದಾಳಿ ನಡೆದರೂ ಅದಕ್ಕೆ ಪ್ರಬಲ ಮತ್ತು ನಿರ್ಣಾಯಕ ಪ್ರತಿಕ್ರಿಯೆ ನೀಡಲಾಗುವುದು" ಎಂದು ಹೇಳಿದ್ದಾರೆ.

ಇದರೊಂದಿಗೆ, ಅಮೆರಿಕದ ಬೆದರಿಕೆಗಳು ಯುದ್ಧವನ್ನು ಮತ್ತಷ್ಟು ವಿಸ್ತರಿಸುವುದರ ಹೊರತಾಗಿ ಯಾವುದೇ ಫಲಿತಾಂಶ ನೀಡುವುದಿಲ್ಲ ಎಂದು ಇರಾನ್ ಸೇನೆಯನ್ನು ಉಲ್ಲೇಖಿಸಿ ಅಲ್ಲಿನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ಈ ಬೆಳವಣಿಗೆಗಳು ಟ್ರಂಪ್ ಅವರ ಇತ್ತೀಚಿನ ಎಚ್ಚರಿಕೆಯ ನಂತರ ನಡೆದಿವೆ. ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳ ಮೇಲೆ ಇರಾನ್ ಕ್ಷಿಪಣಿ, ಡ್ರೋನ್ ಅಥವಾ ಇತರ ರೀತಿಯ ದಾಳಿ ನಡೆಸಿದರೆ, ಪ್ರತಿಯಾಗಿ ಅಮೆರಿಕ ಇರಾನ್‌ನ ಸೇತುವೆಗಳು, ವಿದ್ಯುತ್ ಘಟಕಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಲಿದೆ ಎಂದು ಟ್ರಂಪ್ ಹೇಳಿದ್ದಾರೆ.

ಇದಕ್ಕೂ ಮುನ್ನ ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಗರ್ ಖಾಲಿಬಾಫ್ ಕೂಡ ಕಠಿಣ ಎಚ್ಚರಿಕೆ ನೀಡಿದ್ದರು. "ಇರಾನ್‌ಗೆ ತೈಲ ಮಾರಾಟಕ್ಕೆ ಅವಕಾಶ ನೀಡದಿದ್ದರೆ, ಈ ಪ್ರದೇಶದ ಯಾವುದೇ ದೇಶಕ್ಕೂ ತೈಲ ಮಾರಾಟ ಸಾಧ್ಯವಾಗುವುದಿಲ್ಲ" ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಹಾರ್ಮುಜ್ ಜಲಸಂಧಿಯ ಪರಿಸ್ಥಿತಿ ಯುದ್ಧಕ್ಕೂ ಮುಂಚಿನ ಸ್ಥಿತಿಗೆ ಮರಳುವುದಿಲ್ಲ ಹಾಗೂ ಈ ಪ್ರದೇಶದಲ್ಲಿ ಅಮೆರಿಕದ ಸೇನಾ ಉಪಸ್ಥಿತಿ ಇಲ್ಲದಿದ್ದಾಗ ಮಾತ್ರ ನಿಜವಾದ ಭದ್ರತೆ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇರಾನ್–ಅಮೆರಿಕ ನಡುವಿನ ಇತ್ತೀಚಿನ ಸಂಘರ್ಷದ ಬಳಿಕ ಹೋರ್ಮುಜ್ ಜಲಸಂಧಿಯ ಭದ್ರತೆ, ನೌಕಾಯಾನ ಮತ್ತು ತೈಲ ಸಾಗಣೆ ಕುರಿತ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದ್ದು, ಎರಡೂ ರಾಷ್ಟ್ರಗಳ ನಡುವಿನ ವಾಕ್ಸಮರ ಹೊಸ ಹಂತ ತಲುಪಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಲೋಕೋಪಯೋಗಿ ಇಲಾಖೆಯಲ್ಲಿ 'ಲಂಚ'; ವಿದೇಶಿ ಷೇರು ಹೂಡಿಕೆ ಇತ್ಯಾದಿ; ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಿಕ್ಕಿದ್ದೇನು? EDಯಿಂದ ಅಧಿಕೃತ ಹೇಳಿಕೆ

BRICS 2026: ಪುಟಿನ್-ಮೋದಿ ಮಾತುಕತೆ: ಕಪ್ಪು ಸಮುದ್ರದಲ್ಲಿ ಭಾರತೀಯರ ಸುರಕ್ಷತೆಯ ವಿಷಯ ಪ್ರಸ್ತಾಪ ರಷ್ಯಾ ಅಧ್ಯಕ್ಷ ಹೇಳಿದ್ದೇನು?

BRICS 2026: Modi-Putin ಭೇಟಿ; ಆಪ್ತ ಮಿತ್ರನಿಗೆ ಪ್ರಧಾನಿಯಿಂದ ಪವಿತ್ರ, ವಿಶೇಷ ಉಡುಗೊರೆ! Video

ಜಾಗತಿಕ ಭೌಗೋಳಿಕ-ರಾಜಕೀಯ ಅನಿಶ್ಚಿತತೆ: ರಾಜಕೀಯ ಒತ್ತಡ ಹೇರಲು ಆರ್ಥಿಕ ಅಸ್ತ್ರ ಬಳಕೆ, ಬ್ರಿಕ್ಸ್ ಪ್ರತಿಕ್ರಿಯೆ ಏನು? ಇರಾನ್ ಅಧ್ಯಕ್ಷರ ಪ್ರಶ್ನೆ!

ನಿಮ್ಮ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಬಹುದು: ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಹೇಳಿಕೆಗೆ ರಾಹುಲ್​​ ಗಾಂಧಿ ಆಕ್ಷೇಪ