ಸಿಯುಟಾ : ಕಳೆದ 24 ಗಂಟೆಗಳಲ್ಲಿ ಮೊರಾಕೊದಿಂದ ಸ್ಪೇನ್‌ನ ಉತ್ತರ ಆಫ್ರಿಕಾದ ಪ್ರದೇಶವಾದ ಸಿಯುಟಾಗೆ ಸುಮಾರು 60,000 ವಲಸಿಗರು ನುಗ್ಗಿದ್ದಾರೆ ಎಂದು ಸಿಯುಟಾ ಅಧ್ಯಕ್ಷರು ಹೇಳಿದ್ದಾರೆ.
ಸಮುದ್ರದಲ್ಲಿ ಈಜುವ ಮೂಲಕ ನುಸುಳಲು ಯತ್ನಿಸುವಾಗ ಕನಿಷ್ಠ 34 ಮಂದಿ ಸಾವನ್ನಪ್ಪಿದ್ದಾರೆ ಎಂದು ಸಿಯುಟಾ ಅಧ್ಯಕ್ಷರಾದ ಜುವಾನ್ ಜೀಸಸ್ ವಿವಾಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸ್ಪೇನ್ ಫೆಡರಲ್ ಸರ್ಕಾರ, ಗಡಿಯನ್ನು ಪುನಃಸ್ಥಾಪಿಸಲು ಈ ಪ್ರದೇಶಕ್ಕೆ ತನ್ನ ಸೈನ್ಯವನ್ನು ನಿಯೋಜಿಸುವುದಾಗಿ ಘೋಷಿಸಿದೆ. ಜನ ಸಿಯುಟಾದತ್ತ ದಾಂಗುಡಿ ಇಡುತ್ತಿದ್ದು, ಉದ್ವಿಗ್ನತೆ ಹೆಚ್ಚಾಗಿದೆ. ಜನ ಸಮುದ್ರದಲ್ಲಿ ಈಜುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ಪ್ಯಾನಿಷ್‌ನ ಮತ್ತೊಂದು ಎಕ್ಸ್‌ಕ್ಲೇವ್ ಆಗಿರುವ ಸಿಯುಟಾ ಮತ್ತು ಮೆಲಿಲ್ಲಾವನ್ನು ತಲುಪಲು ಪ್ರಯತ್ನಿಸುವಾಗ ಸಮುದ್ರದಲ್ಲಿ ನಿಂತ ವಲಸಿಗರನ್ನು ಮೊರಾಕೊಗೆ ಹಿಂತಿರುಗಿಸಲಾಗುವುದಿಲ್ಲ ಎಂದು ಸ್ಪೇನ್ ನ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ತೀರ್ಪಿನ ಬಳಿಕ ಅಕ್ರಮ ವಲಸೆ ಇನ್ನೂ ತೀವ್ರಗೊಂಡಿದೆ.
ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಈ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಎಲ್ಲಾ ಅಕ್ರಮ ವಲಸಿಗರನ್ನು "ಸಾಧ್ಯವಾದಷ್ಟು ಬೇಗ" ಮೊರಾಕೊಗೆ ಹಿಂದಿರುಗಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಈ ಬೆಳವಣಿಗೆಯ ಬಗ್ಗೆ ಯುರೋಪಿಯನ್ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ, ಕೆಲವರು ಗಡಿ ನಿಯಂತ್ರಣಗಳನ್ನು ಬಿಗಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ.
ಯುಕೆ ಪ್ರಧಾನಿ ಆಂಡಿ ಬರ್ನ್‌ಹ್ಯಾಮ್ ಮತ್ತು ಫ್ರೆಂಚ್ ಅಧ್ಯಕ್ಷರು ಸ್ಪೇನ್‌ಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ಮೊರಾಕೊದ ಉತ್ತರ ಕರಾವಳಿಯಲ್ಲಿರುವ ಸಿಯುಟಾ, ಸ್ಪೇನ್ ಮುಖ್ಯ ಭೂಭಾಗದಿಂದ ಜಿಬ್ರಾಲ್ಟರ್ ಜಲಸಂಧಿಯಿಂದ ಬೇರ್ಪಟ್ಟಿದೆ ಮತ್ತು ಯುರೋಪ್ ತಲುಪಲು ಪ್ರಯತ್ನಿಸುತ್ತಿರುವ ವಲಸಿಗರಿಗೆ ಬಹಳ ಹಿಂದಿನಿಂದಲೂ ಕೇಂದ್ರಬಿಂದುವಾಗಿದೆ.
ಇತ್ತೀಚೆಗೆ ಅಕ್ರಮ ವಲಸೆ ಪ್ರಯತ್ನಗಳು ಹೆಚ್ಚಾದ ನಂತರ ಸ್ಥಳೀಯ ಅಧಿಕಾರಿಗಳು ಸಹಾಯಕ್ಕಾಗಿ ಮ್ಯಾಡ್ರಿಡ್‌ಗೆ ಮನವಿ ಮಾಡಿದ್ದರು, ಆದರೆ ಗುರುವಾರ ಗಡಿ ನಿಯಂತ್ರಣಗಳು ಕುಸಿದಿದ್ದು, ಅಸ್ತವ್ಯಸ್ತವಾಗಿರುವ ದೃಶ್ಯಗಳು ಕಂಡುಬಂದಿವೆ.
ಗುರುವಾರದ ವೀಡಿಯೊಗಳು ಮತ್ತು ಚಿತ್ರಗಳು ಸಾವಿರಾರು ಜನರು ನಗರಕ್ಕೆ ಈಜುತ್ತಿರುವುದನ್ನು ತೋರಿಸುತ್ತವೆ. ಸ್ಪೇನ್ ಈಗ ಸಿಯುಟಾ ಮತ್ತು ಮತೊತಂದು ನಗರವಾದ ಮೆಲಿಲ್ಲಾದಲ್ಲಿ ಭದ್ರತೆಯನ್ನು ಹೆಚ್ಚಿಸಲು ತನ್ನ ಸಶಸ್ತ್ರ ಪಡೆಗಳನ್ನು ನಿಯೋಜಿಸಿದೆ. ಅಲ್ಲಿ ರಾತ್ರಿಯಿಡೀ 300 ರಿಂದ 400 ಅಕ್ರಮ ನುಸುಳುವಿಕೆ ವರದಿಯಾಗಿವೆ.