ಬ್ರಿಟನ್ ನ ಟಾಟಾ ಸ್ಟೀಲ್ ಘಟಕ (ಸಂಗ್ರಹ ಚಿತ್ರ) 
ವಿದೇಶ

ಟಾಟಾ ಸ್ಟೀಲ್ UK ಘಟಕದಲ್ಲಿ ಭಾರೀ ಅಗ್ನಿ ಅವಘಡ!

"ಕಂಪನಿ ಎಲ್ಲಾ ಸಿಬ್ಬಂದಿಯನ್ನು ಆ ಪ್ರದೇಶದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ" ಎಂದು ಟಾಟಾ ಸ್ಟೀಲ್ ಯುಕೆ ತಿಳಿಸಿದೆ.

ಲಂಡನ್: ಕಡಿಮೆ ಇಂಗಾಲದ ಉಕ್ಕು ತಯಾರಿಕಾ ಪ್ರಕ್ರಿಯೆಗೆ ಪರಿವರ್ತನೆಗೊಳ್ಳುತ್ತಿರುವ ಟಾಟಾ ಸ್ಟೀಲ್‌ನ ಯುಕೆ ಘಟಕದಲ್ಲಿ ಬುಧವಾರ ಭಾರೀ ಅಗ್ನಿ ಅವಘಡ ಸಂಭವಿಸಿದೆ ಎಂದು ಗುರುವಾರ ಕಂಪನಿಯ ಪ್ರಕಟಣೆ ತಿಳಿಸಿದೆ.

"ಕಂಪನಿ ಎಲ್ಲಾ ಸಿಬ್ಬಂದಿಯನ್ನು ಆ ಪ್ರದೇಶದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ" ಎಂದು ಟಾಟಾ ಸ್ಟೀಲ್ ಯುಕೆ ತಿಳಿಸಿದೆ.

ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ(ಯುಕೆ ಸಮಯ) ಮಿಡ್ ಮತ್ತು ವೆಸ್ಟ್ ವೇಲ್ಸ್ ಅಗ್ನಿಶಾಮಕ ಸೇವೆಯು, ಪೋರ್ಟ್ ಟಾಲ್ಬೋಟ್ ಸ್ಥಳಕ್ಕೆ ಭೇಟಿ ನೀಡಿ, ಟಾಟಾ ಸ್ಟೀಲ್ ಘಟಕದಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ನಂದಿಸಿತು ಎಂದು ಕಂಪನಿ ತಿಳಿಸಿದೆ.

ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ತುರ್ತು ಸೇವೆಗಳು ಸ್ಥಳೀಯ ತಂಡಗಳೊಂದಿಗೆ ಕೆಲಸ ಮಾಡಿದವು. ಹೆಚ್ಚಿನ ಮಾಹಿತಿಯನ್ನು ನಂತರ ಹಂಚಿಕೊಳ್ಳಲಾಗುವುದು ಎಂದು ಟಾಟಾ ಸ್ಟೀಲ್ ಯುಕೆ ಹೇಳಿದೆ.

ಅಕ್ಟೋಬರ್ 2024 ರಲ್ಲಿ, ಟಾಟಾ ಸ್ಟೀಲ್ ತನ್ನ ಪೋರ್ಟ್ ಟಾಲ್ಬೋಟ್ ನಲ್ಲಿರುವ ಘಟಕದಲ್ಲಿ 3.2 MTPA ಎಲೆಕ್ಟ್ರಿಕ್ ಆರ್ಕ್ ಫರ್ನೇಸ್ ನಿರ್ಮಾಣ ಬಾಕಿ ಇರುವ ಕಾರಣ ಉಕ್ಕಿನ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಖಾತೆಗಾಗಿ ಫೈಟ್: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ರಾಮಲಿಂಗಾರೆಡ್ಡಿ!

ಮುಸ್ಲಿಂ ಸಮುದಾಯಕ್ಕೆ 5 ಸಚಿವ ಸ್ಥಾನ ಕೊಡಿ, ಇಲ್ಲವೆ ಪರಿಣಾಮ ನೆಟ್ಟಗಿರಲ್ಲ: ಕಾಂಗ್ರೆಸ್‌ಗೆ ಮೌಲ್ವಿಗಳ ನೇರ ಎಚ್ಚರಿಕೆ

ಕಲಬುರಗಿ: ಪೋಷಕರ ಸಣ್ಣ ನಿರ್ಲಕ್ಷ್ಯಕ್ಕೆ ಬಾಲಕ ಬಲಿ; ಕಾರಿನೊಳಗೆ ಉಸಿರುಗಟ್ಟಿ 3 ವರ್ಷದ ಮಗು ಸಾವು!

ಲಂಚ ನೀಡಲಿಲ್ಲ ಎಂದು ಮತ್ತೆ ಬಾಲಕಿಯ ಕಾಲು ಮುರಿದ ವೈದ್ಯರು: ತನಿಖೆಗೆ ಆದೇಶ

ಜಾತಿ, ಧರ್ಮ ಯಾವುದೇ ಪ್ರಭಾವಕ್ಕೂ ಮಣಿಯಬೇಡಿ: ಪಾರದರ್ಶಕವಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಡಿಕೆಶಿ ಸೂಚನೆ​​

SCROLL FOR NEXT