ಡೊನಾಲ್ಡ್ ಟ್ರಂಪ್  
ವಿದೇಶ

ರಿಲಯನ್ಸ್ ಇಂಡಸ್ಟ್ರೀಸ್ ಜೊತೆ ಅಮೆರಿಕದ ತೈಲ ಶುದ್ಧೀಕರಣ ಘಟಕ ಒಪ್ಪಂದ: Donald Trump ಘೋಷಣೆ

ಇದು ಐತಿಹಾಸಿಕ 300 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದ — ಅಮೆರಿಕದ ಇತಿಹಾಸದಲ್ಲೇ ಅತಿ ದೊಡ್ಡದು ಎಂದು ಟ್ರಂಪ್ ಬರೆದಿದ್ದಾರೆ. ಈ ಯೋಜನೆ ತನ್ನ ಇಂಧನ ನೀತಿಯ ಪ್ರಮುಖ ಭಾಗವಾಗಿದೆ ಎಂದು ಅವರು ಹೇಳಿದ್ದು, ಯೋಜನೆಯ ವಿವರಗಳನ್ನು ನೀಡಿಲ್ಲ.

ವಾಷಿಂಗ್ಟನ್: ಭಾರತದ ಇಂಧನ ದಿಗ್ಗಜ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಅಮೆರಿಕದಲ್ಲಿ ಅರ್ಧ ಶತಮಾನ ಬಳಿಕ ನಿರ್ಮಿಸುತ್ತಿರುವ ಮೊದಲ ದೊಡ್ಡ ತೈಲ ಶುದ್ಧೀಕರಣ ಘಟಕ ಯೋಜನೆಗೆ ನಮ್ಮ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಟ್ರಂಪ್ ತಮ್ಮ Truth Social ವೇದಿಕೆಯ ಮೂಲಕ ಈ ಘೋಷಣೆ ಮಾಡಿದರು. America First Refining ಎಂಬ ಕಂಪನಿ Port of Brownsville, Texas ನಲ್ಲಿ ಹೊಸ ಶುದ್ಧೀಕರಣ ಘಟಕ ನಿರ್ಮಿಸಲಿದೆ ಎಂದು ಅವರು ಹೇಳಿದರು.

ಇದು ಐತಿಹಾಸಿಕ 300 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದ - ಅಮೆರಿಕದ ಇತಿಹಾಸದಲ್ಲೇ ಅತಿ ದೊಡ್ಡದು ಎಂದು ಟ್ರಂಪ್ ಬರೆದಿದ್ದಾರೆ. ಈ ಯೋಜನೆ ತನ್ನ ಇಂಧನ ನೀತಿಯ ಪ್ರಮುಖ ಭಾಗವಾಗಿದೆ ಎಂದು ಅವರು ಹೇಳಿದ್ದು, ಯೋಜನೆಯ ವಿವರಗಳನ್ನು ನೀಡಿಲ್ಲ.

ನಮ್ಮ ಭಾರತದ ಪಾಲುದಾರರಿಗೆ ಮತ್ತು ಅವರ ಅತಿದೊಡ್ಡ ಖಾಸಗಿ ಇಂಧನ ಕಂಪನಿ ರಿಲಯನ್ಸ್‌ಗೆ ಈ ಮಹತ್ವದ ಹೂಡಿಕೆಗಾಗಿ ಧನ್ಯವಾದಗಳು ಎಂದು ಅವರು ತಿಳಿಸಿದ್ದಾರೆ. ಆದರೆ ಕಂಪನಿಯ ನಿಖರ ಹೂಡಿಕೆ ವಿವರವನ್ನು ಅವರು ಸ್ಪಷ್ಟಪಡಿಸಲಿಲ್ಲ.

ರಿಲಯನ್ಸ್ ಇಂಡಸ್ಟ್ರೀಸ್ ಭಾರತದ ಅತಿದೊಡ್ಡ ಖಾಸಗಿ ಸಂಸ್ಥೆಯಾಗಿದ್ದು, ಜಾಮ್ನಗರ ರಿಫೈನರಿ ವಿಶ್ವದ ಅತಿದೊಡ್ಡ ತೈಲ ಶುದ್ಧೀಕರಣ ಘಟಕವಾಗಿದೆ.

ಅಮೆರಿಕ ಫಸ್ಟ್ ರಿಫೈನಿಂಗ್ ವೆಬ್‌ಸೈಟ್ ಪ್ರಕಾರ, ಈ ಯೋಜನೆ ಎಲಿಮೆಂಟ್ ಫುಯೆಲ್ಸ್ ಸಂಸ್ಥೆಯ ಯೋಜನೆಯಾಗಿದ್ದು, 2024ರಲ್ಲಿ ಬ್ರೌನ್ಸ್‌ವಿಲ್‌ನಲ್ಲಿ 3ರಿಂದ 4 ಬಿಲಿಯನ್ ಡಾಲರ್ ವೆಚ್ಚದಲ್ಲಿ ಶುದ್ಧೀಕರಣ ಘಟಕ ನಿರ್ಮಿಸಲು ಮೊದಲ ಬಾರಿ ಘೋಷಿಸಿತ್ತು.

ಈ ಶುದ್ಧೀಕರಣ ಘಟಕ ಗಲ್ಫ್ ಆಫ್ ಮೆಕ್ಸಿಕೊ ಪ್ರದೇಶದಲ್ಲಿ 1970ರ ದಶಕದ ಬಳಿಕ ನಿರ್ಮಾಣವಾಗುವ ಮೊದಲ ರಿಫೈನರಿ ಆಗಲಿದೆ. ಜೊತೆಗೆ, ಶೇಕಡಾ100ರಷ್ಟು ಅಮೆರಿಕದ ಶೇಲ್ ತೈಲವನ್ನು ಸಂಸ್ಕರಿಸಲು ವಿನ್ಯಾಸಗೊಳಿಸಲಾದ ಏಕೈಕ ಘಟಕವಾಗಲಿದೆ ಎಂದು ಕಂಪನಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

NALSAR ವಿದ್ಯಾರ್ಥಿಗಳ ನಿಷೇಧ ಆದೇಶಕ್ಕೆ BCI ಅಧ್ಯಕ್ಷರ ಕ್ಷಮೆ!

ಪಾಕಿಸ್ತಾನ ಶೇ.4 ರಷ್ಟು ಹಿಂದೂಗಳನ್ನು ಸಹಿಸಿಕೊಳ್ತಿದೆ: ಪಾಕ್ ಅಧ್ಯಕ್ಷ 10% Zardari ಉದ್ಧಟತನದ ಹೇಳಿಕೆ

ಹಳದಿ ರೇಷ್ಮೆ ಧೋತಿ: ಅಯೋಧ್ಯೆ ರಾಮ ಮಂದಿರದ ಅರ್ಚಕರಿಗೆ ಹೊಸ ಡ್ರೆಸ್ ಕೋಡ್

ತಂದೆ ಎಲ್ಲಿದ್ದಾರೆ ಅಂತ ತಾಯಿನ ಕೇಳಿ; ವಿಧಾನಸಭೆಯಲ್ಲಿ ಹುಡುಕಬೇಡಿ; CM Vijay ಬಗ್ಗೆ ಬಿಜೆಪಿ ಅಧ್ಯಕ್ಷರ ಹೇಳಿಕೆ ವಿವಾದಕ್ಕೆ ಗುರಿ!

‘ರಜಾಕರ್‌ಗಳಿಂದ ನಮ್ಮನ್ನು ರಕ್ಷಿಸಿದ್ದು RSS ಅಲ್ಲ, ಭಾರತೀಯ ಸೇನೆ’: BL ಸಂತೋಷ್ ಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು!