ಹಾರ್ಮುಜ್ ಜಲಸಂಧಿ 
ವಿದೇಶ

Iran-Israel War: ಹಾರ್ಮುಜ್ ಜಲಸಂಧಿ ದಾಟಲು ಎರಡು ಭಾರತೀಯ ಎಲ್‌ಪಿಜಿ ಟ್ಯಾಂಕರ್‌ಗಳು ಸಜ್ಜು!

ಇರಾನ್ ಮೇಲೆ ಯುಎಸ್-ಇಸ್ರೇಲ್ ದಾಳಿ ನಂತರ ಪಶ್ಚಿಮ ಏಷ್ಯಾದಲ್ಲಿ ಯುದ್ಧ ಪ್ರಾರಂಭವಾದಾಗ ಹಾರ್ಮುಜ್ ಜಲಸಂಧಿಯಲ್ಲಿ 28 ಭಾರತೀಯ ಹಡಗುಗಳು ಸಿಲುಕಿದ್ದವು.

ಎರಡು ಭಾರತೀಯ ಎಲ್‌ಪಿಜಿ ಟ್ಯಾಂಕರ್‌ಗಳಾದ ಪೈನ್ ಗ್ಯಾಸ್ ಮತ್ತು ಜಗ್ ವಸಂತ್ ಪರ್ಷಿಯನ್ ಕೊಲ್ಲಿಯಿಂದ ಭಾರತಕ್ಕೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿವೆ ಎಂದು ಹಡಗು ಟ್ರ್ಯಾಕಿಂಗ್ ದತ್ತಾಂಶಗಳು ತೋರಿಸಿವೆ. ಇರಾನಿನ ಅಧಿಕಾರಿಗಳಿಗೆ ತಮ್ಮ ಗುರುತನ್ನು ಸ್ಪಷ್ಟಪಡಿಸುವ ಸಲುವಾಗಿ, ಸೋಮವಾರ ಮಧ್ಯಾಹ್ನ ಅವೆರಡು ಇರಾನ್‌ನ ಲಾರಕ್ ಮತ್ತು ಕ್ವೆಶ್ಮ್ ದ್ವೀಪಗಳ ಬಳಿ ಇರುವುದು ತಿಳಿದುಬಂದಿದೆ. ಇವೆರಡು ಶೀಘ್ರವೇ ಯುದ್ಧಪೀಡಿತ ಹಾರ್ಮುಜ್ ಜಲಸಂಧಿಯನ್ನು ದಾಟುವ ನಿರೀಕ್ಷೆಯಿದೆ.

ಮಧ್ಯಪ್ರಾಚ್ಯದಲ್ಲಿ ಯುದ್ಧದ ನಂತರ ಪರ್ಷಿಯನ್ ಕೊಲ್ಲಿಯಲ್ಲಿ ಸಿಲುಕಿಕೊಂಡಿದ್ದ 22 ಭಾರತೀಯ ಹಡಗುಗಳ ಪೈಕಿ ಈ ಎರಡು ಹಡಗುಗಳು ಸೇರಿವೆ. ಇರಾನ್ ಮತ್ತು ಒಮನ್ ನಡುವಿನ ಕಿರಿದಾದ ಜಲಮಾರ್ಗವಾದ ಹಾರ್ಮುಜ್ ಜಲಸಂಧಿಯು ತೈಲ ಮತ್ತು ಅನಿಲ ಉತ್ಪಾದಿಸುವ ಗಲ್ಫ್ ದೇಶಗಳನ್ನು ವಿಶ್ವದ ಇತರ ಭಾಗಗಳಿಗೆ ಸಂಪರ್ಕಿಸುತ್ತದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ನಂತರ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ಇರಾನ್ ಕೂಡ ಪ್ರತಿದಾಳಿ ನಡೆಸುತ್ತಿದೆ.

ಹಡಗು ಟ್ರ್ಯಾಕಿಂಗ್ ದತ್ತಾಂಶವು ಸೋಮವಾರದಂದು ಈ ಎರಡು ಹಡಗುಗಳು ಭಾರತೀಯ ಬಂದರುಗಳಿಗೆ ತಲುಪುವ ಮುನ್ನ ಹಾರ್ಮುಜ್ ಜಲಸಂಧಿಯನ್ನು ದಾಟಬಹುದು ಎಂದು ತೋರಿಸಿದೆ. ಇದಕ್ಕೂ ಮೊದಲು, ಸುಮಾರು 92,712 ಟನ್ ಎಲ್‌ಪಿಜಿ ಅಥವಾ ದೇಶದ ಒಂದು ದಿನದ ಬಳಸುವ ಅಡುಗೆ ಅನಿಲ ಹೊತ್ತ ಎಂಟಿ ಶಿವಾಲಿಕ್ ಮತ್ತು ಎಂಟಿ ನಂದಾ ದೇವಿ ಸುರಕ್ಷಿತವಾಗಿ ಭಾರತದ ತೀರವನ್ನು ತಲುಪಿವೆ.

ಇರಾನ್ ಮೇಲೆ ಯುಎಸ್-ಇಸ್ರೇಲ್ ದಾಳಿಯ ನಂತರ ಪಶ್ಚಿಮ ಏಷ್ಯಾದಲ್ಲಿ ಯುದ್ಧ ಪ್ರಾರಂಭವಾದಾಗ ಹಾರ್ಮುಜ್ ಜಲಸಂಧಿಯಲ್ಲಿ 28 ಭಾರತೀಯ ಹಡಗುಗಳು ಸಿಲುಕಿದ್ದವು. ಇವುಗಳಲ್ಲಿ 24 ಜಲಸಂಧಿಯ ಪಶ್ಚಿಮ ಭಾಗದಲ್ಲಿ ಮತ್ತು ನಾಲ್ಕು ಪೂರ್ವ ಭಾಗದಲ್ಲಿದ್ದವು.

ಕಳೆದ ಕೆಲವು ದಿನಗಳಲ್ಲಿ, ಎರಡೂ ಭಾಗಗಳಿಂದ ಎರಡು ಹಡಗುಗಳು ಸುರಕ್ಷಿತವಾಗಿ ಜಲಸಂಧಿಯನ್ನು ದಾಟಿ ಸಾಗುವಲ್ಲಿ ಯಶಸ್ವಿಯಾಗಿವೆ. ಎಲ್‌ಪಿಜಿ ವಾಹಕ ಶಿವಾಲಿಕ್ ಮಾರ್ಚ್ 16 ರಂದು ಗುಜರಾತ್‌ನ ಮುಂದ್ರಾ ತಲುಪಿದರೆ, ಮತ್ತೊಂದು ಎಲ್‌ಪಿಜಿ ಟ್ಯಾಂಕರ್ ನಂದಾ ದೇವಿ ಮರುದಿನ ಗುಜರಾತ್‌ನ ಕಾಂಡ್ಲಾ ಬಂದರನ್ನು ತಲುಪಿತು. ಈ ಎರಡು ಎಲ್‌ಪಿಜಿ ವಾಹಕಗಳು ಮಾರ್ಚ್ 13 ರಂದು ತಮ್ಮ ಪ್ರಯಾಣವನ್ನು ಪ್ರಾರಂಭಿಸಿ ಮಾರ್ಚ್ 14ರ ಆರಂಭದಲ್ಲಿ ಹಾರ್ಮುಜ್ ಜಲಸಂಧಿಯನ್ನು ದಾಟಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!