ಡೊನಾಲ್ಡ್ ಟ್ರಂಪ್ 
ವಿದೇಶ

ಟ್ರಂಪ್‌ಗೆ ಮತ್ತೊಂದು ಜಲಾಘಾತ: ಇರಾನ್ ಪರ ಯುದ್ಧಕ್ಕೆ ಯೆಮೆನ್ ಎಂಟ್ರಿ; ಇಸ್ರೇಲ್ ಮೇಲೆ ಮೊದಲ ಕ್ಷಿಪಣಿ ಹಾರಿಸಿದ ಹೌತಿಗಳು!

ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಇಂದು ಮಧ್ಯಪ್ರಾಚ್ಯ ಯುದ್ಧ ಪ್ರಾರಂಭವಾದ ಒಂದು ತಿಂಗಳ ನಂತರ ಇಸ್ರೇಲ್ ಮೇಲೆ ತಮ್ಮ ಮೊದಲ ದಾಳಿಯನ್ನು ಪ್ರಾರಂಭಿಸಿರುವುದಾಗಿ ಹೇಳಿಕೊಂಡಿದ್ದಾರೆ. ಯೆಮೆನ್‌ ದಾಳಿಯನ್ನು ಇಸ್ರೇಲ್ ಮಿಲಿಟರಿ ತಡೆಹಿಡಿಯುತ್ತಿದೆ ಎಂದು ಹೇಳಿದೆ.

ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಇಂದು ಮಧ್ಯಪ್ರಾಚ್ಯ ಯುದ್ಧ ಪ್ರಾರಂಭವಾದ ಒಂದು ತಿಂಗಳ ನಂತರ ಇಸ್ರೇಲ್ ಮೇಲೆ ತಮ್ಮ ಮೊದಲ ದಾಳಿಯನ್ನು ಪ್ರಾರಂಭಿಸಿರುವುದಾಗಿ ಹೇಳಿಕೊಂಡಿದ್ದಾರೆ. ಯೆಮೆನ್‌ ದಾಳಿಯನ್ನು ಇಸ್ರೇಲ್ ಮಿಲಿಟರಿ ತಡೆಹಿಡಿಯುತ್ತಿದೆ ಎಂದು ಹೇಳಿದೆ. ತಮ್ಮ ಮಿತ್ರ ಇರಾನ್ ಮೇಲಿನ ದಾಳಿ ಮುಂದುವರಿದರೆ ಅಥವಾ ಹೆಚ್ಚಿನ ದೇಶಗಳು ಸಂಘರ್ಷಕ್ಕಿಳಿದರೇ ತಾವು ಪಶ್ಚಿಮ-ಏಷ್ಯಾ ಯುದ್ಧಕ್ಕೆ ಧುಮುಕುವುದಾಗಿ ಹೌತಿ ಪಡೆ ಈ ಹಿಂದೆ ಎಚ್ಚರಿಸಿತ್ತು.

ಹೌತಿ ಪಡೆ ಇಸ್ರೇಲಿ ಮಿಲಿಟರಿ ನೆಲೆಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ಹೌತಿ ವಕ್ತಾರ ಯಾಹ್ಯಾ ಸಾರಿ X ವೀಡಿಯೊ ಬಿಡುಗಡೆ ಮಾಡಿದ್ದಾರೆ. ಈ ಗುಂಪು ಉತ್ತರ ಯೆಮೆನ್‌ನ ಹೆಚ್ಚಿನ ಭಾಗವನ್ನು ನಿಯಂತ್ರಿಸುತ್ತದೆ. ಗಾಜಾ ಯುದ್ಧದ ಸಮಯದಲ್ಲಿ, ಅವರು ಡ್ರೋನ್‌ಗಳು ಮತ್ತು ಕ್ಷಿಪಣಿಗಳೊಂದಿಗೆ ಇಸ್ರೇಲ್ ಮೇಲೆ ಪದೇ ಪದೇ ದಾಳಿ ಮಾಡಿದ್ದರು.

ಯೆಮೆನ್‌ನಿಂದ ಇಸ್ರೇಲ್ ಕಡೆಗೆ ಕ್ಷಿಪಣಿಯನ್ನು ಹಾರಿಸಲಾಗಿದ್ದು ನಮ್ಮ ವಾಯುರಕ್ಷಣಾ ಪಡೆಗಳು ಅದನ್ನು ತಡೆಯುವ ಕೆಲಸ ಮಾಡುತ್ತಿವೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಇಸ್ರೇಲ್‌ನಲ್ಲಿ ಯಾವುದೇ ಸಾವುನೋವುಗಳು ಅಥವಾ ಹಾನಿಯ ವರದಿಗಳಿಲ್ಲ. ಕ್ಷಿಪಣಿಯನ್ನು ತಡೆಹಿಡಿಯಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಹೌತಿಗಳು ನೇರ ಮಿಲಿಟರಿ ಹಸ್ತಕ್ಷೇಪಕ್ಕೆ ಸಂಪೂರ್ಣವಾಗಿ ಸಿದ್ಧರಿದ್ದೇವೆ ಎಂದು ಹೇಳಿದರು. ಯಾವುದೇ ಇತರ ದೇಶವು ಯುಎಸ್-ಇಸ್ರೇಲ್ ಸಂಘರ್ಷಕ್ಕೆ ಸೇರಿದರೆ ಅಥವಾ ಪ್ರತಿಕೂಲ ಕಾರ್ಯಾಚರಣೆಗಳಿಗೆ ಕೆಂಪು ಸಮುದ್ರವನ್ನು ಬಳಸಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಯುಎಸ್, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಈ ಸಮಯದಲ್ಲಿ ಕೆಂಪು ಸಮುದ್ರವು ಅತ್ಯಂತ ಮಹತ್ವದ್ದಾಗಿದೆ. ಸೌದಿ ಅರೇಬಿಯಾ ತನ್ನ ತೈಲ ರಫ್ತಿನ ಹೆಚ್ಚಿನ ಭಾಗವನ್ನು ಯಾನ್ಬು ಬಂದರಿಗೆ ತಿರುಗಿಸಿದೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಮೂಲಕ ಗಲ್ಫ್ ದೇಶಗಳಿಗೆ ದಿಗ್ಭಂದನ ಹಾಕಿದೆ. ಇದೀಗ ಯೆಮೆನ್ ತನ್ನ ಹಿಡಿತದಲ್ಲಿರುವ ಬಾಬ್ ಎಲ್-ಮಂಡೇಬ್ 'ಬಂದ್' ಮಾಡಿದರೇ ಇದು ಜಗತ್ತಿಗೆ ಮತ್ತಷ್ಟು ಸಂಕಷ್ಟ ಸೃಷ್ಟಿಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಾವಣಗೆರೆ: ಧಮ್ ತೋರಿಸಲು ಹೋಗಿದ್ದ ಪ್ರದೀಪ್ ಈಶ್ವರ್​ಗೆ ಚಪ್ಪಲಿ-ಪೊರಕೆ ತೋರಿಸಿ, ಹುಚ್ಚ...ಹುಚ್ಚ... ಅಂತ ಕೂಗಿದ BJP ಕಾರ್ಯಕರ್ತರು!

TMC ಸರ್ಕಾರದ ವಿರುದ್ಧ ಅಮಿತ್ ಶಾ 'ಚಾರ್ಜ್ ಶೀಟ್' ಬಿಡುಗಡೆ: ಬಂಗಾಳ ಚುನಾವಣೆ ದೇಶದ ಭದ್ರತೆಗಾಗಿ ಒಂದು ಯುದ್ಧ!

PSL 2026: ಪ್ರೇಕ್ಷಕರೇ ಇಲ್ಲ ಅಂದ್ರೆ ಕೂಗಾಡೋ ಶಬ್ದ ಎಲ್ಲಿಂದ ಬರುತ್ತೆ..: PCB ವಿರುದ್ಧ ಪಾಕ್ ಅಭಿಮಾನಿಗಳೇ ಕಿಡಿ, Video

ಇರಾನ್ ಡ್ರೋನ್ ದಾಳಿ: UAE ಕೈಗಾರಿಕಾ ಪ್ರದೇಶದಲ್ಲಿ ಭಾರೀ ಬೆಂಕಿ: ಐವರು ಭಾರತೀಯರಿಗೆ ಗಾಯ

ಬೆಂಗಳೂರು ಉತ್ತರ ನಗರ ಪಾಲಿಕೆಯ ಚೊಚ್ಚಲ ಬಜೆಟ್ ಮಂಡನೆ; ಘನತ್ಯಾಜ್ಯ ನಿರ್ವಹಣೆಗೆ ಒತ್ತು

SCROLL FOR NEXT