ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

'ಇರಾನ್ ಡೀಲ್ ತಿರಸ್ಕರಿಸಿದರೆ ಬಾಂಬ್ ದಾಳಿ ಆರಂಭ, ಇದು ಅತ್ಯಂತ ಭೀಕರವಾಗಿರುತ್ತದೆ': ಟ್ರಂಪ್ ಎಚ್ಚರಿಕೆ

ಟೆಹ್ರಾನ್ ತನ್ನ ಷರತ್ತುಗಳನ್ನು ಒಪ್ಪಿಕೊಂಡರೆ 'ಎಪಿಕ್ ಫ್ಯೂರಿ'ಯನ್ನು ಕೊನೆಗೊಳಿಸುವುದಾಗಿ ಮತ್ತು ಹಾರ್ಮುಜ್ ಜಲಸಂಧಿ ಮೇಲಿನ ದಿಗ್ಬಂಧನವನ್ನು ತೆಗೆದುಹಾಕುವುದಾಗಿ ಟ್ರಂಪ್ ಭರವಸೆ ನೀಡಿದ್ದಾರೆ.

ವಾಷಿಂಗ್ಟನ್: ಇರಾನ್ ಶಾಂತಿ ಒಪ್ಪಂದ ಒಪ್ಪಿಕೊಳ್ಳದಿದ್ದರೆ ಮತ್ತೆ ಬಾಂಬ್ ದಾಳಿ ನಡೆಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬುಧವಾರ ತಮ್ಮ ಟ್ರೂತ್ ಸೋಷಿಯಲ್ ಪೋಸ್ಟ್‌ನಲ್ಲಿ ಬೆದರಿಕೆ ಹಾಕಿದ್ದಾರೆ.

ಟೆಹ್ರಾನ್ ತನ್ನ ಷರತ್ತುಗಳನ್ನು ಒಪ್ಪಿಕೊಂಡರೆ 'ಎಪಿಕ್ ಫ್ಯೂರಿ'ಯನ್ನು ಕೊನೆಗೊಳಿಸುವುದಾಗಿ ಮತ್ತು ಹಾರ್ಮುಜ್ ಜಲಸಂಧಿ ಮೇಲಿನ ದಿಗ್ಬಂಧನವನ್ನು ತೆಗೆದುಹಾಕುವುದಾಗಿ ಟ್ರಂಪ್ ಭರವಸೆ ನೀಡಿದ್ದಾರೆ.

"ಇರಾನ್ ತಾನು ಒಪ್ಪಿಕೊಂಡಿರುವುದನ್ನು ನೀಡಲು ಒಪ್ಪಿಕೊಂಡರೆ ಈಗಾಗಲೇ ಖ್ಯಾತಿ ಪಡೆದ ಎಪಿಕ್ ಫ್ಯೂರಿ(ಇರಾನ್ ವಿರುದ್ಧದ ಕಾರ್ಯಾಚರಣೆ) ಕೊನೆಗೊಳ್ಳುತ್ತದೆ ಮತ್ತು ಹೆಚ್ಚು ಪರಿಣಾಮಕಾರಿಯಾದ ಹಾರ್ಮುಜ್ ಜಲಸಂಧಿಯ ಮೇಲಿನ ದಿಗ್ಬಂಧನ ತೆರವುಗೊಳಿಸಿ ಇರಾನ್ ಸೇರಿದಂತೆ ಎಲ್ಲರಿಗೂ ಮುಕ್ತವಾಗಿರಲು ಅನುವು ಮಾಡಿಕೊಡುತ್ತದೆ. ಅವರು ಒಪ್ಪದಿದ್ದರೆ, ಬಾಂಬ್ ದಾಳಿ ಪ್ರಾರಂಭವಾಗುತ್ತದೆ ಮತ್ತು ಅದು ದುಃಖಕರವೆಂದರೆ, ಮೊದಲಿಗಿಂತಲೂ ಅತ್ಯಂತ ಭೀಕರವಾಗಿರುತ್ತದೆ" ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ಈ ಮಧ್ಯೆ "ಅಮೆರಿಕ ಯೋಜನೆ ಮತ್ತು ಪ್ರಸ್ತಾವನೆ ಇನ್ನೂ ಪರಿಶೀಲನೆಯಲ್ಲಿದೆ" ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕೈ ಅವರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ ಮತ್ತು ಟೆಹ್ರಾನ್ ತನ್ನ ನಿಲುವನ್ನು "ತನ್ನ ಅಭಿಪ್ರಾಯಗಳನ್ನು ಅಂತಿಮಗೊಳಿಸಿದ ನಂತರ" ಪಾಕಿಸ್ತಾನಕ್ಕೆ ತಿಳಿಸುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯಸಭೆಯಲ್ಲಿ ಖರ್ಗೆ ರಣಕಹಳೆ: ಪ್ರತಿಪಕ್ಷಗಳ ಭಾವನೆಗಳನ್ನು ಅಮಿತ್ ಶಾಗೆ ತಿಳಿಸಿ – ರಿಜಿಜುಗೆ ಸಭಾಪತಿ ರಾಧಾಕೃಷ್ಣನ್ ಸೂಚನೆ

ಪ್ರಧಾನಿ ಮೋದಿಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ದೂರವಾಣಿ ಕರೆ; ಪಶ್ಚಿಮ ಏಷ್ಯಾ ಬಿಕ್ಕಟ್ಟು, ಕಾರ್ಯತಂತ್ರದ ಸಂಬಂಧಗಳ ಬಗ್ಗೆ ಚರ್ಚೆ

ಪ್ರತಿಭಟನೆ ನಡೆಸಿದಾಕ್ಷಣ ಜೆನ್ ಝೀ ಗಳು ರಾಷ್ಟ್ರವಿರೋಧಿಯಾಗುವುದಿಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್

ಕಸಕ್ಕೆ ಎಸೆದಿದ್ದ ಲಾಟರಿ ಟಿಕೆಟ್ ಗೆ ಬಂಪರ್ ಬಹುಮಾನ! ಕೊನೆಗೂ ಹುಡುಕಾಡಿ ಬರೋಬ್ಬರಿ 10.9 ಕೋಟಿ ರೂ ಗೆದ್ದ ಮಹಿಳೆ!

UK ಮಕ್ಕಳ ಮೇಲಿನ ಅತ್ಯಾಚಾರ, ಕಳ್ಳಸಾಗಣೆ ಪ್ರಕರಣದ ಆರೋಪಿ ಈಗ ಪಿಒಕೆ ಸಂಸದ!